*  ವಿಶ್ವದ ಅತೀ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿರುವ ಹೆಗ್ಗಳಿಕೆ*  ಆಡುಗೋಡಿಯಲ್ಲಿ ಬಾಷ್‌ ಕಂಪನಿಯ ಅತಿ ದೊಡ್ಡ ಸ್ಪಾರ್ಕ್ ನೆಕ್ಟ್ ವರ್ಚುವಲ್‌ ಆಗಿ ಉದ್ಘಾಟಿಸಿದ ಮೋದಿ*  ಪರ್ಯಾಯ ಇಂಧನ ವ್ಯವಸ್ಥೆ ಕಲ್ಪಿಸಲು 50 ಕೋಟಿ ಹೂಡಿಕೆ 

ಬೆಂಗಳೂರು(ಜು.01): ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿ ಶತಮಾನದ ಸಂಭ್ರಮದಲ್ಲಿರುವ ಬಾಷ್‌ ಇಂಡಿಯಾ ಕಂಪನಿ ದೇಶದಲ್ಲಿ ಸಂಶೋಧನೆ, ತಂತ್ರಜ್ಞಾನ ಕ್ಷೇತ್ರವನ್ನು ಮತ್ತಷ್ಟುವಿಸ್ತರಿಸಲು ಮುಂದಿನ 25 ವರ್ಷಗಳ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ನೀಡಿದರು. ಗುರುವಾರ ಆಡುಗೋಡಿಯಲ್ಲಿರುವ ಬಾಷ್‌ ಕಂಪನಿಯು ದೇಶದ ಅತಿ ದೊಡ್ಡ ಸ್ಮಾರ್ಟ್‌ ಕ್ಯಾಂಪಸ್‌ ಸ್ಪಾರ್ಕ್ ನೆಕ್ಟ್ ಅನ್ನು ಗುರುವಾರ ವರ್ಚುವಲ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜರ್ಮನಿ ಮೂಲದ ಬಾಷ್‌ ಕಂಪನಿ ಪ್ರಸ್ತುತ ಜರ್ಮನಿಗಿಂತ ಹೆಚ್ಚಾಗಿ ಭಾರತೀಯ ಕಂಪನಿಯೆಂದೇ ಖ್ಯಾತಿ ಗಳಿಸಿದೆ. ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಆದರೆ ಬಾಷ್‌ ಸಂಸ್ಥೆ ದೇಶದಲ್ಲಿ ನೂರು ವರ್ಷ ಪೂರೈಸಿರುವುದರಿಂದ ಭಾರತ ಮತ್ತು ಬಾಷ್‌ ಇಂಡಿಯಾಗೆ ಇದು ವಿಶೇಷವಾದ ವರ್ಷವಾಗಿದೆ. ಬೆಂಗಳೂರು ನಗರ ತಂತ್ರಜ್ಞಾನದ ಹಬ್‌ ಆಗಿದ್ದು, ಜಗತ್ತಿನಲ್ಲಿರುವ ಅತಿ ಹೆಚ್ಚು ಕಂಪನಿಗಳ ಆರ್‌ ಆ್ಯಂಡ್‌ ಡಿ ಕೇಂದ್ರಗಳನ್ನು ಹೊಂದಿರುವ ಹಿರಿಮೆ ಹೊಂದಿದೆ. ಇದೀಗ ಬಾಷ್‌ ಸ್ಮಾರ್ಚ್‌ ಕ್ಯಾಂಪಸ್‌ ಈ ಹಿರಿಮೆಗೆ ಮತ್ತೊಂದು ಗರಿಯನ್ನು ತಂದುಕೊಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗರಿಷ್ಠ ಮೈಲೇಜ್ , ಹೊಸ ತಂತ್ರಜ್ಞಾನ, ಹೊಚ್ಚ ಹೊಸ ಟಿವಿಎಸ್ ರೆಡಿಯಾನ್ ರಿಫ್ರೆಶ್ ಲಾಂಚ್!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ತಂತ್ರಜ್ಞಾನ, ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಬೆಂಗಳೂರಿನಲ್ಲಿ ಮುಂದಿನ 25 ವರ್ಷಗಳು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಅಮೃತ ಕಾಲ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನ ಮಟ್ಟಸುಧಾರಣೆ, ಪರಿಸರ ಮತ್ತು ಉದ್ಯಮಗಳ ಸಂಯೋಜನೆಗೆ ಸಾಧಿಸಬೇಕಾಗಿದೆ ಎಂದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಬಾಷ್‌ ಸಂಸ್ಥೆ ಮುಂದಿನ 25 ವರ್ಷವನ್ನು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅಮೃತ ಕಾಲವೆಂದು ಪರಿಗಣಿಸಿದ್ದು, ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ, ಸಂಶೋಧನೆಯಲ್ಲಿ ಇನ್ನಷ್ಟುಅಭಿವೃದ್ಧಿ ಸಾಧಿಸಬೇಕು. ಬಾಷ್‌ ಕೇವಲ ಉತ್ಪಾದನಾ ಅಥವಾ ಸಾಫ್‌್ಟವೇರ್‌ ಕಂಪನಿಯಲ್ಲ, ಬಾಷ್‌ ಒಂದು ಸಂಸ್ಕೃತಿಯಾಗಿ ಬೆಳೆದಿದೆ. ಬದ್ಧತೆ, ಸಮರ್ಪಣೆ, ಪರಿಶ್ರಮಗಳಿಂದ ಇದು ಸಾಧ್ಯವಾಗಿದೆ. ಬಾಷ್‌ ಸಂಸ್ಥೆಯ 100 ವರ್ಷಗಳ ಸಾಧನೆ ಸಂಸ್ಥೆಯ ಪ್ರಾಮಾಣಿಕತೆಗೆ, ವಿನ್ಯಾಸಗಳ ನಿಖರತೆ, ಉತ್ತಮ ಉತ್ಪನ್ನಗಳ ನಿರೂಪಣೆ ಮತ್ತು ಸದೃಢ ಸಾಧನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಪರ್ಯಾಯ ಇಂಧನ ವ್ಯವಸ್ಥೆ ಕಲ್ಪಿಸಲು 50 ಕೋಟಿ ಹೂಡಿಕೆ

ಬಾಷ್‌ ಗ್ರೂಪ್‌ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಮಾತನಾಡಿ, ಆಡುಗೋಡಿಯ ಹೊಸ ಕ್ಯಾಂಪಸ್‌ನಲ್ಲಿ ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಕಲ್ಪಿಸಲು ಕಂಪನಿಯು ಈಗಾಗಲೇ .50 ಕೋಟಿ ಹೂಡಿಕೆ ಮಾಡಿದೆ. ಇದರಿಂದ ಹೊಸ ಕ್ಯಾಂಪಸ್‌ನಲ್ಲಿ ಬಳಕೆಯಾಗುವ ಒಟ್ಟು ವಿದ್ಯುತ್‌ ಪೈಕಿ ಶೇ.85ರಷ್ಟನ್ನು ಸೌರಶಕ್ತಿ ಮತ್ತು ಹಸಿರು ವಿದ್ಯುತ್‌ ಬಳಕೆ ಮಾಡುತ್ತಿದೆ. ಮೂರನೇ ಎರಡರಷ್ಟುನೀರನ್ನು ಮಳೆ ನೀರು ಕೊಯ್ಲಿನ ಮೂಲಕ ಸಂಗ್ರಹ ಮಾಡಿ ಬಳಕೆ ಮಾಡಲಾಗುತ್ತಿದೆ. ಮಳೆ ನೀರು ಕೊಯ್ಲಿನ ಮೂಲಕ ನೀರನ್ನು ಸಂಗ್ರಹಿಸಲು 9 ಮಿಲಿಯನ್‌ ಲೀಟರ್‌ ಸಾಮರ್ಥ್ಯದ ಅಂಡರ್‌ ಗ್ರೌಂಡ್‌ ಟ್ಯಾಂಕ್‌ ಅಳವಿಸಿಕೊಳ್ಳಲಾಗಿದೆ. ಇದರಿಂದ ನೀರಿನ ಬೇಡಿಕೆಯನ್ನು ಶೇ.60ರಷ್ಟು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.