ನವದೆಹಲಿ[ಸೆ.14]: ಇತ್ತೀಚೆಗೆ ಚಂದ್ರನ ಮೇಲೆ ಸಾಫ್ಟ್‌ಲ್ಯಾಂಡ್‌ ಬದಲು ಹಾರ್ಡ್‌ಲ್ಯಾಂಡ್‌ ಆಗಿದ್ದ ಚಂದ್ರಯಾನ 2 ನೌಕೆಯ ಲ್ಯಾಂಡರ್‌ನ ಕುರಿತ ಕೆಲ ಚಿತ್ರಗಳನ್ನು ಇಸ್ರೋ ಜೊತೆಗೆ ಹಂಚಿಕೊಳ್ಳುವುದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಲ್ಯಾಂಡರ್‌ ಅಪ್ಪಳಿಸಿದೆ ಎನ್ನಲಾದ ಸ್ಥಳದ ಚಿತ್ರ ಮತ್ತು ಅಪ್ಪಳಿಸುವ ಮುನ್ನ ಅದೇ ಸ್ಥಳದ ಚಿತ್ರವನ್ನು ತಾನು ಹಂಚಿಕೊಳ್ಳುವುದಾಗಿ ನಾಸಾ ಹೇಳಿದೆ.

ಕೆಲ ದಿನಗಳ ಹಿಂದೆ ಇಸ್ರೋ ಕೂಡಾ ಇದೇ ರೀತಿಯ ದಾಖಲೆಗಳನ್ನು ಬಳಸಿ ಲ್ಯಾಂಡರ್‌ ಅಪ್ಪಳಿಸಿರುವ ವಿಷಯವನ್ನು ಖಚಿತಪಡಿಸಿಕೊಂಡಿತ್ತು. ಇದೇ ವಿಷಯ ಸಂಬಂಧ ನಾಸಾದ ಛಾಯಾಚಿತ್ರಗಳೂ ಲಭ್ಯವಾದರೆ, ಇಸ್ರೋಗೆ ಇಡೀ ಘಟನೆ ಕುರಿತು ಇನ್ನಷ್ಟುಮಾಹಿತಿ ಸಿಗಲಿದೆ ಎನ್ನಲಾಗಿದೆ.

ನಾಸಾದ ಆರ್ಬಿಟರ್‌ ತೆಗೆದಿರುವ ಚಿತ್ರಗಳನ್ನು ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಇಸ್ರೋ ಕಚೇರಿಯೊಂದಿಗೆ ಹಂಚಿಕೊಳ್ಳಲಾಗುವುದು.