ನಿಮ್ಮನ್ನ ಮೋಡಿ ಮಾಡಲಿದೆ ನೂತನ ಡ್ಯೂಕಾಟಿ ಮಲ್ಟಿಸ್ಟ್ರಾಡ 1260 ಬೈಕ್

Ducati Multistrada 1260 Launched In India
Highlights

ಭಾರತದಲ್ಲಿ ಡ್ಯೂಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಲಾಂಚ್ ಆಗಿದೆ. ಈ ಬೈಕ್‌ನಲ್ಲಿರೋ ವಿಶೇಷತೆ ಏನು? ಈ ದುಬಾರಿ ಬೈಕ್ ಪವರ್ ಹಾಗೂ ಸಾಮರ್ಥ್ಯ ಹೇಗಿದೆ? ಇಲ್ಲಿದೆ ವಿವರ

ಬೆಂಗಳೂರು(ಜೂ.19): ಅಡ್ವೆಂಚರ್ ಬೈಕ್ ಲಾಂಚ್ ಮಾಡಿದ ಬೆನ್ನಲ್ಲೇ ಡ್ಯುಕಾಟಿ ಮೋಟಾರು ಸಂಸ್ಥೆ ಇದೀಗ  ಭಾರತದಲ್ಲಿ ಡ್ಯುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 15.99 ಲಕ್ಷದಿಂದ 18.06 ಲಕ್ಷ ರೂಪಾಯಿ(ಎಕ್ಸ್ ಶೋರೂಮ್). ಸದ್ಯ ಎರಡು ವಿದಧದಲ್ಲಿ ಈ ಬೈಕ್ ಲಭ್ಯವಿದೆ. ಆದ್ರೆ ಶೀಘ್ರದಲ್ಲೇ  ಮತ್ತಷ್ಟು ವೇರಿಯೆಂಟ್‌ಗಳು ಲಭ್ಯವಾಗಲಿದೆ.

ನೂತನ ಡ್ಯೂಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಅಧುನಿಕ ತಂತ್ರಜ್ಞಾನ, ಹೊಸ ವಿನ್ಯಾಸ ಹಾಗೂ ಹೊಸ ತಾಂತ್ರಿಕತೆ ಹೊಂದಿದೆ. ಮಲ್ಟಿಸ್ಟ್ರಾಡ 1260 ಬೈಕ್ ಇನೋವೇಶನ್‌ಗಾಗಿ ಡ್ಯುಕಾಟಿ ಸಂಸ್ಥೆ ಬರೋಬ್ಬರಿ 8 ವರ್ಷಗಳನ್ನ ತೆಗೆದುಕೊಂಡಿದೆ.

ಭಾರತದ  ರೋಡ್‌ಗಳಿಗೆ ತಕ್ಕಂತೆ ಮಲ್ಟಿಸ್ಟ್ರಾಡ 1260 ಬೈಕ್ ತಯಾರಿಸಲಾಗಿದೆ. 1262 ಸಿಸಿ ಇಂಜಿನ್ ಹೊಂದಿರುವ ಈ ಬೈಕ್ ಎಬಿಎಸ್ ಕಂಟ್ರೋಲ್ ಹೊಂದಿದೆ. ಇನ್ನು ಪ್ರತಿ 15 ಸಾವಿರ ಕೀಲೋಮೀಟರ್ ಪ್ರಯಾಣದ ಬಳಿಕ ಆಯಿಲ್ ಬದಲಾವಣೆ ಮಾಡಬೇಕು. ಈ ಮೂಲಕ ಇದರ ಮೈಂಟೇನ್ಸ್ ಕಾಸ್ಟ್ ಕೂಡ ದುಬಾರಿ ಬೈಕ್‌ಗಳಿಗೆ ಹೋಲಿಸಿದರೆ ಅಲ್ಪ ಮಟ್ಟಿಗೆ ಕಡಿಮೆ.

loader