BSNL 4G: ಸೆಪ್ಟೆಂಬರ್ 2022 ರ ವೇಳೆಗೆ ಭಾರತದಲ್ಲಿ ಬಿಎಸ್‌ಎನ್‌ಎಲ್ 4G ಪ್ರಾರಂಭ?

*ಸರ್ಕಾರಿ ಸ್ವಾಮ್ಯದ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್
*ಸೆಪ್ಟೆಂಬರ್ 2022 ರ ವೇಳೆಗೆ ಭಾರತದಲ್ಲಿ ಬಿಎಸ್‌ಎನ್‌ಎಲ್ 4G?
*ಅಂದಾಜು ಸುಮಾರು 900 ಕೋಟಿ ರೂಪಾಯಿ ಆದಾಯ ಸಾಧ್ಯತೆ!

BSNL likely to launch 4G in India by September 2022 incremental revenue of 900 crore expected mnj

ನವದೆಹಲಿ(ಡಿ. 04): ಸರ್ಕಾರಿ ಸ್ವಾಮ್ಯದ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ಸೆಪ್ಟೆಂಬರ್ 2022 ರ ಒಳಗೆ ತನ್ನ 4G ಸೇವೆಗಳನ್ನು ಹೊರತರುವ ಸಾಧ್ಯತೆಯಿದೆ. 4G ಬಿಡುಗಡೆಯಿಂದ ಮೊದಲ ವರ್ಷದಲ್ಲಿ ಅಂದಾಜು ಸುಮಾರು 900 ಕೋಟಿ ರೂಪಾಯಿ ಆದಾಯ (Revenue) ಬರುವ ಸಾಧ್ಯತೆ ಇದೆ ಎಂದು ಸಂಸತ್ತಿಗೆ ಬುಧವಾರ ತಿಳಿಸಲಾಗಿದೆ. ಈ ಬೆನ್ನಲ್ಲೇ ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಸಂಪರ್ಕ ಖಾತೆ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ (Devusinh Chauhan), ಬಿಎಸ್‌ಎನ್‌ಎಲ್ (BSNL) ಮತ್ತು ಎಂಟಿಎನ್‌ಎಲ್‌ನ (MTNL) ಹೂಡಿಕೆಯನ್ನು ಹಿಂಪಡೆಯಲು ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಹೇಳಿದ್ದಾರೆ.

"ಪ್ಯಾನ್-ಇಂಡಿಯಾ (Pam India) 4G ಬಿಡುಗಡೆಯಿಂದ ಮೊದಲ ವರ್ಷದಲ್ಲಿ ಸುಮಾರು 900 ಕೋಟಿ ರೂಪಾಯಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು BSNL ಅಂದಾಜಿಸಿದೆ," ಎಂದು ಚೌಹಾನ್ ಹೇಳಿದರು. ಈ ಯೋಜನೆಯ ಪ್ರೂಫ್ ಆಫ ಕನ್ಸೆಪ್ಟ್‌ ಸಿದ್ಧಪಡಿಸಲು ( Proof of Concept) ಹಾಗೂ  ಮುಂಬರುವ BSNL 4G ರೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಕಂಪನಿಗಳನ್ನು  ಜನವರಿ 2021 ರಲ್ಲಿ ಆಹ್ವಾನಿಸಲಾಗಿತ್ತು. BSNL ಮತ್ತು MTNL ನ ಆಸ್ತಿಗಳು ಮಾರ್ಚ್ 2021 ಕ್ಕೆ ಕ್ರಮವಾಗಿ 133953 ಕೋಟಿ ಮತ್ತು 3252 ಕೋಟಿಗಳಾಗಿವೆ ಹಾಗೂ ಸೆಪ್ಟೆಂಬರ್ 30, 2021 ರಂತೆ ಕಂಪನಿಯ ಸಾಲಸೋಲಗಳು (liabilities) ಕ್ರಮವಾಗಿ 85721 ಕೋಟಿ ಮತ್ತು 30159 ಕೋಟಿ ರೂ ಆಗಿವೆ ಎಂದು PTI ವರದಿ ಮಾಡಿದೆ.

ಆತ್ಮ ನಿರ್ಭರ ಭಾರತ್ ಯೋಜನೆ ಸಾಕಾರವಾಗುತ್ತಿದೆ!

ಅಕ್ಟೋಬರ್‌ನಲ್ಲಿ, ಟೆಲಿಕಾಂ ಇಲಾಖೆಯ ಕಾರ್ಯದರ್ಶಿ, ಪರೀಕ್ಷಾರ್ಥವಾಗಿ BSNL ನೆಟ್‌ವರ್ಕ್‌ನಲ್ಲಿ ಸ್ಥಾಪಿಸಲಾದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4G ತಂತ್ರಜ್ಞಾನದ ಮೊದಲ ಪರೀಕ್ಷಾ ಕರೆಯನ್ನು (Test Call) ಮಾಡಿದರು. BSNL ಚಂಡೀಗಢದಲ್ಲಿ ಟಾಟಾ ಕನ್ಸಲ್ಟೆನ್ಸಿ  ಸರ್ವಿಸಸ್ (TCS) ಮತ್ತು ರಾಜ್ಯದ ಟೆಲಿಕಾಂ ಸಂಶೋಧನಾ ಸಂಸ್ಥೆ C-DOT ಯೊಂದಿಗೆ ಪ್ರೂಫ್ ಆಫ ಕನ್ಸೆಪ್ಟ್ (PoC) ಅನ್ನು ನಡೆಸುತ್ತಿದೆ. ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವೀಟ್‌ನಲ್ಲಿ, "ಬಿಎಸ್‌ಎನ್‌ಎಲ್‌ನ ಭಾರತದಲ್ಲೇ ವಿನ್ಯಾಸಗೊಳಿಸಲಾಗಿದೆ ಮತ್ತು ಭಾರತದಲ್ಲಿ ತಯಾರಿಸಲಾದ 4G ನೆಟ್‌ವರ್ಕ್ ಮೂಲಕ ಮೊದಲ ಕರೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಜಿ ಅವರ ಆತ್ಮ ನಿರ್ಭರ ಭಾರತ್ ಯೋಜನೆ ಸಾಕಾರವಾಗುತ್ತಿದೆ." ಎಂದು ಹೇಳಿದ್ದಾರೆ.

 

 

ಚಂಡೀಗಢದಲ್ಲಿ ಬಿಎಸ್‌ಎನ್‌ಎಲ್‌ನಲ್ಲಿ ಸ್ಥಾಪಿಸಲಾದ ಭಾರತದಲ್ಲಿ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಸಲಾದ 4G ನೆಟ್‌ವರ್ಕ್‌ನಿಂದ ಮೊದಲ ಪರೀಕ್ಷಾ ಕರೆಯನ್ನು ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. " ಟೆಲಿಕಾಂ, ಭಾರತದ ಸರ್ಕಾರದ ಕಾರ್ಯದರ್ಶಿ (Telecom, Government of India) ಕೆ ರಾಜಾರಾಮನ್ ಅವರು ಸಂಪರ್ಕ, ಐಟಿ ಮತ್ತು ರೈಲ್ವೇಸ್  ಸಚಿವೆ  ಅಶ್ವಿನಿ ವೈಷ್ಣವ್ ಅವರಿಗೆ ಹೊಸದಾಗಿ ಸ್ಥಾಪಿಸಲಾದ 4G ಉಪಕರಣದಿಂದ ಐಪಿ ವೀಡಿಯೊ ಕರೆಯನ್ನು (IP Video Call) ಮಾಡಿದ್ದಾರೆ. ಡೇಟಾ ಬ್ರೌಸಿಂಗ್ (Data Browsing) ಮತ್ತು ವೀಡಿಯೊ ಸ್ಟ್ರೀಮಿಂಗ್ (Video Streaming) ಅನ್ನು ಸಹ ಪ್ರದರ್ಶಿಸಲಾಯಿತು" ಎಂದು ಹೇಳಿಕೆ ತಿಳಿಸಿದೆ. ಏತನ್ಮಧ್ಯೆ, ಖಾಸಗಿ ಟೆಲಿ ಕಂಪನಿಗಳಾದ ಏರ್ಟೆಲ್ (Airtel) , ಜಿಯೋ (Jio) ಮತ್ತು ವೊಡಾಫೋನ್ ಐಡಿಯಾ (Vodafone Idea) ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ 5G ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿವೆ.

Latest Videos
Follow Us:
Download App:
  • android
  • ios