ಏನಾಯ್ತು ಚಂದ್ರನಿಗೆ?, ನಿಂತಲ್ಲೇ ನಿಂತಿದೆ ಸುಮ್ಮನೆ! ಕೆಟ್ಟು ನಿಂತ ನಾಸಾದ ಚಂದ್ರ ಎಕ್ಸರೇ ಟೆಲಿಸ್ಕೋಪ್! ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಚಂದ್ರ ಟೆಲಿಸ್ಕೋಪ್! 1999ರಲ್ಲಿ ವಿಶ್ವದ ಅಧ್ಯಯನಕ್ಕೆ ಹಾರಿ ಬಿಡಲಾಗಿದ್ದ ಚಂದ್ರ ಎಕ್ಸರೇ!ತಾಂತ್ರಿಕ ದೋಷ ಶೀಘ್ರ ನಿವಾರಣೆಗೆ ನಾಸಾದ ಭರವಸೆ!

ವಾಷಿಂಗ್ಟನ್(ಅ.13): ಬ್ರಹ್ಮಾಂಡದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಚಂದ್ರ ಎಕ್ಸರೇ ಟೆಲಿಸ್ಕೋಪ್ ಕಳೆದ ಕೆಲವು ದಿನಗಳ ಹಿಂದೆ ತಾಂತ್ರಿಕ ದೋಷಕ್ಕೆ ಗುರಿಯಾಗಿದೆ. ಆದರೆ ಈ ದೋಷವನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ನಾಸಾ ಭರವಸೆ ನೀಡಿದೆ. 

1999 ರಲ್ಲಿ ವಿಶ್ವ ಅಧ್ಯಯನಕ್ಕಾಗಿ ಕಳುಹಿಸಲಾಗಿದ್ದ ಚಂದ್ರ ಎಕ್ಸರೇ ಟೆಲಿಸ್ಕೋಪ್, ಕಳೆದ ಕೆಲವು ದಿನಗಳಿಂದ ತಾಂತ್ರಿ ತೊಂದರೆಗಳಿಂದ ಬಳಲುತ್ತಿದೆ. ವಿಶ್ವವನ್ನು ಹೈ ಎನರ್ಜಿ ಲೈಟ್ ತಂತ್ರಜ್ಞಾನದ ಸಹಾಯದಿಂದ ವೀಕ್ಷಣೆ ಮಾಡುತ್ತಿರುವ ಚಂದ್ರ ಟೆಲಿಸ್ಕೋಪ್, ಬ್ರಹ್ಮಾಂಡದ ಕುರಿತು ಹಲವು ಕುತೂಲಕಾರಿ ಮಾಹಿತಿಗಳನ್ನು ಈಗಾಗಲೇ ರವಾನಿಸಿದೆ.

Scroll to load tweet…

ಸದ್ಯ ಚಂದ್ರ ಎಕ್ಸರೇ ಸೇಫ್ ಮೋಡ್ ಗೆ ಹೋಗಿದ್ದು, ತಾಂತ್ರಿಕ ದೋಷವನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ ಎಂದು ನಾಸಾ ತಿಳಿಸಿದೆ. ಚಂದ್ರ ಎಕ್ಸರೇ ಜೀವಿತಾವಧಿ 2005 ರಲ್ಲೇ ಕೊನೆಗೊಳ್ಳಬೇಕಾಗಿತ್ತಾದರೂ, ನಾಸಾ ಇದರ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಿಸಿ ಮತ್ತೆ ಅಧ್ಯಯನ ಕೈಗೊಂಡಿತ್ತು.