ಭಾರತದ ಮಾರುಕಟ್ಟೆಗೆ 8 ಲಕ್ಷದ ಡ್ಯುಕಾಟಿ ಮೋನ್‌ಸ್ಟರ್ ಬೈಕ್ ಬಿಡುಗಡೆ

Ducati Monster 797 Plus Launched In India
Highlights

ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ನೂತನ ಡ್ಯೂಕಾಟಿ ಮೋನ್‌ಸ್ಟರ್ 797 ಪ್ಲಸ್ ಬೈಕ್ ಬೆಲ್ ಬರೋಬ್ಬರಿ 8.03 ಲಕ್ಷ ರೂಪಾಯಿ. ಈ ದುಬಾರಿ ಬೆಲೆಯ ಬೈಕ್‌ನಲ್ಲಿರೋ ವಿಶೇಷತೆ ಏನು? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು(ಜೂನ್.10): 25ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಡ್ಯುಕಾಟಿ ಮೋರಾಟ್ ಬೈಕ್ ಸಂಸ್ಥೆ ಇದೀಗ ನೂತನ ಡ್ಯೂಕಾಟಿ ಮೋನ್‌ಸ್ಟರ್ 797 ಪ್ಲಸ್ ಬೈಕ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶೇಷವಾಗಿ ಭಾರತದಲ್ಲಿ ಬಿಡುಗಡೆಯಾಗಿರುವ ನೂತನ ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಪ್ಲಸ್ ಬೈಕ್ ಎಕ್ಸ್ ಶೋ ರೂಮ್ ಬೆಲೆ 8.03 ಲಕ್ಷ ರೂಪಾಯಿ. ನೂತನ ಬೈಕ್‌ನಲ್ಲಿ ಫ್ಲೈ ಸ್ಕ್ರೀನ್ ಹಾಗೂ ಹಿಂಬದಿ ಸವಾರರ ಸೀಟಿನ ಕಲರ್ ಬದಲಿಸಿ ಶೈಲಿಯಲ್ಲಿ ಬದಲಾವಣೆ ಮಾಡಲಾಗಿದೆ.

ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಗಿಂತ, ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಪ್ಲಸ್ ಬೈಕ್‌ನಲ್ಲಿ ಕೆಲ  ವಿಶೇಷತೆಗಳಿವೆ. ನೂತನ ಬೈಕ್‌ನಲ್ಲಿ ಅತೀ ವೇಗವಾಗಿ ಚಲಿಸಿದರೂ, ನಿಮಗೆ ಗಾಳಿಯಿಂದ ಯಾವುದೇ ಸಮಸ್ಯೆಯಾಗಲ್ಲ. 

ಪ್ರಮುಖವಾಗಿ ಇದರ ಸಾಮರ್ಥ್ಯ 72 ಬಿಹೆಚ್‌ಪಿ ಹಾಗೂ 67 ಎನ್ಎಮ್. 803 ಸಿಸಿ ಟ್ವಿನ್ ಇಂಜಿನ್ ಹೊಂದಿರುವು ನೂತನ ಡ್ಯೂಕಾಟಿ ಮೋನ್‌ಸ್ಟರ್ ಬೈಕ್ 797 ಪ್ಲಸ್ ಮೋಸ್ಟ್ ಪವರ್‌ಫುಲ್ ಬೈಕ್‌ಗಳಲ್ಲಿ ಒಂದಾಗಿದೆ.

loader