Asianet Suvarna News Asianet Suvarna News

ಆ್ಯಪಲ್‌ ಫೋನ್‌ನಿಂದಾಗಿ ಸಲಿಂಗಿಯಾದೆ: ಎಲ್ಲವನ್ನೂ ಹೇಳಿ ನೀನೇಕೆ ಸುದ್ದಿಯಾದೆ?

ಆ್ಯಪಲ್ ಫೋನ್‌ನಿಂದಾಗಿ ಸಲಿಂಗಿಯಾದ ವೈದ್ಯ| ಐಫೋನ್ ಬಳಸಿದ್ದಕ್ಕೆ ಸಲಿಂಗಿಯಾದೆ ಎಂದು ಗೋಳಿಡುತ್ತಿರುವ ಆಸಾಮಿ| ಆ್ಯಪಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಷ್ಯಾದ ವೈದ್ಯ ಡಾ. ರಜುಮಿಲೋವ್| ಐಫೋನ್‌ನಲ್ಲಿ 69 ಗೇ ಕಾಯಿನ್ಸ್ ಕ್ರಿಪ್ಟೋಕರೆನ್ಸಿ ಪಡೆದ ರಜುಮಿಲೋವ್| ಗೇ ಕಾಯಿನ್ಸ್ ಕಳುಹಿಸಿದಾತನ ಸಂಪರ್ಕಕ್ಕೆ ಬಂದ ಡಾ. ರಜುಮಿಲೋವ್| 1 ಮಿಲಿಯನ್ ರುಬೆಲ್(11 ಲಕ್ಷ ರೂ.) ಪರಿಹಾರಕ್ಕಾಗಿ ಮೊರೆ ಇಟ್ಟ ರಜುಮಿಲೋವ್|

Apple Has Turned Me Towards Homosexuality Alleges Russian Doctor
Author
Bengaluru, First Published Oct 5, 2019, 5:53 PM IST

ಮಾಸ್ಕೋ(ಅ.05): ಸಲಿಂಗಿಯಾಗಲು ಕಾರಣಗಳು ಹಲವಾರು. ಆದರೆ ಮೊಬೈಲ್ ಫೋನ್‌ವೊಂದು ವ್ಯಕ್ತಿಯನ್ನು ಸಲಿಂಗಕಾಮಕ್ಕೆ ಎಳೆಯುತ್ತದೆ ಎಂದರೆ ನಂಬುವುದು ತುಸು ಕಷ್ಟವೇ ಸರಿ.

ತಾನು ಸಲಿಂಗಿಯಾಗಲು ಆ್ಯಪಲ್ ಫೋನ್ ಕಾರಣ ಎಂದು ರಷ್ಯಾದ ವೈದ್ಯನೋರ್ವ ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ನಡೆದಿದೆ.

ಹೌದು ರಷ್ಯಾದ ವೈದ್ಯ ರಜುಮಿಲೋವ್ ಎಂಬಾತ ಐಫೋನ್‌ನಿಂದಾಗಿ ತಾನು ಸಲಿಂಗಿಯಾಗಿದ್ದು, ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾನೆ. 

ತನ್ನ ಐಫೋನ್‌ನಲ್ಲಿ 69 ಗೇ ಕಾಯಿನ್ಸ್ ಕ್ರಿಪ್ಟೋಕರೆನ್ಸಿ ಪಡೆದ ರಜುಮಿಲೋವ್, ಗೇ ಕಾಯಿನ್ಸ್ ಕಳುಹಿಸಿದಾತನ ಸಂಪರ್ಕಕ್ಕೆ ಬಂದಿದ್ದಾನೆ. ನಂತರ  ಆತನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ.

ಈ ವಿಷಯ ರಜುಮಿಲೋವ್ ಪೋಷಕರಿಗೆ ಗೊತ್ತಾಗಿ ರಂಪಾಟ ನಡೆದಿದೆ. ಈ ಎಲ್ಲ ಬೆಳವಣಿಗೆಗಳಿಗೆ ಐಫೋನ್ ಕಾರಣ ಎನ್ನುವ ರಜುಮಿಲೋವ್, ಇದೀಗ ಐಫೋನ್ ವಿರುದ್ಧ ದಾವೆ ಹೂಡಿದ್ದಾನೆ.

ನನ್ನ ಜೀವನ ಹಾಳು ಮಾಡಿದ ಆ್ಯಪಲ್ ಐಫೋನ್ ತನಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿರುವ ರಜುಮಿಲೋವ್, ಬರೋಬ್ಬರಿ 1 ಮಿಲಿಯನ್ ರುಬೆಲ್(11 ಲಕ್ಷ ರೂ.) ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾನೆ.

Follow Us:
Download App:
  • android
  • ios