ಬೆಂಗಳೂರು(ಆ.20): ಚಂದ್ರನ ಅಧ್ಯಯನಕ್ಕೆ ಭಾರತ ಕಳುಹಿಸಿರುವ ಚಂದ್ರಯಾನ-2 ನೌಕೆ, ಯಶಸ್ವಿಯಾಗಿ ಚಂದ್ರನ ಕಕ್ಷೆ ತಲುಪಿದೆ ಎಂದು ಇಸ್ರೋ ಪ್ರಕಟಿಸಿದೆ.

ಒಟ್ಟು 30 ದಿನಗಳ ಕಾಲ ಬಾಹ್ಯಾಕಾಶ ಪ್ರಯಾಣ ಕೈಗೊಂಡ ಚಂದ್ರಯಾನ-2, ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವಾನ್ ಸ್ಪಷ್ಟಪಡಿಸಿದ್ದಾರೆ.

ಚಂದ್ರಯಾನ-2 ನೌಕೆಯ ಚಂದ್ರನ ಕಕ್ಷೆಯ ಅಳವಡಿಕೆ(LOI) ಚಲನೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇನ್ನು ಮುಂದೆ ಚಂದ್ರನ ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರೆಸಲಿದೆ.

ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಚಂದ್ರನ ಧ್ರುವದ ಮೇಲೆ ಇನ್ನು ನಾಲ್ಕು ದಿನಗಳ ಬಳಿಕ ನೌಕೆ ಪ್ರವೇಶಿಸಲಿದೆ.

ಇನ್ನು ಸೆ.02ರಂದು ವಿಕ್ರಮ್ ಉಡಾಯಣಾ ವಾಹಕ ಕಕ್ಷೆಗಾಮಿಯಿಂದ ಪ್ರತ್ಯೇಕವಾಗಲಿದ್ದು, ಸೆ.7 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂಬ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ.