ಬೆಂಗಳೂರು[ಜು.27]: ಭಾರತದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ-2 ನೌಕೆಯ ಕಕ್ಷೆಯನ್ನು ಎರಡನೇ ಬಾರಿಗೆ ಎತ್ತರಿಸುವ ಕಾರ್ಯವನ್ನು ಶುಕ್ರವಾರ ನಡೆಸಲಾಗಿದೆ. ಇದರಿಂದಾಗಿ ಚಂದ್ರನತ್ತ ನೌಕೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.

ಶುಕ್ರವಾರ ಬೆಳಿಗ್ಗೆ 1.08 ನಿಮಿಷಕ್ಕೆ 15 ನಿಮಿಷಗಳ ಕಾಲ ಅಂತರಿಕ್ಷದಲ್ಲಿ ನೌಕೆಯ ಇಂಧನವನ್ನು ಉರಿಸುವ ಮೂಲಕ ಭೂ ಕಕ್ಷೆಯಿಂದ ನೌಕೆಯನ್ನು ಎತ್ತರಿಸಲಾಯಿತು. ನೌಕೆಯ ಎಲ್ಲ ಯಂತ್ರಗಳು ಸಾಮಾನ್ಯ ಸ್ಥಿತಿಯಲ್ಲಿದ್ದು, ಜುಲೈ 29ರಂದು ಮೂರನೇ ಬಾರಿಗೆ ಕಕ್ಷೆ ಎತ್ತರಿಸುವ ಕಾರ್ಯ ನಡೆಸಲಾಗುತ್ತದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಬುಧವಾರವಷ್ಟೇ ಎರಡನೇ ಹಂತದ ಕಕ್ಷೆ ಎತ್ತರಿಸುವ ಕಾರ್ಯ ನಡೆದಿತ್ತು.