BSNL ತನ್ನ 45 ದಿನಗಳ ಮೊಬೈಲ್ ರೀಚಾರ್ಜ್ ಪ್ಲಾನ್‌ನೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ, ಇದು Jio ಮತ್ತು Airtel ನಂತಹ ದೈತ್ಯರಿಗೆ ಸವಾಲೊಡ್ಡುತ್ತಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ನೀಡುತ್ತಿರುವುದರಿಂದ ಗ್ರಾಹಕರು BSNL ಗೆ ಪೋರ್ಟ್ ಮಾಡಲು ಈ ಪ್ಲಾನ್ ಕಾರಣವಾಗಿದೆ.

ನವದೆಹಲಿ: ಬಿಎಸ್‌ಎನ್‌ಎಲ್ ತನ್ನ ಮೊಬೈಲ್ ರೀಚಾರ್ಜ್ ಪ್ಲಾನ್‌ಗಳ ಮೂಲಕ ಟೆಲಿಕಾಂ ಲೋಕದಲ್ಲಿ ಸಂಚಲನ ಸೃಷ್ಟಿಸೋದರ ಜೊತೆಗೆ ಖಾಸಗಿ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ನಡುಕು ಹುಟ್ಟಿಸಿದೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮೂರು ಕಂಪನಿಗಳು ಮೊಬೈಲ್ ರೀಚಾರ್ಜ್ ಪ್ಲಾನ್‌ ಬೆಲೆ ಹೆಚ್ಚಿಸಿವೆ. ಇತ್ತ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಯಲ್ಲಿ ಅತ್ಯಧಿಕ ವ್ಯಾಲಿಡಿಟಿ ಪ್ಲಾನ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸರ್ಕಾರಿ ಕಂಪನಿಯಾಗಿರುವ ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ 45 ದಿನದ ಪ್ಲಾನ್‌ ನೀಡುತ್ತಿದೆ. ಈ ಪ್ಲಾನ್‌ ನೋಡಿದ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ತಮ್ಮ ನಂಬರ್ ಪೋರ್ಟ್ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ತಮ್ಮ ಎಲ್ಲಾ ಹಳೆಯ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿಕೊಂಡಿವೆ. ಈ ಮೂರು ಟೆಲಿಕಾಂ ಕಂಪನಿಗಳು 28 ಅಥವಾ 30 ದಿನದ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಮಾತ್ರ ನೀಡುತ್ತಿದೆ. ಬಿಎಸ್‌ಎನ್‌ಎಲ್‌ 45 ದಿನಗಳವರೆಗಿನ ವ್ಯಾಲಿಡಿಟಿಯ ಪ್ಲಾನ್ ಒದಗಿಸುತ್ತದೆ. ಹೀಗಾಗಿಯೇ ಮೊಬೈಲ್ ಬಳಕೆದಾರರು ಬಿಎಸ್‌ಎನ್‌ಎಲ್ ನತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಕೇವಲ 1 ರೂ ನಿಂದ Vi ಆಟಕ್ಕೆ ಬ್ರೇಕ್ ಹಾಕಿದ ಜಿಯೋ: ಕೈ-ಕೈ ಹಿಸುಕಿಕೊಂಡ ಏರ್‌ಟೆಲ್‌ ಗ್ರಾಹಕರು!

ಈ ಒಂದು ಪ್ಲಾನ್‌ನಿಂದಾಗಿಯೇ ಬಿಎಸ್‌ಎನ್ಎಲ್ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಿವೆ. ಮತ್ತೊಂದೆಡೆ ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್ ಸ್ಥಾಪನೆಯಾಗುತ್ತಿರೋದು ಗ್ರಾಹಕರ ಆಕರ್ಷಣೆಗೆ ಮತ್ತೊಂದು ಕಾರಣವಾಗಿದೆ. ಇದರ ಜೊತೆಯಲ್ಲಿ ಬಿಎಸ್‌ಎನ್‌ಎಲ್ ವರ್ಷದ ಪ್ಲಾನ್‌ಗಳ ಖಾಸಗಿ ಕಂಪನಿಗಳಿಗಿಂತ ಕಡಿಮೆ ದರದಲ್ಲಿ ನೀಡುತ್ತಿವೆ.

BSNL's Rs 249 Plan
ಬಿಎಸ್‌ಎನ್‌ಎಲ್ ಗ್ರಾಹಕರಿಗೆ 45 ದಿನಗಳವರೆಗೆ 90GB ಡೇಟಾ ಸಿಗುತ್ತದೆ. ಅಂದರೆ ಪ್ರತಿದಿನ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸಿಗಲಿದೆ. ಪ್ರತಿದಿನ ಡೇಟಾ ಬಳಕೆದಾರರಿಗೆ ಈ ಯೋಜನೆ ಒಳ್ಳೆಯ ಆಯ್ಕೆಯಾಗಿದೆ. ಮಧ್ಯಮ ವರ್ಗದ ಸ್ನೇಹಿಯ ಪ್ಲಾನ್ ಇದಾಗಿದೆ. 249 ರೂಪಾಯಿ ರೀಚಾರ್ಜ್ ಪ್ಲಾನ್ ಕೇವಲ ಹೊಸ ಬಳಕೆದಾರರಿಗೆ ಮಾತ್ರ ಸಿಗಲಿದೆ. ಮೊದಲ ಬಾರಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ ಬರೋರಿಗೆ ಈ ವಿಶೇಷ ಆಫರ್ ಲಭ್ಯವಾಗಲಿದೆ.

ಸರ್ಕಾರದಿಂದ BSNLಗೆ ₹6 ಸಾವಿರ ಕೋಟಿ, ಇನ್ಮುಂದೆ 365 ದಿನ ವ್ಯಾಲಿಡಿಟಿಗೆ ಕೇವಲ ಇಷ್ಟೇ ಕೊಡೋದು!