Asianet Suvarna News Asianet Suvarna News

ಮಲಗುವ ವೇಳೆ ಮೊಬೈಲ್ ಬಳಕೆ ಹಾನಿಕರ

1,25,198 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿ ಅವರ ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ 20 ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ

Dont use mobile sleeping time

ಮಕ್ಕಳು ಮಲಗುವ ವೇಳೆ ಮೊಬೈಲ್ ಅಥವಾ ಟ್ಯಾಬ್‌ಲೆಟ್‌ಗಳ ಬಳಕೆ ಮಾಡುವುದರಿಂದ ಅಸಮರ್ಪಕ ನಿದ್ರೆಯ ಸಮಸ್ಯೆ ಉಂಟಾಗಬಹುದು ಅಲ್ಲದೇ, ಬೊಜ್ಜು ಹಾಗೂ ಇತರ ಆರೋಗ್ಯ ಸಮಸ್ಯೆಗಳೂ ಕಾಡಬಹುದು ಎಂದು ಬ್ರಿಟನ್‌ನ ಕಾರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪತ್ತೆಮಾಡಿದ್ದಾರೆ.

1,25,198 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿ ಅವರ ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ 20 ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ವಿವಿಯ ಬೆನ್ ಕಾರ್ಟರ್ ತಿಳಿಸಿದ್ದಾರೆ. ಶೇ.72ರಷ್ಟು ಮಕ್ಕಳು ಹಾಗೂ ಶೇ. 89ರಷ್ಟು ಯುವಕರು ಮಲಗುವ ಸುತ್ತಮುತ್ತ ಕನಿಷ್ಠ ಒಂದು ಗ್ಯಾಜೆಟನ್ನು ಹೊಂದಿರುತ್ತಾರೆ ಎಂದು ಕಾರ್ಟರ್ ತಿಳಿಸಿದ್ದಾರೆ.

ಮಕ್ಕಳು ಮಲಗುವ ವೇಳೆ ಗ್ಯಾಜೆಟ್‌ಗಳಿಂದ ದೂರವಿರುವಂತೆ ಪೋಷಕರು, ಶಿಕ್ಷಕರು ಮತ್ತು ಮಕ್ಕಳ ತಜ್ಞರು ಅವರ ಅಭ್ಯಾಸವನ್ನು ದೂರಾಗಿಸುವಂಥ ಹವ್ಯಾಸಗಳನ್ನು ರೂಢಿಸಬೇಕು ಎಂದಿದ್ದಾರೆ.

Follow Us:
Download App:
  • android
  • ios