ಬೆಂಗಳೂರು(ಅ. 15) ಹೊಟೇಲ್ ನಲ್ಲಿ ಗ್ರಾಹಕರಿಗೆ ಆಹಾರ ಸರಬರಾಜು ಮಾಡಲು ರೋಬೋ ಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಮತ್ತೆ ಅಂಥದ್ದೇ ಒಂದು ಸಾಹಸ ಮಾಧ್ಯಮ ಕ್ಷೇತ್ರದಲ್ಲಿ ನಡೆದಿದೆ.

ಕೊರೋನಾ ಕಾರಣಕಕ್ಕೆ ಸೋಂಕಿತರಿಗೆ ಮಾತ್ರೆ ನೀಡಲು ರೋಬೋ ಬಳಸಿದ್ದರು. ಆದರೆ ಟಿವಿ ನಿರೂಪಕರಾಗಿಯೂ ರೋಬೋ ಬಂದಿದೆ! ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದರೂ ಅಚ್ಚರಿ ಇಲ್ಲ.

ಸೆಲೆಬ್ರಿಟಿ ಸೆಕ್ಸ್ ಗೊಂಬೆಗಳಿಗೆ ಸಿಕ್ಕಾಪಟ್ಟೆ ಬೇಡಿಕೆ!

2018 ರಲ್ಲಿ ಆರಂಭವಾದ ಬೆಂಗಳೂರು ಮೂಲದ ರೀಫ್ರೇಸ್. ಎಐ ಎಂಬ ಸ್ಟಾರ್ಟ್ ಅಪ್ ಆರ್ಟಿಫಿಶಿಯಲ್ ಇಂಟಲಿಜನ್ಸ್ ಮೂಲಕ ಸುದ್ದಿ ಪ್ರಸಾರ ಮಾಡುವ ತಂತ್ರಜ್ಞಾನ ಅಭಿವೃದ್ಧಿ ಮಾಡಿದೆ.  ಕಳೆದ ತಿಂಗಳು ಸೀಡ್ ಫಂಡಿಂಗ್ ಮೂಲಕ ಕಂಪನಿಗೆ 1.5  ಮಿಲಿಯನ್ ಡಾಲರ್ ಹೂಡಿಕೆ  ಬಂದಿದೆ ಎಂದು ಹೇಳಿದೆ.

ಇದೇ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ಬುಲೆಟಿನ್ ಸಿದ್ಧಮಾಡಿದೆ.  ರೊಬೋ ಬ್ರೆಕಿಂಗ್ ಸುದ್ದಿಯನ್ನು ವರದಿ ಮಾಡುತ್ತಿದೆ. ರೋಬೋ ಎಂದು ಮೇಲು ನೋಟಕ್ಕೆ ಹೇಳಲು ಅಸಾಧ್ಯ!

ಇವನು ಸಿಕ್ಕಾಪಟ್ಟೆ ಡಿಫರೆಂಟ್ ರೋಬೋ

ಕಳೆದವರ್ಷ ಲಿಪ್ ಸಿಂಕ್ ಮಾಡುವ ರೋಬೋ ಸಿದ್ಧಮಾಡಿದ್ದೆವು. ಈಗ ನಲವತ್ತು ಭಾಷೆಗಳಲ್ಲಿ ಮುಖ ಚಹರೆ ಸಮೇತ ಆರ್ಟಿಫಿಶಿಯಲ್ ಆಂಕರ್ ಸಿದ್ಧಮಾಡಿದ್ದೇವೆ ಎಂದು ಕಂಪನಿ ತಿಳಿಸಿದೆ.

ವಿಡಿಯೋದಲ್ಲಿರುವ ಮಹಿಳೆ ನಿಜವಾದ ವ್ಯಕ್ತಿಯೇ. ಅವರು ನ್ಯೂಸ್ ಓದುವ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಶೇಖರಿಸಿ ಇಟ್ಟುಕೊಳ್ಳಲಾಗುತ್ತದೆ.  ಮಷಿನ್ ಲರ್ನಿಂಗ್ ಮಾಡೆಲ್ ಮೂಲಕ ಅದೇ ವ್ಯಕ್ತಿಗೆ ಬೇರೆ ಬೇರೆ ಅಕ್ಷರ ನೀಡಿ ನನಮಗೆ ಬೇಕಾದಂತೆ ವರದಿ ಓದಿಸಿಕೊಳ್ಳಬಹುದು ಎಂದು ಕಂಪನಿ ವಿವರಣೆ ನೀಡಿದೆ.ಚೀನಾ ಮೂಲದ ನ್ಯೂಸ್ ಏಜೆನ್ಸಿ ಶಿನ್ ಹುವಾ ಜತೆಗೆ  ಬೆಂಗಳೂರಿನ ಕಂಪನಿ ಜಕತೆಯಾಗಿ ಸೇರಿ ತಂತ್ರಜ್ಞಾನ ಅಭಿವೃದ್ಧಿ ಮಾಡಿದೆ. ಮುಂದಿನ ದಿನಗಳಲ್ಲಿ ಇದು ಯಾವೆಲ್ಲ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕು .