ನವದೆಹಲಿ(ಸೆ. 14): ಐಫೋನ್ ಕೊಳ್ಳುವ ಹೆಬ್ಬಯಕೆ ಹೊಂದಿದವರಿಗೆ ಭರ್ಜರಿ ಆಫರ್ ಬಂದಿದೆ. ನಿಮ್ಮಲ್ಲಿ ಆಧಾರ್ ಕಾರ್ಡ್ ಇದ್ದರೆ ಬಹಳ ಸುಲಭ ಬೆಲೆಯಲ್ಲಿ ಆ್ಯಪಲ್ ಐಫೋನ್'ನ ಹೊಚ್ಚ ಹೊಸ ಮಾಡೆಲನ್ನು ಕೊಳ್ಳಬಹುದು. ಆಧಾರ್ ಕಾರ್ಡ್ ತೋರಿ ಕೇವಲ 1,700 ರೂಪಾಯಿ ಡೌನ್'ಪೇಮೆಂಟ್ ಮಾಡಿ ಐಫೋನ್7 ಕೊಳ್ಳಬಹುದು. ಮಿಕ್ಕ ಹಣವನ್ನು ನಿರ್ದಿಷ್ಟ ತಿಂಗಳ ಕಂತಿನಲ್ಲಿ ಪಾವತಿಸಬಹುದಾಗಿದೆ. ನಿನ್ನೆ ಬಿಡುಗಡೆಯಾದ ಐಫೋನ್-7 ಬೆಲೆ ಸದ್ಯ ಮಾರುಕಟ್ಟೆಯಲ್ಲಿ ಸುಮಾರು 60-80 ಸಾವಿರವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆ್ಯಪಲ್ ಸಂಸ್ಥೆ ಇಂಥದ್ದೊಂದು ಮಾರ್ಕೆಟಿಂಗ್ ಐಡಿಯಾ ಮಾಡಿಟ್ಟುಕೊಂಡಿದೆ. ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಭಾರತದ ಬ್ಯಾಂಕುಗಳೊಂದಿಗೆ ಆ್ಯಪಲ್ ಸಂಸ್ಥೆ ಸಮಾಲೋಚನೆ ನಡೆಸುತ್ತಿದೆ. ಸದ್ಯದಲ್ಲೇ ಈ ಆಫರ್ ಅಧಿಕೃತವಾಗಿ ಹೊರಬರಲಿದೆ ಎಂದು ಕೆಲ ಮಾಧ್ಯಮಗಳಲ್ಲಿ ಮಾಹಿತಿ ಪ್ರಕಟವಾಗಿದೆ.