ಬೆಂಗಳೂರು(ಅ.15): ಭಾರತದಲ್ಲಿ ಮಂಚೂಣಿಯಲ್ಲಿರುವ ಟ್ರಾವಲ್ ಮತ್ತು ಲೀಜರ್ ಪ್ಲಾಟ್ ಫಾರಂ ಕ್ಲಿಯರ್ ಟ್ರಿಪ್ ಗ್ರಾಹಕರಿಗಾಗಿ ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್  ಟಿಕೆಟ್ ದರದ ಮೇಲೆ ಭಾರಿ ಕ್ಯಾಶ್ ಬ್ಯಾಕ್ ಘೋಷಿಸಿದೆ. ನವರಾತ್ರಿ ಪ್ರಯುಕ್ತ ಕ್ಲಿಯರ್ ಟ್ರಿಪ್ ಈ ಆಫರ್ ಗಳನ್ನು ಘೋಷಿಸಿದ್ದು, ಇದು ತನ್ನ ಹೊಸ ಹಾಗೂ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಅನ್ವಯಿಸುತ್ತದೆ.

ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ರೂಪಾಯಿ 20,000 ಹಾಗೂ ದೇಶಿಯ ವಿಮಾನ ಪ್ರಯಾಣದ ಟಿಕೆಟ್ ದರದ ಮೇಲೆ ರೂಪಾಯಿ 1,000 ಗಳ ವರೆಗೂ ಕ್ಯಾಶ್ ಬ್ಯಾಕ್ ನೀಡುತ್ತಿದೆ. ಹಾಗೂ ಹೋಟೆಲ್ ಬುಕ್ಕಿಂಗ್ ಮೇಲೆ ಶೇ 30 ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತಿದೆ.

ಬುಕ್ಕಿಂಗ್ ಮಾಡಿದ ತಕ್ಷಣ ಈ ಆಫರ್ ಅನ್ವಯವಾಗುತ್ತದೆ. ಈ ಕೊಡುಗೆ ಅಕ್ಟೋಬರ್ 19 ರ ತನಕ ಜಾಲ್ತಿಯಲ್ಲಿರುತ್ತದೆ. ಗ್ರಾಹಕರು (FESTIVE ) ಕೋಡ್ ಬಳಸಿ ಈ ಆಫರ್ ಅನ್ನು ಬಳಕೆ ಮಾಡಬಹುದಾಗಿದೆ.