ನವದೆಹಲಿ(ಮಾ.21): ಕೊರೋನಾ ತಡೆಗಾಗಿ ಖಾಸಗಿ ಕಂಪನಿಗಳು ಹಾಗೂ ಸರ್ಕಾರಿ ಸಂಸ್ಥೆಗಳು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಕೂಲವಾಗುವಂತೆ ನೆರವು ಕಲ್ಪಿಸಲು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆ ಮುಂದಾಗಿದೆ.

ಇದಕ್ಕಾಗಿ ತನ್ನ ಹಾಲಿ ಇರುವ ಲ್ಯಾಂಡ್‌ಲೈನ್‌ ಗ್ರಾಹಕರು ಹಾಗೂ ನೂತನ ಗ್ರಾಹಕರಿಗೆ ಒಂದು ತಿಂಗಳ ಕಾಲ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ ಕಲ್ಪಿಸುವುದಾಗಿ ಬಿಎಸ್‌ಎನ್‌ಎಲ್‌ ಘೋಷಣೆ ಮಾಡಿದೆ.

ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇಬಲ್‌ ಮೂಲಕ ಹೊಸ ಸಂಪರ್ಕ ಪಡೆಯಲು ಇಚ್ಛಿಸುವ ಗ್ರಾಹಕರು ಇನ್‌ಸ್ಟಾಲೇಷನ್‌ ಶುಲ್ಕವನ್ನೂ ಸಹ ಪಾವತಿಸಬೇಕಿಲ್ಲ. ಆದರೆ, ಸೇವೆಯ ಮಾಡೆಮ್‌ಗೆ ಮಾತ್ರವೇ ಹಣ ಪಾವತಿಸಬೇಕಿದೆ.