ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ಭಾರತೀಯ ಮೂಲದ ಸಿಇಒ
- ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿರುವ ಭಾರತ ಮೂಲದ ಸತ್ಯಾ ನಾಡೆಲ್ಲಾ
- ಮಂಡಳಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ
ನ್ಯೂಯಾರ್ಕ್ (ಜೂ.18): ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಆಗಿರುವ ಭಾರತ ಮೂಲದ ಸತ್ಯಾ ನಾಡೆಲ್ಲಾ ಅವರು ಇದೇ ಕಂಪನಿಯ ಅಧ್ಯಕ್ಷರಾಗಿ ಪದನ್ನೋತಿ ಹೊಂದಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯ ಸ್ವತಂತ್ರ ನಿರ್ದೇಶಕರು ಸತ್ಯ ನಾದೆಳ್ಲಾ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು ಎಂದು ಮೈಕ್ರೋಸಾಫ್ಟ್ ಕಾಪ್‌ರ್ ಬುಧವಾರ ಘೋಷಣೆ ಮಾಡಿದೆ.
ಜೂ.24ಕ್ಕೆ ಹೊಸ ವಿಂಡೋಸ್ 11 ಲಾಂಚ್, ಡಾರ್ಕ್ ಮೋಡ್ ಇರಲಿದೆಯಾ? ...
ತನ್ಮೂಲಕ ನಾಡೆಲ್ಲಾ ಅವರು ಮಂಡಳಿಗೆ ಸಂಬಂಧಿಸಿದ ಕಾರ್ಯಸೂಚಿಯನ್ನು ನಿಗದಿಪಡಿಸುವ ಕಾರ್ಯಗಳನ್ನು ಮುಂದುವರಿಸಲಿದ್ದಾರೆ. ಉದ್ಯಮ ಕುರಿತಾದ ಅವರ ಆಳವಾದ ತಿಳುವಳಿಕೆಯು ಸರಿಯಾದ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಕಂಪನಿ ಹೇಳಿದೆ.