600 ಕೊಡುವಲ್ಲಿ 6 ಲಕ್ಷ ಟಿಪ್ಸ್ ಕೊಟ್ಟ ಅಮೆರಿಕನ್ ಮಹಿಳೆ..!

ಅಮೆರಿಕಾದಲ್ಲಿ ಮಹಿಳೆಯೊಬ್ಬರು ಏನೋ ಯೋಚಿಸುತ್ತಾ ಹಣ ಟ್ರಾನ್ಸ್‌ಫಾರ್ ಮಾಡಿದ್ದು, ತಮ್ಮ ಖಾತೆಯಲ್ಲಿದ್ದ ಬರೋಬ್ಬರಿ  6 ಲಕ್ಷ ರೂಪಾಯಿಯನ್ನು ಟಿಪ್ಸ್‌ ನೀಡಿ ಈಗ ಬ್ಯಾಂಕ್ ಜೊತೆ ಹಣ ರೀಫಂಡ್ ಮಾಡುವಂತೆ ಹೋರಾಟಕ್ಕಿಳಿದಿದ್ದಾರೆ.

Be carefull while doing online payment US Woman Bymistaknly tipped 6 lakhs instead of 6 Hundrends akb

ಆನ್‌ಲೈನ್ ಮೂಲಕ ಹಣ ಪಾವತಿ ಮಾಡುವಾಗ ಬಹಳ ಜಾಗರೂಕವಾಗಿ ಮಾಡಬೇಕು.  ಹಣದ ಮೊತ್ತವಾಗಲಿ ಅಥವಾ ಖಾತೆ ಸಂಖ್ಯೆಯೇ ಆಗಲಿ ಒಂದು ನಂಬರ್‌ ಹೆಚ್ಚು ಕಡಿಮೆಯಾದರೂ ಹಣ ಇನ್ಯಾವುದೋ ಖಾತೆ ಸೇರುತ್ತದೆ. ಅಥವಾ ನಿರೀಕ್ಷಿಸದ್ದಕ್ಕಿಂತ ಹೆಚ್ಚು  ಹಣ ನಿಮ್ಮ ಖಾತೆಯಿಂದ ಜಾರಿ ಹೋಗಾಗಿರುತ್ತದೆ. ಹೀಗಾದ ನಂತರ ಬ್ಯಾಂಕ್‌ ಆಗಲಿ ಇನ್ನಾವುದೋ ಆಗಲಿ ನಿಮ್ಮ ಸಹಾಯಕ್ಕೆ ಬರುವುದಿಲ್ಲ ಅದೇ ರೀತಿ  ಅಮೆರಿಕಾದಲ್ಲಿ ಮಹಿಳೆಯೊಬ್ಬರು ಏನೋ ಯೋಚಿಸುತ್ತಾ ಹಣ ಟ್ರಾನ್ಸ್‌ಫಾರ್ ಮಾಡಿದ್ದು, ತಮ್ಮ ಖಾತೆಯಲ್ಲಿದ್ದ ಬರೋಬ್ಬರಿ  6 ಲಕ್ಷ ರೂಪಾಯಿಯನ್ನು ಟಿಪ್ಸ್‌ ನೀಡಿ ಈಗ ಬ್ಯಾಂಕ್ ಜೊತೆ ಹಣ ರೀಫಂಡ್ ಮಾಡುವಂತೆ ಹೋರಾಟಕ್ಕಿಳಿದಿದ್ದಾರೆ.

ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ವೆರಾ ಕಾನರ್ ಎಂಬ ಮಹಿಳೆಯೇ ಹೀಗೆ ಹಣ ಟ್ರಾನ್ಸ್‌ಫಾರ್ ಮಾಡಿ ಪೇಚಿಗೆ ಸಿಲುಕಿದ ಮಹಿಳೆ. ಸಬ್‌ವೇಯೊಂದರಲ್ಲಿ ಸ್ಯಾಂಡ್ ವಿಚ್ ಸೇವಿಸಿದ ಇವರು ಇದಕ್ಕಾಗಿ ಹಣ ಪಾವತಿ ಮಾಡುವ ವೇಳೆ ಸ್ಯಾಂಡ್‌ವಿಚ್‌ ಮೌಲ್ಯ ಹಾಗೂ ಟಿಪ್ಸ್ ಸೇರಿಸಿ 7.54 ಡಾಲರ್‌ ಅಂದಾರೆ 628 ರೂಪಾಯಿಯನ್ನು ಪಾವತಿ ಮಾಡಬೇಕಿತ್ತು. ಆದರೆ ಹೀಗೆ ಹಣ ಪಾವತಿ ಮಾಡುವ ವೇಳೆ ಮಹಿಳೆ ತಲೆಯನ್ನು ಬೇರೆಲ್ಲೋ ಓಡುತ್ತಿದ್ದು, 7.54 ಡಾಲರ್ ಬದಲು 7,105.44  ಸಾವಿರ ಡಾಲರ್‌ ಅಂದರೆ (5,91,951) ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ.  ಬ್ಯಾಂಕ್ ಆಫ್ ಅಮೆರಿಕಾ ಕ್ರೆಡಿಟ್ ಕಾರ್ಡ್ ಬಳಸಿ ಈ ಪಾವತಿ ಮಾಡಿದ್ದು, ಈಗ ತಲೆಗೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಮಹಿಳೆಯದ್ದಾಗಿದೆ. 

Personal Finance : ಚೆಕ್‌ನಲ್ಲಿ ಹಣ ಪಾವತಿಸುವ ಮುನ್ನ ಇವೆಲ್ಲ ನೆನಪಿರಲಿ!

ಈ ಬಗ್ಗೆ ಎನ್‌ಬಿಸಿ ನ್ಯೂಸ್ ಜೊತೆ ಮಾತನಾಡಿದ ಕಾನರ್‌,  ಆಕ್ಟೋಬರ್ 23 ಲೋಕಲ್ ಇಟಲಿಯನ್‌ ಸಬ್‌ವೇಯೊಂದರಲ್ಲಿ ತಾನು ಸಲಾಮಿ, ಪೆಪೆರ್ಒನಿ ಹಾಗೂ ಹ್ಯಾಮ್( ಪಾಶ್ಚಾತ್ಯ ತಿನಿಸುಗಳು) ಜೊತೆ ಫುಟ್ಲಾಂಗ್ ಆರ್ಡರ್ ಮಾಡಿದ್ದೆ.  ಇವುಗಳಿಗೆ ಹಣ ಪಾವತಿ ಮಾಡುವ ವೇಳೆ  ಹಣದ ಮೊತ್ತವನ್ನು ಹಾಕಬೇಕಾದ ಜಾಗದಲ್ಲಿ ತನ್ನ ದೂರವಾಣಿಯ ಕೊನೆಯ 4 ಸಂಖ್ಯೆಗಳನ್ನು ಹಾಕಿದ್ದು, ಸಬ್‌ವೇಯೇ ಶಾಪಿಂಗ್‌ನಿಂದ ಪಾಯಿಂಟ್ ಸಿಕ್ಕಿದೆ ಎಂದು ಭಾವಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ. ಇಷ್ಟೊಂದು ಮೊತ್ತದ ಹಣ ಕಡಿತಗೊಂಡರೂ ಈ ವಿಚಾರ ಆಕೆಗೆ ಆಗಲೇ ತಿಳಿದಿಲ್ಲ, ವಾರದ ನಂತರ ಆಕೆ ಕ್ರೆಡಿಟ್ ಕಾರ್ಡ್ (credit card) ಸ್ಟೇಟ್‌ಮೆಂಟ್ ಪರೀಕ್ಷಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಆಘಾತಗೊಳ್ಳುವ ಸರದಿ ಆಕೆಯದ್ದಾಗಿದೆ. 

ಇದಾದ ನಂತರ ಈಕೆ ಈ ಬಗ್ಗೆ ಬ್ಯಾಂಕ್ ಆಫ್‌ ಅಮೆರಿಕಾಗೆ ದೂರು ನೀಡಿದ್ದಾಳೆ. ಆದರೆ ಆಕೆಯ ಮಾತನ್ನು ಬ್ಯಾಂಕ್ ಕೇಳಿಸಿಕೊಳ್ಳಲು ಸಿದ್ಧವಿರಲಿಲ್ಲ, ಈ ಬಗ್ಗೆ ಸಬ್‌ವೇ ಮ್ಯಾನೇಜರ್ ಅವರನ್ನು ಕೂಡ ಸಂಪರ್ಕಿಸಿದ್ದು ಅವರು ಕೂಡ ಆಕೆಗೆ ಸಮಾಧಾನವಾಗುವ ಉತ್ತರ ನೀಡಿಲ್ಲ, ಅಲ್ಲದೇ ಬ್ಯಾಂಕ್ ಕೂಡ ಹಣ ರೀಫಂಡ್ ಮಾಡಬೇಕೆನ್ನುವ ಮಹಿಳೆಯ ಮನವಿಯನ್ನು ತಿರಸ್ಕರಿಸಿದೆ.

ಕೈಕೊಟ್ಟಎಸ್‌ಬಿಐ ನೆಟ್‌ ಬ್ಯಾಂಕಿಂಗ್‌: ಇಡೀ ದಿನ ಖಾತೆದಾರರ ಪರದಾಟ

ಇದಾದ ನಂತರ ಆಕೆ ಮತ್ತೆ ಎರಡನೇ ಬಾರಿಗೆ ಬ್ಯಾಂಕ್‌ಗೆ ಮನವಿ ಮಾಡಿದ್ದಾಳೆ. ಮಹಿಳೆಯ ಗೋಳು ಕೆಳಲಾಗದ ಬ್ಯಾಂಕ್ ಸಿಬ್ಬಂದಿ ಕಡೆಗೂ ಸಬ್‌ವೇ ಮ್ಯಾನೇಜರ್ ಜೊತೆ ಮಾತನಾಡಿ ಮಹಿಳೆಗೆ ಹಣ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಸಬ್‌ವೇಯವರು ಕೊನೆಗೂ ಒಪ್ಪಿಕೊಂಡಿದ್ದು, ಘಟನೆ ನಡೆದ ತಿಂಗಳ ನಂತರ ಮಹಿಳೆಯ ಖಾತೆಗೆ ಹೆಚ್ಚುವರಿ ಹಣ ಕ್ರೆಡಿಟ್ ಆಗಿದ್ದು, ಇದರಿಂದ ಮಹಿಳೆ ನಿಟ್ಟುಸಿರು ಬಿಡುವಂತಾಗಿದೆ.

Latest Videos
Follow Us:
Download App:
  • android
  • ios