Asianet Suvarna News Asianet Suvarna News

Play Store Billing Policy: ಗೂಗಲ್‌ ವಿರುದ್ಧದ ವಿಚಾರಣೆ 60 ದಿನದಲ್ಲಿ ಪೂರ್ಣ: ಸಿಸಿಐ

*ಪ್ಲೇ ಸ್ಟೋರ್‌ ಬಿಲ್ಲಿಂಗ್‌ ನಿಯಮ ಉಲ್ಲಂಘನೆ ಪ್ರಕರಣ
*ಹೈಕೋರ್ಟ್‌ಗೆ ಭಾರತೀಯ ಸ್ಪರ್ಧಾ ಆಯೋಗ ಭರವಸೆ
*ಸಿಸಿಐ ವಿಚಾರಣೆಗೆ ಗೂಗಲ್ ಎಲ್ಲ ರೀತಿಯ ಸಹಕಾರ‌

CCI to complete Investigation into google billing policies in 60 days mnj
Author
Bengaluru, First Published Jan 6, 2022, 3:50 AM IST | Last Updated Jan 6, 2022, 3:50 AM IST

ಬೆಂಗಳೂರು (ಜ. 6): ಪ್ಲೇಸ್ಟೋರ್‌ ಬಿಲ್ಲಿಂಗ್‌ ನಿಯಮಗಳಿಗೆ (Play Store Billig Policies)  ಸಂಬಂಧಿಸಿದಂತೆ ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧದ ವಿಚಾರಣೆಯನ್ನು 60 ದಿನಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭಾರತೀಯ ಸ್ಪರ್ಧಾ ಆಯೋಗ (CCI) ಹೈಕೋರ್ಟ್‌ಗೆ (High Court) ಭರವಸೆ ನೀಡಿದೆ. ಪ್ಲೇಸ್ಟೋರ್‌ನ ನೂತನ ನಿಯಮಗಳಿಗೆ ಸಂಬಂಧಿಸಿದ ವಿಚಾರಣೆಗೆ ಆದೇಶಿಸಿದ ಸಿಸಿಐ ಕ್ರಮ ಪ್ರಶ್ನಿಸಿ ಗೂಗಲ್‌ (Google) ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತದರ ಸಮೂಹ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು.

ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಸಿಸಿಐ ಪರ ವಕೀಲರು, ಪ್ರಕರಣದ ವಿಚಾರಣೆಯನ್ನು 60 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಎರಡು ಸುತ್ತಿನ ವಿಚಾರಣೆಗೆ ಬದಲಾಗಿ ಅಂತಿಮ ವಿಚಾರಣೆಯನ್ನೇ ನಡೆಸಲಾಗುವುದು. ವಿಚಾರಣೆ ಪೂರ್ಣಗೊಳ್ಳುವವರೆಗೆ ನೂತನ ನಿಯಮಗಳನ್ನು ಜಾರಿಗೊಳಿಸುವ ದಿನಾಂಕವನ್ನು ಮುಂದೂಡಿರುವ ನಿರ್ಧಾರವನ್ನು ಗೂಗಲ್‌ ಸಂಸ್ಥೆ ಹಿಂಪಡೆಯಬಾರದು. ಸಂಸ್ಥೆಯಿಂದ ಈ ಭರವಸೆ ಪಡೆದು ಈ ಅರ್ಜಿಯನ್ನು ಮುಕ್ತಾಯಗೊಳಿಸಬಹುದು ಎಂದರು.

ಸಿಸಿಐ ವಿಚಾರಣೆಗೆ ಗೂಗಲ್ ಎಲ್ಲ ರೀತಿಯ ಸಹಕಾರ‌

ಗೂಗಲ್‌ ಇಂಡಿಯಾ ಪರ ವಕೀಲರು, ಗೂಗಲ್‌ ಪ್ಲೇಸ್ಟೋರ್‌ ಬಿಲ್ಲಿಂಗ್‌ ವ್ಯವಸ್ಥೆಯನ್ನು 2022ರ ಅ.31ರ ವರೆಗೆ ಜಾರಿಗೊಳಿಸುವುದಿಲ್ಲ. ಈ ವಿಚಾರವನ್ನು ಈಗಾಗಲೇ ಗೂಗಲ್‌ ಸ್ಪಷ್ಟಪಡಿಸಿದೆ. ಇನ್ನೂ ಸಿಸಿಐ ವಿಚಾರಣೆಗೆ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. 9 ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಸಹ ಸಿಸಿಐಗೆ ಸಲ್ಲಿಸಿದೆ. ಮುಂದೆಯೂ ಸಹಕಾರ ನೀಡಲಾಗುವುದು. ಈ ಅರ್ಜಿ ಮುಕ್ತಾಗೊಳಿಸಲು ಸಂಸ್ಥೆಯ ಅಭ್ಯಂತರ ಇಲ್ಲ ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು, ಈ ಅರ್ಜಿಯನ್ನು ಮುಕ್ತಾಗೊಳಿಸುವ ಸಂಬಂಧ ಗೂಗಲ್‌ ಸಂಸ್ಥೆ ಮತ್ತು ಸಿಸಿಐ ಜಂಟಿ ಮೆಮೊ (Joint Memo) ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿತು.

ಇದನ್ನೂ ಓದಿ: Alphabet Privacy lawsuit: ಗೌಪ್ಯತಾ ನೀತಿ ಉಲ್ಲಂಘನೆ ಆರೋಪ: ಸಿಇಓ ಸುಂದರ್ ಪಿಚೈ ವಿಚಾರಣೆ

ಅಲಯನ್ಸ್‌ ಆಫ್‌ ಡಿಜಿಟಲ್ ಇಂಡಿಯಾ ಫೌಂಡೇಷನ್‌ (ADIF) ಎಂಬ ನವೋದ್ಯಮ ಸಂಸ್ಥೆಗಳ ಒಕ್ಕೂಟ ಗೂಗಲ್‌ನ ಪ್ಲೇಸ್ಟೋರ್‌ ಬಿಲ್ಲಿಂಗ್‌ ನಿಯಮಗಳ ವಿರುದ್ಧ ಸಿಸಿಐಗೆ ದೂರು ನೀಡಿತ್ತು. ಅದನ್ನು ಆಧರಿಸಿ ಸಿಸಿಐ ಡಿ.14ರಂದು ಪ್ಲೇ ಸ್ಟೋರ್‌ ನಿಯಮಗಳ ಬಗ್ಗೆ ವಿಚಾರಣೆಗೆ ಆದೇಶಿಸಿತ್ತು.

ಸಂಸ್ಥೆಗಳಿಂದ ಅಭಿಪ್ರಾಯಗಳನ್ನು ವರದಿ ಪಡೆದಿದ್ದ ಸಿಸಿಐ

ಆ್ಯಪ್ ಡೆವಲಪರ್‌ಗಳಿಂದ ಗೂಗಲ್ "ಭಾರೀ" ಕಮಿಷನ್ ಪಡೆಯುತ್ತದೆ ಎಂಬ ಆರೋಪವನ್ನು ತನಿಖೆ ನಡೆಸುತ್ತಿರುವ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI), ಎಜುಕೇಶನ್‌ ಟೆಕ್ ದೈತ್ಯ Uncademy, ಡೇಟಿಂಗ್ ಅಪ್ಲಿಕೇಶನ್‌ಗಳು TrulyMadly ಮತ್ತು Tinder, Shaadi.com ಮತ್ತು BharatMatrimony ನಂತಹ ಮ್ಯಾಟ್ರಿಮೋನಿ ಸೈಟ್‌ಗಳು ಸೇರಿದಂತೆ‌  ಕೆಲವು OTT ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಉದ್ಯಮ ಸಂಸ್ಥೆಗಳಿಂದ ವರದಿಗಳನ್ನು ಕೇಳುತ್ತಿದೆ. 

ಇದನ್ನೂ ಓದಿ: Tie up for Tokenization: ಮಾಸ್ಟರ್ ಕಾರ್ಡ್-ಗೂಗಲ್ ಪೇ ಒಪ್ಪಂದ; ಟೋಕನೈಸ್ಡ್ ಕಾರ್ಡ್ ಸೇವೆಗೆ ಸಿದ್ಧ!

ಜೂನ್‌ನಿಂದ CCI, ಗೂಗಲ್ ಕಂಪನಿಯ ಆಪ್ ಸ್ಟೋರ್ ನೀತಿಯು ಅವರ ವ್ಯವಹಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ  ಎಂದು ವಿವರಿಸಲು 10ಕ್ಕೂ ಹೆಚು  ಸ್ಟಾರ್ಟ್‌ಅಪ್‌ಗಳನ್ನು ಕೇಳಿದೆ. ಈ ಸ್ಟಾರ್ಟ್‌ಅಪ್‌ಗಳಿಗೆ ಕಳುಹಿಸಲಾದ ವಿವರವಾದ ಪ್ರಶ್ನಾವಳಿಯಲ್ಲಿ, CCI ಅವರ ಹಣಕಾಸು ವ್ಯವಹಾರ ಮತ್ತು ಗೂಗಲ್  ಪ್ಲೇಸ್ಟೋರ್ ಪಡೆಯುವ ಕಮಿಷನ್ ಪ್ರಭಾವ, ನಿರ್ವಹಣೆಯ ರಚನೆ (Management) ಮತ್ತು ಅವರ ಅಪ್ಲಿಕೇಶನ್‌ಗಳನ್ನು ಗೂಗಲ್ ಹೊರತುಪಡಿಸಿ ಇತರ ಅಪ್ಲಿಕೇಶನ್ ಸ್ಟೋರ್‌ಗಳಿಂದ ಡೌನ್‌ಲೋಡ್ ಮಾಡಲಾಗಿದೆಯೇ ಎಂಬುದರ ಕುರಿತು ಮಾಹಿತಿಯನ್ನು ಕೇಳಿದೆ.

Latest Videos
Follow Us:
Download App:
  • android
  • ios