ಎಲಾನ್ ಮಸ್ಕ್ ಒಡೆತನದ ಎಐ ಚಾಟ್‌ಬಾಟ್‌ ಗ್ರೋಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಎಡಿಟ್‌ ಮಾಡುತ್ತಿರುವ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾದ ಬೆನ್ನಲ್ಲೇ, ಯಾವುದೇ ನೈಜ ವ್ಯಕ್ತಿಯ ಚಿತ್ರವನ್ನು ಬೆತ್ತಲೆ/ಅಶ್ಲೀಲಗೊಳಿಸುವ ಆಯ್ಕೆಯನ್ನು ಗ್ರೋಕ್‌ನಿಂದ ತೆಗೆದುಹಾಕಲು ನಿರ್ಧರಿಸಿದೆ.

ವಾಷಿಂಗ್ಟನ್: ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಎಐ ಚಾಟ್‌ಬಾಟ್‌ ಗ್ರೋಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಎಡಿಟ್‌ ಮಾಡುತ್ತಿರುವ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾದ ಬೆನ್ನಲ್ಲೇ, ಯಾವುದೇ ನೈಜ ವ್ಯಕ್ತಿಯ ಚಿತ್ರವನ್ನು ಬೆತ್ತಲೆ/ಅಶ್ಲೀಲಗೊಳಿಸುವ ಆಯ್ಕೆಯನ್ನು ಗ್ರೋಕ್‌ನಿಂದ ತೆಗೆದುಹಾಕಲು ಎಕ್ಸ್‌ಎಐ ಕಂಪನಿ ನಿರ್ಧರಿಸಿದೆ.

ಮಹಿಳೆಯರ ಚಿತ್ರಗಳನ್ನು ಬಿಕಿನಿ ತೊಟ್ಟಂತೆ ಎಡಿಟ್‌

ಇತ್ತೀಚೆಗೆ ಮಹಿಳೆಯರ ಚಿತ್ರಗಳನ್ನು ಬಿಕಿನಿ ತೊಟ್ಟಂತೆ ಎಡಿಟ್‌ ಮಾಡಿ ಹರಿಬಿಡುವ ಟ್ರೆಂಡ್‌ ಆರಂಭವಾಗಿತ್ತು. ಈ ಬಗ್ಗೆ ಹಲವು ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಶ್ಲೀಲ ಚಿತ್ರಗಳನ್ನು ಎಕ್ಸ್‌ನಿಂದ ತೆಗೆದುಹಾಕುವಂತೆ ಭಾರತ ಸರ್ಕಾರವೂ ಕಂಪನಿಗೆ ಸೂಚಿಸಿತ್ತು. ಆ ಬಳಿಕ ಹಣ ಪಾವತಿಸುವ ಚಂದಾದಾರರಿಗೆ ಮಾತ್ರ ಎಡಿಟ್‌ ಮಾಡುವ ಅವಕಾಶ ನೀಡುವುದಾಗಿ ಮಸ್ಕ್‌ ಘೋಷಿಸಿದ್ದರು.

ಇದೀಗ ಎಕ್ಸ್‌ನ ಪ್ರತಿ ಬಳಕೆದಾರರಿಗೂ ಇದನ್ನು ವಿಸ್ತರಿಸಿದ್ದಾರೆ

ಇದೀಗ ಎಕ್ಸ್‌ನ ಪ್ರತಿ ಬಳಕೆದಾರರಿಗೂ ಇದನ್ನು ವಿಸ್ತರಿಸಿದ್ದಾರೆ. ‘ಬಿಕಿನಿಯಂತಹ ಉಡುಪುಗಳಲ್ಲಿ ನೈಜ ವ್ಯಕ್ತಿಗಳ ಚಿತ್ರಗಳನ್ನು ಎಡಿಟ್‌ ಮಾಡುವುದನ್ನು ತಡೆಯಲು ತಾಂತ್ರಿಕ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಈ ನಿರ್ಬಂಧ ಚಂದಾದಾರರು ಸೇರಿದಂತೆ ಎಲ್ಲಾ ಬಳಕೆದಾರರಿಗೆ ಅನ್ವಯಿಸುತ್ತದೆ’ ಎಂದು ಎಕ್ಸ್ ತಿಳಿಸಿದೆ.