Asianet Suvarna News Asianet Suvarna News

ಸೈಬರ್ ವಂಚನೆಗಳಿಗೆ ಪರಿಹಾರದ ಅಗತ್ಯವಿದೆ : ಅಶ್ವತ್ಥ್ ನಾರಾಯಣ ‌

ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರದ ಭಾಗವಾದ ಸೈಸೆಕ್ ಕೇಂದ್ರದ 'ಸೈಬರ್ ವಾರ್ತಿಕಾ' ಮಾಸಿಕದ ವಾರ್ಷಿಕ ಸಂಚಿಕೆಯನ್ನು ಅಶ್ವತ್ಥ್ ನಾರಾಯಣ ‌ಗುರುವಾರ ಬಿಡುಗಡೆ ಮಾಡಿದರು.

Cyber scams need solution says C N Ashwath Narayan mnj
Author
First Published Jun 2, 2022, 7:42 PM IST

ಬೆಂಗಳೂರು (ಜೂ. 02): ಸಮಾಜದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ (Cyber Crime) ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲರೂ ಇವುಗಳಿಗೆ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ (C N Ashwath Narayan) ಹೇಳಿದ್ದಾರೆ. ರಾಜ್ಯ ಸರಕಾರದ ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರದ ಭಾಗವಾದ ಸೈಸೆಕ್ ಕೇಂದ್ರದ 'ಸೈಬರ್ ವಾರ್ತಿಕಾ' ಮಾಸಿಕದ ವಾರ್ಷಿಕ ಸಂಚಿಕೆಯನ್ನು ಅವರು ಗುರುವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಬಳಸುವ ಮುನ್ನ ಅದರ ಬಗ್ಗೆ ಸರಿಯಾದ ಜಾಗೃತಿ ಇರಬೇಕಾದ್ದು ಅಗತ್ಯವಾಗಿದೆ ಎಂದರು. ಈ ಮಾಸಿಕದಲ್ಲಿ ಸೈಬರ್ ವಂಚನೆಗಳ ಮಾಹಿತಿ ಮತ್ತು ಅಂಕಿಅಂಶಗಳು, ಉಲ್ಲಂಘನೆ, ಮಾಹಿತಿಯುಕ್ತ ಪೋಸ್ಟರುಗಳು ಮತ್ತು ಸ್ಪರ್ಧೆಗಳು ಇರುತ್ತವೆ ಎಂದು ಅವರು ನುಡಿದರು.

ಕೋವಿಡ್ ನಂತರದ ಕಾಲಘಟ್ಟದಲ್ಲಿ ಸೈಬರ್ ಸುರಕ್ಷತೆಯು ಅತ್ಯಂತ ಅಗತ್ಯವಾಗಿದೆ. ಯುವಜನರು ಮತ್ತು ಹಿರಿಯರಿಬ್ಬರೂ ಈ ಬಗ್ಗೆ ಅರಿವು ಬೆಳೆಸಿ ಕೊಳ್ಳಬೇಕು ಎಂದು ಸಚಿವರು ಹೇಳಿದರು.ಕಾರ್ಯಕ್ರಮದಲ್ಲಿ ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್, ಸೈಸೆಕ್ ಮುಖ್ಯಸ್ಥ ಡಾ.ಕಾರ್ತಿಕ್ ರಾವ್ ಬಪ್ಪನಾಡು, ಕೆಎಸ್ಸಿಎಸ್ಟಿ ಕಾರ್ಯದರ್ಶಿ ಪ್ರೊ. ಅಶೋಕ ರಾಯಚೂರು, ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್.ಹೇಮಂತಕುಮಾರ್, ಪ್ರೊ.ನಾಗರತ್ನ ಮುಂತಾದ ವರಿದ್ದರು.

ಇದನ್ನೂ ಓದಿ: ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ

ಇದನ್ನೂ ಓದಿ1000 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಲಂಡನ್‌ನ ಐಒಎ ಆಸಕ್ತಿ

Follow Us:
Download App:
  • android
  • ios