Asianet Suvarna News Asianet Suvarna News

ಮಂಗಳ ಗ್ರಹದಲ್ಲಿದೆ ಹಿಮಗಡ್ಡೆ ಕೊಳ

ಮಂಗಳ ಗ್ರಹದಲ್ಲಿ ಸುಮಾರು 82 ಕಿ.ಮೀ ಅಗಲ ಹಾಗೂ 2 ಕಿ.ಮೀ ಆಳದ ಕೆರೆ ಪತ್ತೆ |  ಕೆರೆಯ ಚಿತ್ರ ಸೆರೆ ಹಿಡಿದ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಮಾರ್ಸ್‌ ಎಕ್ಸ್‌ಪ್ರೆಸ್‌ | ಈ ಕೆರೆಗೆ ಕೊರೊಲೆವ್‌ ಎಂದು ಹೆಸರಿಡಲಾಗಿದೆ. ಕೆರೆಯ ತುಂಬ ಹಿಮಗಡ್ಡೆ ಗೋಚರ |  ಈ ಹಿಮಗಡ್ಡೆಯ ಮೇಲಿನ ಗಾಳಿಯ ಪದರಕ್ಕೆ ಕೋಲ್ಡ್‌ ಟ್ರಾಪ್‌ ಎಂಬ ಹೆಸರು |  ಕೆರೆಯಲ್ಲಿರುವ ಮಂಜುಗಡ್ಡೆ ಕರಗದಂತೆ ಕೋಲ್ಡ್‌ ಟ್ರಾಪ್‌ ಪದರ ತಡೆಯುತ್ತದೆ. 

Evidence of lake beneath Mars surface
Author
Bengaluru, First Published Dec 28, 2018, 8:03 AM IST

ನವದೆಹಲಿ (ಡಿ. 28): ಕೆಂಪು ಗ್ರಹ ಮಂಗಳನಲ್ಲಿ ನೀರಿನ ಅಂಶ ಇದೆಯೇ ಎಂದು ಹಲವಾರು ವರ್ಷಗಳಿಂದ ವಿಜ್ಞಾನಿಗಳು ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಈವರೆಗೆ ಹಲವು ಬಾರಿ ನೀರಿನ ಕುರುಹು ಮಾತ್ರ ಕಂಡುಬಂದಿದೆ. ಆದರೆ ನೀರಿನ ಇರುವಿಕೆಯನ್ನು ಸಾಬೀತುಪಡಿಸುವ ಯಾವುದೇ ಪುರಾವೆ ದೊರೆತಿರಲಿಲ್ಲ. ಇದೀಗ ಆ ಗ್ರಹದಲ್ಲಿ ಸುಮಾರು 82 ಕಿ.ಮೀ ಅಗಲ ಹಾಗೂ 2 ಕಿ.ಮೀ ಆಳದ ಕೆರೆಯೊಂದು ಪತ್ತೆಯಾಗಿದೆ.

ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಮಾರ್ಸ್‌ ಎಕ್ಸ್‌ಪ್ರೆಸ್‌ ನೌಕೆ ಈ ಕೆರೆಯ ಚಿತ್ರವನ್ನು ಸೆರೆಹಿಡಿದಿದ್ದು ಸಂಸ್ಥೆಯು ಈ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಕೆರೆಗೆ ಕೊರೊಲೆವ್‌ ಎಂದು ಹೆಸರಿಡಲಾಗಿದೆ. ಕೆರೆಯ ತುಂಬ ಹಿಮಗಡ್ಡೆ ಕಂಡುಬಂದಿದ್ದು, ಈ ಹಿಮಗಡ್ಡೆಯ ಮೇಲಿನ ಪದರವನ್ನು ಕೋಲ್ಡ್‌ ಟ್ರಾಪ್‌ ಎಂದು ಕರೆಯಲಾಗಿದೆ.
 

Follow Us:
Download App:
  • android
  • ios