ಬೆಂಗಳೂರು: ದೇಶದ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಸೆನ್ನೆಲ್‌) ತನ್ನ ಗ್ರಾಹಕರಿಗಾಗಿ ನೂತನ ‘ಕ್ಯಾಷ್‌ ಬ್ಯಾಕ್‌’ ಯೋಜನೆ ಘೋಷಿಸಿದೆ. ಸಂಸ್ಥೆಯು ಲ್ಯಾಂಡ್‌ಲೈನ್‌ ಬಳಕೆದಾರರು ವೈಫೈ ಸಂಪರ್ಕ ಪಡೆಯುವುದನ್ನು ಪ್ರೋತ್ಸಾಹಿಸಲು ಹಾಗೂ ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಕೊಡುಗೆ ನೀಡುತ್ತಿದೆ.

 ಈ ಬ್ರಾಡ್‌ಬ್ಯಾಂಡ್‌ ಯೋಜನೆ ವಾರ್ಷಿಕ ಮತ್ತು ಅರ್ಧ ವಾರ್ಷಿಕ (6 ತಿಂಗಳು) ಚಂದಾದಾರರಿಗೆ ಲಭ್ಯವಾಗಲಿದ್ದು, ಗ್ರಾಹಕರು ಶೇ.25ರಿಂದ ಶೇ.15ರಷ್ಟುನಗದು ಹಿಂಪಡೆಯಬಹುದು. ಈ ಯೋಜನೆ ಬಿಎಸ್ಸೆನ್ನೆಲ್‌ ಲ್ಯಾಂಡ್‌ಲೈನ್‌, ಬ್ರಾಡ್‌ಬ್ಯಾಂಡ್‌ ಮತ್ತು ಬ್ರಾಡ್‌ಬ್ಯಾಂಡ್‌ ವೈ-ಫೈ ಹಾಗೂ ಎಫ್‌ಟಿಟಿಎಚ್‌ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ. 

ಆದರೆ, ಗ್ರಾಹಕರು ಡಿ.31ರೊಳಗೆ ‘ಕ್ಯಾಷ್‌ ಬ್ಯಾಕ್‌’ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು. ಆಸಕ್ತರು ಹೆಚ್ಚಿನ ಮಾಹಿತಿಗೆ ಸಮೀಪದ ಬಿಎಸ್‌ಎನ್‌ಎಲ್‌ ಕೇಂದ್ರ ಅಥವಾ ಸಹಾಯವಾಣಿ ನಂ. 1500, 18003451500 ಕರೆ ಮಾಡಬಹುದು.