ಜಿಯೋಗೆ ಸೆಡ್ಡು ಹೊಡೆದ BSNL! ಈ ಪ್ಲಾನ್‌ನಲ್ಲಿ ಪ್ರತಿದಿನ 3.21 GB ಡೇಟಾ ಉಚಿತ!

ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಹವಾ ಸೃಷ್ಟಿಸಿದ್ದ ಜಿಯೋಗೆ ಸದ್ಯ ಸ್ಪರ್ಧೆಯೊಡ್ಡಲು BSNL ಅಣಿಯಾಗಿದೆ. BSNL ನ ಈ ಪ್ಲಾನ್ ಗ್ರಾಹಕರಿಗೆ ಖುಷಿ ನೀಡಿದ್ದರೂ, ಜಿಯೋಗೆ ಬಹುದೊಡ್ಡ ತಲೆನೋವಾಗಲಿದೆ.

BSNL Rs 399 Recharge Offers 3 21GB Daily Data for 74 Days to Counter Jio

ಈ ಸ್ಪರ್ಧೆ ರಿಲಾಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಟೆಲಿಕಾಂ ಕಂಪೆನಿಗಳು ನೂತನ ಹಾಗೂ ಆಕರ್ಷಕ ಪ್ಲಾನ್ ಗಳನ್ನು ಬಗ್ರಾಹಕರಿಗಾಗಿ ನೀಡುತ್ತಿವೆ. ಈ ಮೂಲಕ ತಮ್ಮಿಂದ ದೂರ ಸರಿದ ಗ್ರಾಹಕರನ್ನು ಮತ್ತೆ ಹಿಂಪಡೆಯಲು ಯತ್ನಿಸುತ್ತಿವೆ. ಸದ್ಯ ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ತಮ್ಮತ್ತ ಆಕರ್ಷಿಸಲು ಸ್ಪರ್ಧೆಗೆ ಬಿದ್ದಂತೆ ಹೊಸ ಆಫರ್ ಗಲನ್ನು ನೀಡುವುದರೊಂದಿಗೆ, ತಮ್ಮ ಹಳೆಯ ಪ್ಲಾನ್ ಗಳಲ್ಲೂ ಬದಲಾವಣೆ ತರುತ್ತಿದೆ. ಈ ಬಾರಿ BSNL ತನ್ನ 399 ರೂಪಾಯಿ ಯೋಜನೆಯಲ್ಲಿ ಬದಲಾವಣೆ ತರಲು ಮುಂದಾಗಹಿದೆ. ಈ ಮೂಲಕ ಜಿಯೋ ಸೇರಿದಂತೆ ಇನ್ನಿತರ ಟೆಲಿಕಾಂ ಕಂಪೆನಿಗಳಿಗೆ ಸ್ಪರ್ಧೆ ನೀಡಲು ಸಜ್ಜಾಗಿದೆ.

BSNL ತಾನು ಈ ಹಿಂದೆ ಆರಂಭಿಸಿದ್ದ ರೂ. 399 ಪ್ಲಾನ್‌ನಲ್ಲಿ ಬದಲಾವಣೆ ತಂದಿದೆ. ಈ ಹಿಂದೆ BSNL 399 ರೂಪಾಯಿಗೆ ಕೇಲವ 1GB ಡೇಟಾವನ್ನು ನೀಡುತ್ತಿತ್ತು. ಆದರೆ ಇನ್ಮುಂದೆ ಪ್ರತಿ ದಿನ 3.21 GB ಡೇಟಾ ಸಿಗಲಿದೆ. ಅಲ್ಲದೇ ಈ ಪ್ಲಾನ್ 74 ದಿನಗಳ ವ್ಯಾಲಿಡಿಟಿ ಹೊಂದಿದೆ.

ಈ ಬದಲಾವಣೆಯ ಬಳಿಕ ಗ್ರಾಹಕರಿಗೆ ಒಟ್ಟು 237.54GB ಡೇಟಾ ಸಿಗಲಿದೆ. ಇಷ್ಟೇ ಅಲ್ಲದೇ, ಈ ಯೋಜನೆಯನ್ನು 3G ಹಾಗೂ ಜಿ ನೆಟ್ವರ್ಕ್ 2G ನೆಟ್ವಕ್ಸ್ ನಲ್ಲಿ ಬಳಸಬಹುದಾಗಿದೆ. ಇಂಟರ್ನೆಟ್ ಸೌಲಭ್ಯದೊಂದಿಗೆ ಅನಿಯಮಿತ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಉಚಿತವಿರಲಿವೆ.

2018ರ ಆಗಸ್ಟ್ 26ರಂದು BSNL ಆರಂಭಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬಾರದ ಕಾರಣ ಸದ್ಯ ಬದಲಾವಣೆಯನ್ನು ತಂದಿದೆ. ಸದ್ಯ ಟೆಲಿಕಾಂ ಕ್ಷೇತ್ರದಲ್ಲಿ ರಾರಾಜಿಸುತ್ತಿರುವ ಜಿಯೋಗೆ BSNL ನ ಈ ಪ್ಲಾನ್ ಹೊಡ ತಲೆನೋವಾಗಲಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ರಿಲಾಯನ್ಸ್ ಜಿಯೋದ 399 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ, ಪ್ರತಿ ದಿನ 1.5GB ಡೇಟಾ ಹಾಗೂ 100 SMS ಸಿಗುತ್ತಿದೆ.

Latest Videos
Follow Us:
Download App:
  • android
  • ios