Asianet Suvarna News Asianet Suvarna News

Darul Uloom Deoband: ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯ ವೆಬ್‌ಸೈಟ್‌ ಬ್ಲಾಕ್‌ಗೆ ಮಕ್ಕಳ ಆಯೋಗ ಸೂಚನೆ!

*ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯ ವೆಬ್‌ಸೈಟ್‌ ವಿರುದ್ಧ ತನಿಖೆ
*ಉಲೂಮ್‌ ನೀಡಿದ ಉತ್ತರಗಳು ದೇಶದ ಕಾನೂನಿಗೆ ವಿರುದ್ಧ
*ವರದಿಯನ್ನು 10 ದಿನದಲ್ಲಿ ಸಲ್ಲಿಸಿ: ಆಯೋಗ ಸೂಚನೆ!

Child rights panel NCPCR writes to Saharanpur DM seeking action against Darul Uloom Deoband Website mnj
Author
Bengaluru, First Published Jan 17, 2022, 11:16 AM IST

ಲಖನೌ (ಜ. 17): ಕಾನೂನು ಬಾಹಿರ ಫತ್ವಾ ಹೊರಡಿಸಿರುವ ಹಾಗೂ ಪ್ರಕಟಿಸಿರುವ ದಾರುಲ್‌ ಉಲೂಮ್‌ ದೇವ್‌ಬಂದ್‌ (Darul Uloom Deoband) ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆಯ ವೆಬ್‌ಸೈಟ್‌ ವಿರುದ್ಧ ತನಿಖೆಗೆ ಆದೇಶಿಸುವಂತೆ ಹಾಗೂ ವೆಬ್‌ಸೈಟ್‌ ಬ್ಲಾಕ್‌ ಮಾಡುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ( NCPCR) ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ವೆಬ್‌ಸೈಟ್‌ನಲ್ಲಿ ಜನರು ಕೇಳಿರುವ ಪ್ರಶ್ನೆಗಳಿಗೆ ದಾರುಲ್‌ ಉಲೂಮ್‌ ನೀಡಿದ ಉತ್ತರಗಳು (ಫತ್ವಾಗಳು) ಹಾಗೂ ವಿವರಣೆಗಳು ದೇಶದ ಕಾನೂನು ಹಾಗೂ ಕಾಯ್ದೆಗಳ ವಿರುದ್ಧವಾಗಿವೆ ಹಾಗೂ ಮಕ್ಕಳ ಹಕ್ಕುಗಳಿಗೆ ಸಹ ವಿರುದ್ಧವಾಗಿವೆ ಎಂದು ಎನ್‌ಸಿಪಿಸಿಆರ್‌ ಹೇಳಿದೆ. ಹೀಗಾಗಿ ಕಾನೂನುಬದ್ಧವಲ್ಲದ ಆಕ್ಷೇಪಾರ್ಹ ಪ್ರಕಟಿಸಿರುವ ಈ ವೆಬ್‌ಸೈಟ್‌ ವಿರುದ್ಧ ಕ್ರಮ ಕೈಗೊಂಡ ವರದಿಯನ್ನು 10 ದಿನದಲ್ಲಿ ಸಲ್ಲಿಸಬೇಕು ಎಂದು ಅದು ಹೇಳಿದೆ.

ಮಕ್ಕಳ ಹಕ್ಕುಗಳ ಸಮಿತಿಯು ದಾರುಲ್-ಉಲೂಮ್ ದಿಯೋಬಂದ್‌ನ ವೆಬ್‌ಸೈಟ್ ಅನ್ನು ಪರೀಕ್ಷಿಸಲು ಮತ್ತು ಅಂತಹ ವಿಷಯವನ್ನು ತೆಗೆದುಹಾಕಲು ಸಹರಾನ್‌ಪುರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ (Saharanpur DM) ಕೇಳಿದೆ. ಭಾರತ ಸಂವಿಧಾನ, ಭಾರತೀಯ ದಂಡ ಸಂಹಿತೆ, ಬಾಲಾಪರಾಧಿ ಕಾಯಿದೆ, 2015 ಮತ್ತು ಶಿಕ್ಷಣ ಹಕ್ಕು ಕಾಯಿದೆ, 2009 ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಹೇಳಿದೆ.

ಇದನ್ನೂ ಓದಿ: Dharma Sansad Hate Speech: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ, ಭಾರತೀಯ ರಾಜತಾಂತ್ರಿಕನಿಗೆ ಪಾಕಿಸ್ತಾನ ಸಮನ್ಸ್

ದತ್ತು ಪಡೆದ ಮಗುಗೆ ಆಸ್ತಿಯಲ್ಲಿ ಪಾಲಿಲ್ಲ:  "ಫತ್ವಾಗಳಲ್ಲೊಂದರಲ್ಲಿ (969/969/M=09/1436, ದಾರುಲ್ ಉಲೂಮ್ ದೇವ್ಬಂದ್ ಮಗುವನ್ನು ದತ್ತು ಪಡೆಯುವುದು ಕಾನೂನುಬಾಹಿರವಲ್ಲ ಆದರೆ ಕೇವಲ ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ, ನಿಜವಾದ ಮಗುವಿನ ತೀರ್ಪು ಅವನ ಮೇಲೆ ಅನ್ವಯಿಸುವುದಿಲ್ಲ. ಪ್ರಬುದ್ಧನಾದ ನಂತರ ಅವನಿಂದ ಶರಿಯಾ ಪರ್ದಾವನ್ನು ಆಚರಿಸುವುದು ಅವಶ್ಯಕ. ದತ್ತು ಪಡೆದ ಮಗು ಆಸ್ತಿಯಲ್ಲಿ ಯಾವುದೇ ಪಾಲು ಪಡೆಯುವುದಿಲ್ಲ ಮತ್ತು ಯಾವುದೇ ಸಂದರ್ಭದಲ್ಲಿ ಮಗು ಉತ್ತರಾಧಿಕಾರಿಯಾಗುವುದಿಲ್ಲ, " ಎಂದು ಎನ್‌ಸಿಪಿಸಿಆರ್ ಪತ್ರದಲ್ಲಿ ಉದಾಹರಣೆಯಾಗಿ ಉಲ್ಲೇಖಿಸಿದೆ. 

ದತ್ತು ಸ್ವೀಕಾರದ ಹೇಗ್ ಕನ್ವೆನ್ಷನ್ (Hague Convention) ಮತ್ತು ಜುವೆನೈಲ್ ಜಸ್ಟೀಸ್ ಆಕ್ಟ್, 2015 ( Juvenile Justice Act) ಎರಡಕ್ಕೂ ವಿರುದ್ಧವಾಗಿರುವ ಬಗ್ಗೆ  ಪತ್ರವು ಹೈಲೈಟ್ ಮಾಡಿದೆ. ಶಾಲಾ ಪುಸ್ತಕ ಪಠ್ಯಕ್ರಮ, ಕಾಲೇಜು ಸಮವಸ್ತ್ರ, ಇಸ್ಲಾಮ್‌ಗೆ ಸಂಬಂಧಪಡದ ಶಿಕ್ಷಣ ಸಂಸ್ಥೆಗಳಲ್ಲಿ (un-Islamic atmosphere)ಮಕ್ಕಳ ಶಿಕ್ಷಣ, ದೈಹಿಕ ಶಿಕ್ಷೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ದೂರುದಾರರ ಲಿಂಕ್‌ಗಳಲ್ಲಿ ಇದೇ ರೀತಿಯ 'ಫತ್ವಾ'ಗಳನ್ನು ಒದಗಿಸಲಾಗಿದೆ ಎಂದು ಆಯೋಗವು ಗಮನಿಸಿದೆ. "ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಗಮನಿಸಲಾಗಿದೆ. ಉದಾಹರಣೆಗೆ, ಉತ್ತರವೊಂದರಲ್ಲಿ, ಶಿಕ್ಷಕರು ಮಕ್ಕಳನ್ನು ಹೊಡೆಯುವುದನ್ನು ಅನುಮತಿಸಲಾಗಿದೆ ಎಂದು ಹೇಳಲಾಗಿದೆ,  ಶಾಲೆಗಳಲ್ಲಿ ದೈಹಿಕ ಶಿಕ್ಷೆಯನ್ನು RTE Act 2009 ಅನ್ವಯ ನಿಷೇಧಿಸಲಾಗಿದೆ." ಎಂದು ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Bipin Rawat Death ಸಿಡಿಎಸ್ ಸಾವು ಸಂಭ್ರಮಿಸಿದವರ ವಿರುದ್ಧ ಆಕ್ರೋಶ, ಹಿಂದೂ ಧರ್ಮಕ್ಕೆ ನಿರ್ದೇಶಕ ಅಲಿ ಅಕ್ಬರ್ ಮತಾಂತರ!

ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣಗಳು ಮಾಡಲ್ಪಟ್ಟಿರುವುದಾಗಿ ಆರೋಪಿಸಿರುವ ಪಾಕಿಸ್ತಾನ ಈ ಸಂಬಂಧ ಇಸ್ಲಾಮಾಬಾದಿನಲ್ಲಿರುವ ಭಾರತೀಯ ರಾಜತಾಂತ್ರಿಕ ( Indian diplomat ) ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ಧರ್ಮ ಸಂಸದ್ (Dharma sansad) ಅಧಿವೇಶನದಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲಬೇಕು ಎನ್ನುವ ಅರ್ಥದಲ್ಲಿ ಭಾಷಣಗಳನ್ನು ನೀಡಲಾಗಿದ್ದು, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಆಘಾತ ತಂದಿದೆ ಎಂದು ಪಾಕ್ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುವ ಚಟುವಟಿಕೆಗಳನ್ನು ನಿರ್ಬಂಧಿಸುವ ಜವಾಬ್ದಾರಿ ಭಾರತದ ಮೇಲಿದೆ, ಮುಂದಿನ ದಿನಗಳಲ್ಲಿ ಈ ಬಗೆಯ ಘಟನೆಗಳು ನಡೆಯದಂತೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದಿದೆ ಇಮ್ರಾನ್ ಸರ್ಕಾರ

Follow Us:
Download App:
  • android
  • ios