ಮೊಬೈಲ್'ನಲ್ಲಿ ಅದೆಷ್ಟೇ ಫೀಚರ್'ಗಳಿದ್ದರೂ ಬ್ಯಾಟರಿ ಬ್ಯಾಕ್'ಅಪ್ ಇಲ್ಲವೆಂದಾದರೆ ಯಾವುದೇ ಉಪಯೋಗಕ್ಕಿಲ್ಲವೆಂಬಂತಿರುತ್ತದೆ. ಪದೇ ಪದೇ ಚಾರ್ಜ್ ಮಾಡಿಕೊಳ್ಳುವುದೇ ಒಂದು ಕೆಲಸವಾಗಿ ಬಿಡುತ್ತದೆ. ಒಂದು ವೇಳೆ ನಿಮ್ಮ ಈ ಸಮಸ್ಯೆಯನ್ನು ದೂರ ಮಾಡುವ ಸ್ಮಾರ್ಟ್ ಫೋನ್ ಒಂದು ಬಂದರೆ? ಹೌದು ಅದ್ಭುತವಾದ ಬ್ಯಾಟರಿ ಬ್ಯಾಕ್'ಅಪ್ ಹೊಂದಿರುವ ಸ್ಮಾರ್ಟ್'ಫೋನ್ ಒಂದು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್'ನೊಂದಿಗೆ ನಿಮಗೆ ಜಿಯೋ ಸಿಮ್ ಕೂಡಾ ಉಚಿತವಾಗಿ ಸಿಗಲಿದೆ. ಹಾಗಾದರೆ ಈ ಮೊಬೈಲ್ ಯಾವುದೆ ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ

ಗ್ರಾಹಕರಿಗೆ ತಲೆ ನೋವು ನೀಡುತ್ತಿರುವ ಬ್ಯಾಟರಿ ಸಮಸ್ಯೆಯನ್ನರಿತ Asus ಇದೀಗ ಶಕ್ತಿಶಾಲಿ ಬ್ಯಾಟರಿವುಳ್ಳ Asus Zenfone 3 Max ಎಂಬ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆಗೊಳಿಸಿದೆ. ಇದರಲ್ಲಿರುವ ಮೊಬೈಲ್ 4100mAh ಸಾಮರ್ಥ್ಯದ್ದಾಗಿದೆ. ಅಲ್ಲದೇ ಈ ಫೋನ್ ಜೊತೆಗೆ ಜಿಯೋ ಸಿಮ್ ಕೂಡಾ ಉಚಿತವಾಗಿ ನೀಡುತ್ತಿದೆ.

ಎರಡು ಮಾದರಿಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್'ಫೋನ್'ಗೆ ಅಳವಡಿಸಿರುವ ಬ್ಯಾಟರಿ 38 ದಿನಗಳ ಸ್ಟ್ಯಾಂಡ್'ಬೈ ಹಾಗೂ 17 ಗಂಟೆಗಳ ಟಾಕ್'ಟೈಮ್ ನೀಡಲಿದೆ. ರಿವರ್ಸ್ ಚಾರ್ಜಿಂಗ್'ನ ಸೌಲಭ್ಯವೂ ಇದರಲ್ಲಿದ್ದು, ಪವರ್ ಬ್ಯಾಂಕ್'ನಂತೆ ಇದನ್ನು ಬಳಸಬಹುದಾಗಿದೆ. ಅಂದರೆ ಬೇರೆ ಸಾಧನಗಳನ್ನೂ ಈ ಫೋನ್ ಮೂಲಕ ಚಾರ್ಜ್ ಮಾಡಬಹುದಾಗಿದೆ. ಇದರ 5.2 ಇಂಚಿನ ಮಾದರಿಯ ಫೋನ್ ಬೆಲೆ 12,999/- ಹಾಗೂ 5.5 ಇಂಚು ಮಾದರಿಯ ಫೋನ್ ಬೆಲೆ ಕೇವಲ 17,999 ರೂಪಾಯಿಗಳು.

ಸಂಪೂರ್ಣ ಮೆಟಲ್ ಬಾಡಿ ಹೊಂದಿರುವ ಈ ಸ್ಮಾರ್ಟ್'ಫೋನ್'ನ್ನು Zonefone Max ನ ಉತ್ತರಾಧಿಕಾರಿ ಎನ್ನಲಾಗುತ್ತಿದೆ. ಇದರಲ್ಲಿರುವ ಪ್ರೈಮರಿ ಕ್ಯಾಮರಾ 16 MP, ಹಾಗೂ ಫ್ರಂಟ್ ಕ್ಯಾಮರಾ 8MP ಸಾಮರ್ಥ್ಯದ್ದಾಗಿದೆ ಹಾಗೂ ಇದರಲ್ಲಿ ಬ್ಯೂಟಿಫಿಕೇಷನ್ ಫೀಚರ್ ಕೂಡಾ ಇದೆ. ಡ್ಯುವಲ್ ಸಿಮ್ ಆಯ್ಕೆ ಇರುವ ಈ ಫೋನ್'ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡಾ ಇದೆ.