ಬಿಎಸ್‌ಎನ್‌ಎಲ್‌ನಿಂದ ನಿಂದ ಭರ್ಜರಿ ಈದ್ ಆಫರ್

technology | Thursday, June 14th, 2018
Suvarna Web Desk
Highlights

ಈದ್ ಉಲ್ ಫಿತರ್ ಹಬ್ಬದ ಅಂಗವಾಗಿ ಬಿಎಸ್‌ಎನ್‌ಎಲ್ ವತಿಯಿಂದ ಗ್ರಾಹಕರಿಗೆ 786 ರು. ವಿಶೇಷ ರೀಚಾರ್ಜ್ ಕೊಡುಗೆ ನೀಡಲಾಗಿದೆ.

ಬೆಂಗಳೂರು: ಈದ್ ಉಲ್ ಫಿತರ್ ಹಬ್ಬದ ಅಂಗವಾಗಿ ಬಿಎಸ್‌ಎನ್‌ಎಲ್ ವತಿಯಿಂದ ಗ್ರಾಹಕರಿಗೆ ವಿಶೇಷ ರೀಚಾರ್ಜ್ ಕೊಡುಗೆ ನೀಡಲಾಗಿದೆ.

ಬಿಎಸ್‌ಎನ್‌ಎಲ್ ಪ್ರೀಪೇಯ್ಡ್ ಗ್ರಾಹಕರು 786 ರು.ಗೆ ರೀಚಾರ್ಜ್ ಮಾಡಿಸಿಕೊಂಡರೆ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 2 ಜಿ.ಬಿ ಡಾಟಾ, 100 ಎಸ್ ಎಂಎಸ್, 150 ದಿನ ವ್ಯಾಲಿಡಿಟಿ ಪಡೆಯಬಹುದು.

ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಜೂ 26 ವರೆಗೆ ಮಾತ್ರ ಲಭ್ಯವಿದೆ. ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಎಸ್ಎನ್ಎಲ್ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ಮುಖ್ಯ ಮಹಾ ಪ್ರಬಂಧಕ ಆರ್.ಮಣಿ ತಿಳಿಸಿದ್ದಾರೆ. 

Comments 0
Add Comment

    ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿ ಮುರಿದುಕೊಂಡಿದ್ದು ಯಾಕೆ?

    news | Tuesday, June 19th, 2018