2017ರ ನವಂಬರ್'ನಿಂದಲೆ ಈ ಯೋಜನೆ ಲಭ್ಯವಾಗಲಿದೆ. ರೂ.1525, 1125, 799, 725, 525, 325, 225 ಗಳಿಗೆ ಈ ಆಫರ್ ಲಭ್ಯವಾಗಲಿದೆ

ಮುಂಬೈ(ನ.11): ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್'ಎನ್'ಎಲ್ ನೂತನ 'ಲೂಟ್ ಲೋ' ಆಫರ್ ಪ್ರಕಟಿಸಿದ್ದು, ಈ ಯೋಜನೆಯಲ್ಲಿ ಪೋಸ್ಟ್ ಪೈಯ್ಡ್ ಚೆಂದಾದಾರರು ಶೇ. 60ರಷ್ಟು ರಿಯಾಯಿತಿ ಪಡೆಯಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2017ರ ನವಂಬರ್'ನಿಂದಲೆ ಈ ಯೋಜನೆ ಲಭ್ಯವಾಗಲಿದೆ. ರೂ.1525, 1125, 799, 725, 525, 325, 225 ಗಳಿಗೆ ಈ ಆಫರ್ ಲಭ್ಯವಾಗಲಿದೆ. ಈ ಯೋಜನೆಗಳಿಗೆ ಗ್ರಾಹಕರು 12 ತಿಂಗಳು ಮುಂಗಡವಾಗಿ ಪಾವತಿಸಿದರೆ ಶೇ.60 ಆಫರ್'ಗೆ ಅರ್ಹರಾಗುತ್ತಾರೆ. 1525, 1125 ರೂ. ಗೆ ಶೇ.60 ಬಾಕಿ ಪಾವತಿ, 799,725 ರೂ. ಗೆ ಶೇ.50, ರೂ. 525,325 ಕ್ಕೆ ಶೇ.25 ಹಾಗೂ 225 ರೂ.ಗೆ ಶೇ.20 ಬಾಕಿ ಪಾವತಿ ದೊರೆಯಲಿದೆ.

ಮೇಲಿನ ಯೋಜನೆಗಳಿಗೆ 6 ತಿಂಗಳ ಮುಂಗಡ ಪಾವತಿಸಿದರೆ ಶೇ.45ರಿಂದ ಶೇ.8 ಹಾಗೂ 3 ತಿಂಗಳ ಮುಂಗಡ ಪಾವತಿಸಿದರೆ ಶೇ.30ರಿಂದ ಶೇ.4 ರಿಯಾಯಿತಿ ಪಡೆಯುತ್ತಾರೆ.