ಬೆಡ್ ಬುಕಿಂಗ್ ದಂಧೆ/ ಹಗರಣ ಬಯಲಿಗೆ ಎಳೆದ ನಂತರವೂ ಸುಮ್ಮನೆ ಕೂರದ ಸೂರ್ಯ/ ಸುರಕ್ಷಿತ ತಂತ್ರಾಂಶ ಸಿದ್ಧಪಡಿಸಲು ದಿಗ್ಗಜರಿಗೆ ಮನವಿ/ ನಂದನ್ ನಿಲೇಕಣಿ ಅವರಿಂದ ಸ್ಪಂದನೆ 

ಬೆಂಗಳೂರು(ಮೇ 05) ಕೊರೋನಾ ರೋಗಿಗಳಿಗೆ ನೀಡಬೇಕಿದ್ದ ಬೆಡ್ ಬ್ಲಾಕ್ ಆಗುತ್ತಿದ್ದ ದಂಧೆಯನ್ನು ಸಾಕ್ಷಿ ಆಧಾರ ಸಮೇತ ಜನರ ಮುಂದೆ ಇಟ್ಟಿದ್ದ ತೇಜಸ್ವಿ ಸೂರ್ಯ ತಮ್ಮ ಕೆಲಸವನ್ನು ಅಲ್ಲಿಗೆ ನಿಲ್ಲಿಸಿಲ್ಲ. ದಿಗ್ಗಜರೊಂದಿಗೆ ಮಾತನಾಡಿ ಹೊಸ ಸಾಫ್ಟ್ ವೇರ್ ಸಿದ್ಧಮಾಡುವ ಪ್ರಯತ್ನದಲ್ಲಿದ್ದಾರೆ.

ಬೆಳಿಗ್ಗೆ ನಂದನ್ ನಿಲೇಕಣಿ ಅರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊ ಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ ಎಂದು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.ನಂದನ್ ನಿಲೇಕಣಿ ರವರ ಜನಪರ ಕಾಳಜಿ, ಬದ್ಧತೆ ಅಭಿನಂದನಾರ್ಹ ಎಂದು ಸ್ಮರಿಸಿದ್ದಾರೆ.

ಕಾಂಗ್ರೆಸ್ ಮುಖಂಡರೊಂದಿಗೆ ಬೆಡ್ ಬ್ಲಾಕಿಂಗ್ ದಂಧೆಕೋರ್ತಿ

ProductNation/iSPIRT ಸಂಸ್ಥೆ ಸಹ ಕೈಜೋಡಿಸಲಿದೆ ಎಂದು ಸೂರ್ಯ ತಿಳಿಸಿದ್ದಾರೆ. ಬೆಡ್ ಹಂಚಿಕೆಯಲ್ಲಿನ ಯಾರದ್ದೂ ಹಸ್ತಕ್ಷೇಪ ಸಾಧ್ಯವಾಗದಂತೆ, ಸುರಕ್ಷಿತ ಮತ್ತು ಪಾರದರ್ಶಕ ವ್ಯವಸ್ಥೆ ಲಭ್ಯವಾಗುಗವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ವಾರ್ ರೂಂಗೆ ಭೇಟಿ ನೀಡಿದ್ದ ಬೆಂಗಳೂರು ದಕ್ಷಿಣ ಸಂಸದ ಕೊರೋನಾಕ್ಕೆ ಮೀಸಲಿಟ್ಟ ಬೆಡ್ ಗಳನ್ನು ಹೇಗೆ ಹಣಕ್ಕೆ ಮಾರಿಕೊಳ್ಳಲಾಗುತ್ತಿತ್ತು ಎಂಬ ದಂಧೆಯನ್ನು ಬಟಾಬಯಲು ಮಾಡಿದ್ದರು. 

Scroll to load tweet…