ಬ್ರಸೆಲ್ಸ್‌[ಮಾ.21]: ಆನ್‌ಲೈನ್‌ ಮಾರುಕಟ್ಟೆಯನ್ನು ದುರುಪಯೋಗ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟದ ನಿಯಂತ್ರಣ ಸಂಸ್ಥೆಗಳು ತಂತ್ರಜ್ಞಾನ ದೈತ್ಯ ಗೂಗಲ್‌ಗೆ 11,500 ಕೋಟಿ ರು. ದಂಡ ವಿಧಿಸಿವೆ.

ವಿಶ್ವಾಸ ದ್ರೋಹಕ್ಕಾಗಿ 2017ರ ಬಳಿಕ ಗೂಗಲ್‌ಗೆ ಮೂರನೇ ಬಾರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ಅಂತರ್ಜಾಲದಲ್ಲಿ ತನ್ನ ಪ್ರಾಬಲ್ಯವನ್ನು ಗೂಗಲ್‌ ದುರ್ಬಳಕೆ ಮಾಡಿಕೊಂಡಿದೆ. ಅಂತರ್ಜಾಲದಲ್ಲಿ ಜಾಹೀರಾತುಗಳನ್ನು ಪ್ರಕಟಿಸಲು ಇರುವ ಮಾಧ್ಯಮವಾದ ಆ್ಯಂಡ್‌ ಸೆನ್ಸ್‌ ಬದಲು ಬ್ರೋಕರ್‌ಗಳನ್ನು ಬಳಸಿಕೊಂಡು ತನ್ನ ಪ್ರತಿಸ್ಪರ್ಧಿ ವೆಬ್‌ಸೈಟ್‌ಗಳನ್ನು ತಡೆ ಹಿಡಿದಿದೆ.

ಈ ಮೂಲಕ ಅಂತರ್ಜಾಲದಲ್ಲಿ ಅಸಮಂಜಸ ಸ್ಪರ್ಧೆ ಉತ್ತೇಜಿಸಿದ ಕಾರಣಕ್ಕೆ ಗೂಗಲ್‌ಗೆ ದಂಡ ವಿಧಿಸಾಲಾಗಿದೆ ಎಂದು ಐರೋಪ್ಯ ಒಕ್ಕೂಟದ ಸ್ಪರ್ಧಾತ್ಮಕ ಆಯೋಗದ ಮುಖ್ಯಸ್ಥ ಮಾರ್ಗರೇಟ್‌ ವೆಸ್ಟಜರ್‌ ಹೇಳಿದ್ದಾರೆ.