ಬಹುತೇಕ ಜನ ಇಂಟರ್‌ನೆಟ್‌ನಲ್ಲಿ ಚುನಾವಣಾ ಫಲಿತಾಂಶದ ರಿಸಲ್ಟ್‌ ಗಾಗಿ ಹುಡುಕಾಟ ನಡೆಸುತ್ತಾ ಸರ್ಚಿಂಗ್‌ನಲ್ಲಿ ತೊಡಗಿದ್ದು, ಇದೇ ವೇಳೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಐ ಚಾಟ್ ಬಾಟ್ ಹಾಗೂ ಚಾಟ್ ಜಿಪಿಟಿ ಡೌನ್ ಆಗಿದೆ.

ನವದೆಹಲಿ: ಇಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ಇನ್ನು ಸ್ವಲ್ಪ ಹೊತ್ತಿನಲ್ಲಿ ಫಲಿತಾಂಶ ಹೊರಬರಲಿದೆ. ಮೋದಿ ನೇತೃತ್ವದ ಎನ್‌ಡಿಎಗೆ, ಇಂಡಿಯಾ ಮೈತ್ರಿಕೂಟ ಟಪ್ ಫೈಟ್ ನೀಡಿರುವುದರಿಂದ ಮುಂದೆ ಯಾವ ಸರ್ಕಾರ ರಚನೆ ಆಗಲಿದೆ ಎಂಬ ಕುತೂಹಲ ತೀವ್ರವಾಗಿದೆ. ಹೀಗಿರುವಾಗ ಬಹುತೇಕ ಜನ ಇಂಟರ್‌ನೆಟ್‌ನಲ್ಲಿ ಚುನಾವಣಾ ಫಲಿತಾಂಶದ ರಿಸಲ್ಟ್‌ ಗಾಗಿ ಹುಡುಕಾಟ ನಡೆಸುತ್ತಾ ಸರ್ಚಿಂಗ್‌ನಲ್ಲಿ ತೊಡಗಿದ್ದು, ಇದೇ ವೇಳೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಐ ಚಾಟ್ ಬಾಟ್ ಹಾಗೂ ಚಾಟ್ ಜಿಪಿಟಿ ಡೌನ್ ಆಗಿದೆ. ಪ್ರಪಂಚದಾದ್ಯಂತ ಇರುವ ಹಲವು ಬಳಕೆದಾರರಿಗೆ ಹಾಗೂ ಭಾರತೀಯರಿಗೂ ಈ ಮಹತ್ವದ ದಿನವೇ ಚಾಟ್‌ಜಿಪಿಟಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವುದನ್ನು ತೋರಿಸಿದ್ದು, ಅನೇಕರು ಇತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಭಾರತೀಯ ಚುನಾವಣೆಯನ್ನು ಸುಲಭವಾಗಿ ನಿರ್ವಹಿಸುವ ಅನೇಕ ರಹಸ್ಯ ಪ್ರಯತ್ನಗಳಿಗೆ ಇದು ಅಡ್ಡಿಯಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು 4 ದಿನ ಮೊದಲು ಈ ವಿಚಾರ ಗೊತ್ತಾಗಿತ್ತು. ಮೇ ತಿಂಗಳಲ್ಲಿ ಈ ವಿಚಾರವನ್ನು ಗುರುತಿಸಲಾಗಿದ್ದು, ಭಾರತೀಯ ಚುನಾವಣೆಗಳನ್ನು ಗುರಿಯಾಗಿಸುವ ಚಟುವಟಿಕೆಯನ್ನು ಚಾಟ್ ಜಿಪಿಟಿ ತನ್ನ ವರದಿಯಲ್ಲಿ ಹೈಲೈಟ್ ಮಾಡಿತ್ತು. ಅಲ್ಲದೇ ಈ ಎಐ ನೆಟ್‌ವರ್ಕ್ ಅನ್ನು ಇಸ್ರೇಲ್‌ನಲ್ಲಿನ ರಾಜಕೀಯ ಪ್ರಚಾರ ನಿರ್ವಹಣಾ ಸಂಸ್ಥೆಯಾದ STOIC ನಿರ್ವಹಿಸುತ್ತಿದೆ ಎಂದು ಹೇಳಿತ್ತು. ಸಾರ್ವಜನಿಕ ಅಭಿಪ್ರಾಯವನ್ನು ಕೌಶಲ್ಯದಿಂದ ನಿರ್ವಹಿಸುವ ಅಥವಾ ರಾಜಕೀಯ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ರಹಸ್ಯ ಕಾರ್ಯಾಚರಣೆಗಳಿಗಾಗಿ ಎಐ ಅನ್ನು ಬಳಸಿಕೊಳ್ಳುವ ಅಭಿಯಾನಗಳನ್ನು ಒಪನ್ ಎಐ ವರದಿಯು ಹೈಲೈಟ್ ಮಾಡಿತ್ತು. ಬಹುಶಃ ಅದೇ ಕಾರಣಕ್ಕೋ ಏನೋ ಇಂದು ಒಪನ್ ಎಐ ಚಾಟ್ ಜಿಪಿಟಿ ಸಂಪೂರ್ಣ ಸ್ಥಗಿತಗೊಂಡಿದ್ದು, ಅನೇಕ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐ ಲವ್ ಯು ರೋಬೋಟ್; ಚಾಟ್ ಜಿಪಿಟಿ ಪ್ರೀತಿಗೆ ಬಿದ್ದ ಹುಡುಗಿ!

ಈ ಮಧ್ಯೆ, OpenAI ತನ್ನ ChatGPT ಧ್ವನಿಗಳಲ್ಲಿ ಒಂದಾದ ಸ್ಕೈ ಅನ್ನು ವಾಪಸ್ ಪಡೆದಿದೆ. ಹಾಲಿವುಡ್ ನಟಿ ಮತ್ತು ಮಾರ್ವೆಲ್ ಸಿರೀಸ್‌ನ ತಾರೆ ಸ್ಕಾರ್ಲೆಟ್ ಜೋಹಾನ್ಸನ್ ಅವರ 'ಹರ್' ಚಿತ್ರದಲ್ಲಿನ ಧ್ವನಿಯನ್ನು ಹೋಲುತ್ತಿದ್ದ ಹಿನ್ನೆಲೆ ವಿವಾದ ಉಂಟಾದ ಕಾರಣ ಈ ಧ್ವನಿಯನ್ನು ಹಿಂಪಡೆಯಲಾಗಿತ್ತು. ಅಲ್ಲಿ ಸ್ಕಾರ್ಲೆಟ್ ಜೋಹಾನ್ಸನ್, ಸಮಂತಾ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. 

ಸ್ಕಾರ್ಲೆಟ್ ಜೋಹಾನ್ಸನ್ ತಮ್ಮ ಇತ್ತೀಚಿನ ಚಾಟ್‌ ಜಿಪಿಟಿ ಉತ್ಪನ್ನದಲ್ಲಿ ತಮ್ಮ ಧ್ವನಿಯನ್ನು ಹೋಲುವ ಧ್ವನಿಯನ್ನು ಅಳವಡಿಸಿದಕ್ಕಾಗಿ ಕೃತಕ ಬುದ್ಧಿಮತ್ತೆ ಒಪನ್ ಎಐ ಅನ್ನು ವಿರುದ್ಧ ಟೀಕೆ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದ ಕಳೆದ ವರ್ಷ ತಮ್ಮ ಎಐ ಸಿಸ್ಟಮ್‌ಗೆ ತನ್ನ ಧ್ವನಿಯನ್ನು ನೀಡಲು ಒಪನ್ ಎಐ ಮಾಡಿದ ಪ್ರಸ್ತಾಪವನ್ನು ತಾನು ತಿರಸ್ಕರಿಸಿದ್ದಾಗಿ ಅವರು ಬಹಿರಂಗಪಡಿಸಿದ್ದರು. ಆ ಧ್ವನಿಯನ್ನು ಕೇಳಿಸಿಕೊಂಡ ನಂತರ ಅವರಿಗೆ ಶಾಕ್ ಆಗಿತ್ತು. ಹತ್ತಿರದ ಸ್ನೇಹಿತರು ಹಾಗೂ ಆತ್ಮೀಯರು ಹಾಗೂ ಮಾಧ್ಯಮ ಸಂಸ್ಥೆಗಳು ಕೂಡ ಆಕೆಯ ನಿಜವಾದ ಧ್ವನಿ ಹಾಗೂ ಈ ಎಐ ಧ್ವನಿ ನಡುವಣ ವ್ಯತ್ಯಾಸವನ್ನು ಗುರುತಿಸುವಲ್ಲಿ ವಿಫಲರಾಗಿದ್ದರು.

ಹುಡುಗಿಯರನ್ನು ಇಂಪ್ರೆಸ್ ಮಾಡ್ಬೇಕಾ? ಚಾಟ್ ಜಿಪಿಟಿ ಟಿಪ್ಸ್ ಫಾಲೋ ಮಾಡಿ