ಬಿಎಸ್ಎನ್ಎಲ್’ನಿಂದ ಗ್ರಾಹಕರಿಗೆ ಬಂಪರ್ ಆಫರ್

First Published 10, Feb 2018, 2:55 PM IST
BSNL Offers users unlimited data and calls Offer
Highlights

ಟೆಲಿಕಾಂ ಮಾರುಕಟ್ಟೆಯಲ್ಲಿ  ಭಾರತದಲ್ಲಿ ನಿತ್ಯವೂ ಬೇರೆ ಬೇರೆ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡುತ್ತಲೇ ಇದೆ. ಒಂದರ ಮೇಲೊಂದು ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ರೀತಿಯ ಆಫರ್ ನೀಡುತ್ತಿವೆ. ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಹೊಸದಾದ ಆಫರ್ ನೀಡಿದೆ.

ನವದೆಹಲಿ : ಟೆಲಿಕಾಂ ಮಾರುಕಟ್ಟೆಯಲ್ಲಿ  ಭಾರತದಲ್ಲಿ ನಿತ್ಯವೂ ಬೇರೆ ಬೇರೆ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡುತ್ತಲೇ ಇದೆ. ಒಂದರ ಮೇಲೊಂದು ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ರೀತಿಯ ಆಫರ್ ನೀಡುತ್ತಿವೆ. ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಹೊಸದಾದ ಆಫರ್ ನೀಡಿದೆ.

84 ದಿನಗಳ ಕಾಲ ಇದರ ಅವಧಿ ಇದ್ದು, ಒಟ್ಟು 1099 ರು. ರಿಚಾರ್ಜ್ ಮಾಡಿಸಬೇಕಾಗುತ್ತದೆ. ಇದರಲ್ಲಿ ಉಚಿತ ರಿಂಗ್ ಬ್ಯಾಕ್ ಟೋನ್ ಸೌಲಭ್ಯ, ಅನಿಯಮಿತ 3ಜಿ, 4ಜಿ ಡೇಟಾ ಸೌಲಭ್ಯ, ದಿನಕ್ಕೆ 100 ಎಸ್ಎಂಎಸ್ ಸೌಲಭ್ಯ,  ಸ್ಥಳೀಯ, ರಾಷ್ಟ್ರೀಯ ಉಚಿತ ಕರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಮಾರುಕಟ್ಟೆಯಲ್ಲಿ ರಿಲಾಯನ್ಸ್ ಜಿಯೋ ಅನಿಯಮಿತ ಕರೆ ಹಾಗೂ ಡೇಟಾ ಸೌಲಭ್ಯವನ್ನು ನೀಡಿದ ಬಳಿಕ ಏರ್’ಟೆಲ್ ಹಾಗೂ ವೊಡಾಫೋನ್ ಕಂಪನಿಗಳೂ ಕೂಡ ಪೈಪೋಟಿಗೆ ಬಿದ್ದಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು.

ಇವುಗಳಿಗೆ ಪೈಪೋಟಿ ನೀಡಲು ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಕೂಡ ತನ್ನ ಗ್ರಾಹಕರಿಗೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿತು. ಇದೀಗ ಮತ್ತೆ ಬಿಎಸ್ಎನ್ಎಲ್ ನೂತನ ಆಫರ್ ಒಂದನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಿದೆ.

loader