ಭಾರತದಲ್ಲಿ ಆಡಿ ಕ್ಯೂ5 ಪೆಟ್ರೋಲ್ ಕಾರು ಬಿಡುಗಡೆಗೆ ಕೌಂಟ್‌ಡೌನ್

Audi Q5 Petrol To Launch On 28 June
Highlights

ಜೂನ್ 28 ರಂದು ಭಾರತದ ಕಾರು ಮಾರುಕಟ್ಟೆ ಪ್ರವೇಶಿಸಲಿರುವ ಆಡಿ ಕ್ಯೂ5 ಪೆಟ್ರೋಲ್ ಇಂಜಿನ್ ಕಾರಿಗಾಗಿ ಕಾರು ಪ್ರೀಯರು ಕಾಯುತ್ತಿದ್ದಾರೆ. ಡೀಸೆಲ್ ಇಂಜಿನ್ ಬಳಿಕ ಇದೀಗ ಪೆಟ್ರೋಲ್ ಇಂಜಿನ್ ಕಾರು ಮೋಡಿ ಮಾಡಲು ರೆಡಿಯಾಗಿದೆ. ಆಡಿ ಕ್ಯೂ5 ಕಾರಿನ ವಿಶೇಷತೆ ಏನು? ಇದರ ಬೆಲೆ ಏಷ್ಟು? ಇಲ್ಲಿದೆ ವಿವರ

ಬೆಂಗಳೂರು(ಜೂ.23): ಭಾರತದ ಲಕ್ಸುರಿ ಕಾರು ಮಾರಾಟದಲ್ಲಿ ಆಡಿ ಸಂಸ್ಥೆ ಮುಂಚೂಣಿಯಲ್ಲಿದೆ. ಗ್ರಾಹಕರ ನೆಚ್ಚಿನ ಆಡಿ ಕ್ಯೂ5 ಇದೀಗ ಪೆಟ್ರೋಲ್ ಇಂಜಿನ್ ಬಿಡುಗಡೆ ಮಾಡುತ್ತಿದೆ. ಇದೇ ಜೂನ್ 28 ರಂದು ಭಾರತದಲ್ಲಿ ಆಡಿ ಕ್ಯೂ5 ಪೆಟ್ರೋಲ್ ಇಂಜಿನ್ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ನೂತನ ಆಡಿ ಕ್ಯೂ ಪ್ರೆಟ್ರೋಲ್ ಇಂಜಿನ್ ಕಾರಿನ ಬೆಲೆ 52 ಲಕ್ಷ ರೂಪಾಯಿ(ಎಕ್ಸ್ ಶೋರೂಮ್). ಸದ್ಯ ಆಡಿ ಕ್ಯೂ5ನಲ್ಲಿ ಡೀಸೆಲ್ ಇಂಜಿನ ಲಭ್ಯವಿದೆ. ಇದೀಗ ಪೆಟ್ರೋಲ್ ಇಂಜಿನ್ ಕೂಡ ಗ್ರಾಹಕರಿಗೆ ಸಿಗಲಿದೆ. ಆದರೆ ಪೆಟ್ರೋಲ್ ಇಂಜಿನ್ ಆಡಿ ಕ್ಯೂ5 ಕುರಿತು ಯಾವುದೇ ಮಾಹಿತಿಯನ್ನ ಆಡಿ ಸಂಸ್ಥೆ ಬಹಿರಂಗ ಪಡಿಸಿಲ್ಲ. ಆದರೆ ಈಗಾಗಲೇ ಆಡಿ ಕ್ಯೂ5 ಪೆಟ್ರೋಲ್ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೇ ಕಾರನ್ನ ಭಾರತದ ಬೇಡಿಕೆಗೆ ಅನುಗುಣವಾಗಿ ತಯಾರಿಸಲಾಗಿದೆ.

ನೂತನ ಆಡಿ ಕ್ಯೂ5 ಕಾರು  2.0 ಲೀಟರ್, 252 ಪಿಎಸ್ ಪೆಟ್ರೋಲ್ ಇಂಜಿನ್ ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಆಡಿ 8 ಏರ್ ಬ್ಯಾಗ್, 18 ಇಂಚಿನ ಆಲೋಯ್ ವೀಲ್ಸ್, ಪನೋರಮಿಕ್ ಸನ್‌ರೂಫ್, ಪಾರ್ಕಿಂಗ್ ಕ್ಯಾಮರಾ, ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕಲ್ ಎಡ್ಜಸ್ಟ್‌ಮೆಂಟ್ ಸೀಟ್, ಟಚ್ ಸ್ಕ್ರೀನ್ ಸೇರಿದಂತೆ ಹಲವು ಫೀಚರ್ ನೀಡಲಾಗಿದೆ.

 

loader