ಕೆಲ ದಿನಗಳ ಹಿಂದಷ್ಟೇ ಮೂರು ತಿಂಗಳ ಭರ್ಜರಿ ಆಫರ್ ನೀಡಿದ್ದ ಬಿಎಸ್ಎನ್ಎಲ್ ಇದೀಗ ಮತ್ತೊಂದು ಹೊಸ ಆಫರ್ ನೀಡಿದೆ.
ನವದೆಹಲಿ : ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇವಾ ಸೌಲಭ್ಯವನ್ನು ಒದಗಿಸಿದ ಬೆನ್ನಲ್ಲೇ ಪೈಪೋಟಿ ನೀಡಲು ಅನೇಕ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವಿವಿಧ ರೀತಿಯಾದ ಆಫರ್ ನೀಡಿದವು.
ಆಫರ್ ನೀಡುವಲ್ಲಿ ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಕೂಡ ಹಿಂದೆ ಬಿದ್ದಿಲ್ಲ. ಕೆಲ ದಿನಗಳ ಹಿಂದಷ್ಟೇ ಮೂರು ತಿಂಗಳ ಭರ್ಜರಿ ಆಫರ್ ನೀಡಿದ್ದ ಬಿಎಸ್ಎನ್ಎಲ್ ಇದೀಗ ಮತ್ತೊಂದು ಹೊಸ ಆಫರ್ ನೀಡಿದೆ.
999 ರೂ. ರಿಚಾರ್ಜ್ ಮಾಡಿಸಿಕೊಂಡಲ್ಲಿ ಒಂದು ವರ್ಷಗಳ ಕಾಲ ಪ್ರತಿದಿನ 1 ಜಿಬಿ ಚಿತ ಡೇಟಾ ಹಾಗೂ 181 ದಿನಗಳ ಕಾಲ ಉಚಿತ ಅನಿಯಮಿತ ಕರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಹಾಗೂ ಎಸ್’ಟಿಡಿಗೆ ಕರೆಯ ಉಚಿತ ಸೌಲಭ್ಯವಿದೆ.
ಆದರೆ ಈ ಸೌಲಭ್ಯವು ಅಸ್ಸಾಂ, ಜಮ್ಮು ಕಾಶ್ಮೀರದಂತ ರಾಜ್ಯಗಳಲ್ಲಿ ಲಭ್ಯವಿರುವುದಿಲ್ಲ.
