16 ದೇಶದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರ ಬಿತ್ತರಿಸಿದ ಕಾರ್ಟೂನ್ ನೆಟ್ವರ್ಕ್!| ಮೂರು ದಿನಗಳ ಕಾಲ ನಿರಂತರ ಅಡಲ್ಟ್ ವಿಡಿಯೋಗಳು ಪ್ರಸಾರ| ಪೋಷಕರು ಕುಪಿತ, ಮಕ್ಕಳಿಗೆ ಕಾರ್ಟೂನ್ ನೋಡಲು ಅವಕಾಶವಿಲ್ಲ

ನವದೆಹಲಿ[ಮೇ.10]: ಕಾರ್ಟೂನ್ ನೆಟ್ವರ್ಕ್ ವೆಬ್ಸೈಟ್ ಹಲವಾರು ದೇಶಗಳಲ್ಲಿ ಏಕಕಾಲಕ್ಕೆ ಹ್ಯಾಕ್ ಆಗಿ, ಅವಾಂತರ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಮಕ್ಕಳು ನೋಡುವ ಈ ಚಾನೆಲ್ ನಲ್ಲಿ ಬರೋಬ್ಬರಿ ಮೂರು ದಿನಗಳವರೆಗೆ ಪೋರ್ನ್ ವಿಡಿಯೋಗಳೇ ಪ್ರಸರವಾಗಿವೆ.

ಹೌದು ಬ್ರೆಜಿಲ್ ಮೂಲದ ಇಬ್ಬರು 16 ದೇಶಗಳಲ್ಲಿ ಕಾರ್ಟೂನ್ ನೆಟ್ವರ್ಕ್ ನ ವೆಬ್ ಸೈಟ್ ಹ್ಯಾಕ್ ಮಾಡಿದ್ದಾರೆ. ಬಳಿಕ ಕಾರ್ಟೂನ್ ಬದಲು ಅರೇಬಿಕ್ ಮೀಮ್ಸ್, ಬ್ರೆಜಿಲಿಯನ್ ಹಿಪ್ ಹಾಪ್ ಹಾಗೂ ಬ್ರೆಜಿಲಿಯನ್ ಸ್ಟ್ರಿಪರ್ಸ್ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ. ಕರ್ಟೂನ್ ನೆಟ್ವರ್ಕ್ ನಲ್ಲಿ ಈ ಅಶ್ಲೀಲ ವಿಡಿಯೋಗಳನ್ನು ಗಮನಿಸಿದ ಪೋಷಕರು ಮಾತ್ರ ಕುಪಿತರಾಗಿದ್ದಾರೆ. ವಾರಾಂತ್ಯವಿಡೀ ಈ ಚಾನೆಲ್ ಹ್ಯಾಕ್ ಆಗಿತ್ತು. ಹೀಗಿದ್ದರೂ ಚಾನೆಲ್ ಮತ್ರ ಈ ಕುರಿತಾಗಿ ಯವುದೇ ಸ್ಪಷ್ಟೀಕರಣ ನೀಡಿಲ್ಲ.

Scroll to load tweet…

ವರದಿಗಳನ್ವಯ ಇಬ್ಬರು ಹ್ಯಾಕರ್ಸ್ ಆಫ್ರಿಕಾ, ಅಮೆರಿಕಾ, ಅರಬ್, ಬ್ರೆಜಿಲ್, ಚೆಕ್ ರಿಪಬ್ಲಿಕ್, ಡೆನ್ಮರ್ಕ್, ಜರ್ಮನಿ, ಹಂಗ್ರಿ, ಇಟಲಿ, ಮೆಕ್ಸಿಕೋ, ನೆದರ್ಲ್ಯಾಂಡ್, ಪೋಲ್ಯಾಂಡ್, ರೊಮಾನಿಯಾ, ರಷ್ಯಾ ಹಾಗೂ ಟರ್ಕಿಯಲ್ಲಿ ಕಾರ್ಟೂನ್ ನೆಟ್ವರ್ಕ್ ಹ್ಯಾಕ್ ಮಾಡಿದ್ದು, ಏಪ್ರಿಲ್ 25ರಂದು ಈ ವಿಚಾರ ಬಯಲಾಗಿದೆ. ಇದಾದ ಬಳಿಕ ಕಾರ್ಟೂನ್ ನೆಟ್ವರ್ಕ್ ತನ್ನ ವೆಬ್ಸೈಟ್ ಸ್ಥಗಿತಗೊಳಿಸಿ, ನೂತನ ವರ್ಶನ್ ಅಪ್ಲೋಡ್ ಮಾಡಿದೆ. ಬೇಸತ್ತ ಜನರು ಟ್ವಿಟರ್ ನಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡಿ ಈ ವಿಚಾರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to load tweet…

ಟ್ವೀಟ್ ನಲ್ಲಿ ಹ್ಯಾಕರ್ಸ್ ಕಾರ್ಟೂನ್ ನೆಟ್ವರ್ಕ್ ನ ಇನ್ನಿತರ ವೆಬ್ ಸೈಟ್ ಗಳ ಮಾಹಿತಿಯೂ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದಾರೆ.