ಸಜ್ಜಾಗಿ ನಾಳೆ ಮಧ್ಯಾಹ್ನ 2.43ಕ್ಕೆ ಇಸ್ರೋದ ಚಂದ್ರಯಾನ 2 ಉಡ್ಡಯನ

ಸಜ್ಜಾಗಿ ನಾಳೆ ಮಧ್ಯಾಹ್ನ 2.43ಕ್ಕೆ ಇಸ್ರೋದ ಚಂದ್ರಯಾನ 2 ಉಡ್ಡಯನ| ಜಿಎಸ್‌ಎಲ್‌ವಿ ಮ್ಯಾಕ್‌ 3 ರಾಕೆಟ್‌ ನಭಕ್ಕೆ

Chandrayaan 2 mission launch rehearsal completed performance normal ISRO

ಬೆಂಗಳೂರು[ಜು.21]: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಇಸ್ರೋದ ‘ಚಂದ್ರಯಾನ 2’ ನೌಕೆಯ ಉಡ್ಡಯನವು ಸೋಮವಾರ ನಡೆಯಲಿದೆ.

ಸೋಮವಾರ ಮಧ್ಯಾಹ್ನ 2.43ಕ್ಕೆ ಚಂದ್ರಯಾನ 2 ನೌಕೆ ಹೊತ್ತ ಜಿಎಸ್‌ಎಲ್‌ವಿ ಮ್ಯಾಕ್‌ 3 ರಾಕೆಟ್‌ ನಭಕ್ಕೆ ನೆಗೆಯಲಿದೆ. ಈ ಹಿಂದೆ ಜುಲೈ 15ರ ನಸುಕಿನ ಜಾವ ಉಡ್ಡಯನ ನಿಗದಿಯಾಗಿತ್ತಾದರೂ, ಕಡೆಯ ಹಂತದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡ್ಡಯನವನ್ನು ಸ್ಥಗಿತಗೊಳಿಸಲಾಗಿತ್ತು.

ಸೋಮವಾರ ಉಡಾವಣೆಯಾಗುವ ಚಂದ್ರಯಾನ- 2 ನೌಕೆ 54 ದಿನಗಳಲ್ಲಿ ಚಂದ್ರನ ಮೇಲೆ ಪದಾರ್ಪಣೆ ಮಾಡಲಿದೆ. ತನ್ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ನಾಲ್ಕನೇ ದೇಶ ಎಂಬ ಹಿರಿಮೆಯನ್ನು ಭಾರತಕ್ಕೆ ತಂದುಕೊಡಲಿದೆ.

Latest Videos
Follow Us:
Download App:
  • android
  • ios