ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2026 ರಲ್ಲಿ, ಹೊಸ iQOO 15 ಸ್ಮಾರ್ಟ್‌ಫೋನ್ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ. ಎಕ್ಸ್‌ಚೇಂಜ್ ಆಫರ್ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ 7,000mAh ಬ್ಯಾಟರಿ, Snapdragon 8 Elite Gen 5 ಪ್ರೊಸೆಸರ್ ಮತ್ತು 50MP ಟ್ರಿಪಲ್ ಕ್ಯಾಮೆರಾದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ಸ್ಮಾರ್ಟ್‌ಫೋನ್ ಪ್ರಿಯರಿಗೆ ಅಮೆಜಾನ್ ಮತ್ತೆ ಕೊಡುಗೆಗಳ ಮಹಾಪೂರವನ್ನೇ ತಂದಿದೆ. ನೀವು ಹೊಸ ಪ್ರೀಮಿಯಂ ಅಥವಾ ಫ್ಲ್ಯಾಗ್‌ಶಿಪ್ ಫೋನ್ ಖರೀದಿಸಲು ಕಾಯುತ್ತಿದ್ದರೆ, ಈ ಆಫರ್ ನಿಮಗಾಗಿಯೇ ಇದೆ. 'ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2026'ರಲ್ಲಿ ನೂತನ iQOO 15 ಸ್ಮಾರ್ಟ್‌ಫೋನ್ ಮೇಲೆ ಭಾರಿ ಆಫರ್‌ಗಳು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಏನು ಆಫರ್‌ ಹಗೂ ಬೆಲೆಯ ವಿವರದ ಕುರಿತು ನೋಡೋಣ ಬನ್ನಿ.

ಆಫರ್ ಮತ್ತು ಬೆಲೆಯ ವಿವರ!

iQOO 15 ಫೋನ್‌ನ ಅಧಿಕೃತ ಆರಂಭಿಕ ಬೆಲೆ ₹76,999. ಆದರೆ ಈ ಸೇಲ್‌ನಲ್ಲಿ ಅಮೆಜಾನ್ ನೀಡುತ್ತಿರುವ ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು.

HDFC ಬ್ಯಾಂಕ್ ಕೊಡುಗೆ: HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ EMI ಪಾವತಿ ಮಾಡುವ ಗ್ರಾಹಕರಿಗೆ ಬರೋಬ್ಬರಿ ₹9,000 ವರೆಗೆ ತತಕ್ಷಣದ ರಿಯಾಯಿತಿ ಸಿಗಲಿದೆ.

ಎಕ್ಸ್‌ಚೇಂಜ್ ಆಫರ್; ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಫೋನ್‌ನ ಬೆಲೆಯನ್ನು ಇನ್ನೂ ಕಡಿತಗೊಳಿಸಬಹುದು. ವಿನಿಮಯ ಮೊತ್ತವು ನಿಮ್ಮ ಹಳೆಯ ಫೋನ್‌ನ ಮಾದರಿ ಹಾಗೂ ಸ್ಥಿತಿಯನ್ನು ಅವಲಂಬಿಸಿರುತ್ತದೆ.

iQOO 15 ನ ಪ್ರಮುಖ ವೈಶಿಷ್ಟ್ಯಗಳು!

1. ಡಿಸ್ಪ್ಲೇ ಮತ್ತು ಡಿಸೈನ್; ಈ ಫೋನ್ 6.85-ಇಂಚಿನ LTPO OLED ಡಿಸ್ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರ 2,600 nits ಪೀಕ್ ಬ್ರೈಟ್‌ನೆಸ್ ಹಾಗೂ ಡಾಲ್ಬಿ ವಿಷನ್ (Dolby Vision) ಬೆಂಬಲದಿಂದಾಗಿ ವೀಡಿಯೊ ವೀಕ್ಷಣೆ ಮತ್ತು ಗೇಮಿಂಗ್ ಅನುಭವ ಅತ್ಯುತ್ತಮವಾಗಿರುತ್ತದೆ.

2. ವೇಗದ ಪ್ರೊಸೆಸರ್; ಫೋನ್‌ನ ಕಾರ್ಯಕ್ಷಮತೆಗಾಗಿ ಅತ್ಯಾಧುನಿಕ Qualcomm Snapdragon 8 Elite Gen 5 ಪ್ರೊಸೆಸರ್ ನೀಡಲಾಗಿದೆ. ಇದು ಹೆವಿ ಗೇಮಿಂಗ್, ಮಲ್ಟಿಟಾಸ್ಕಿಂಗ್ ಮತ್ತು ಆ್ಯಪ್‌ಗಳ ವೇಗವಾದ ಬಳಕೆಗೆ ಸೂಕ್ತವಾಗಿದೆ.

3.ಬೃಹತ್ ಬ್ಯಾಟರಿ ಮತ್ತು ಚಾರ್ಜಿಂಗ್; ಈ ಫೋನ್‌ನ ಪ್ರಮುಖ ಹೈಲೈಟ್ ಎಂದರೆ ಇದರ 7,000mAh ಬ್ಯಾಟರಿ. ಜೊತೆಗೆ 100W ಫಾಸ್ಟ್ ಚಾರ್ಜಿಂಗ್ ಬೆಂಬಲವಿದ್ದು, ದಿನವಿಡೀ ಗೇಮಿಂಗ್ ಅಥವಾ ವೀಡಿಯೊ ಸ್ಟ್ರೀಮಿಂಗ್ ಮಾಡಿದರೂ ಬ್ಯಾಟರಿ ಖಾಲಿಯಾಗುವ ಚಿಂತೆ ಇರುವುದಿಲ್ಲ.

4. ಟ್ರಿಪಲ್ 50MP ಕ್ಯಾಮೆರಾ ಸೆಟಪ್!

ಛಾಯಾಗ್ರಹಣಕ್ಕಾಗಿ ಹಿಂಭಾಗದಲ್ಲಿ ಮೂರು 50MP ಕ್ಯಾಮೆರಾಗಳಿವೆ:

50MP ಪ್ರಮುಖ ಕ್ಯಾಮೆರಾ; ಸೋನಿ IMX921 ಸೆನ್ಸಾರ್‌ನೊಂದಿಗೆ.

50MP ಟೆಲಿಫೋಟೋ; 3x ಪೆರಿಸ್ಕೋಪ್ ಜೂಮ್ ಬೆಂಬಲ.

50MP ಅಲ್ಟ್ರಾ-ವೈಡ್; ಅಗಲವಾದ ಫೋಟೋಗಳಿಗಾಗಿ.

ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ನೀಡಲಾಗಿದೆ.

ನೀವು ಈ ಫೋನ್ ಖರೀದಿಸಬೇಕೇ?

ನೀವು ₹70,000 ದಿಂದ ₹75,000 ಬಜೆಟ್‌ನಲ್ಲಿ ಅತ್ಯುತ್ತಮ ಡಿಸ್ಪ್ಲೇ, ಬಿಗ್ ಬ್ಯಾಟರಿ ಮತ್ತು ಪವರ್‌ಫುಲ್ ಪ್ರೊಸೆಸರ್ ಇರುವ ಆಂಡ್ರಾಯ್ಡ್ ಫೋನ್ ಹುಡುಕುತ್ತಿದ್ದರೆ, iQOO 15 ಶ್ರೇಷ್ಠ ಆಯ್ಕೆಯಾಗಿದೆ.

ಗಮನಿಸಿ; ಖರೀದಿ ಮಾಡುವ ಮುನ್ನ ಅಮೆಜಾನ್ ಆ್ಯಪ್‌ನಲ್ಲಿ HDFC ಬ್ಯಾಂಕ್ ಆಫರ್ ಮತ್ತು ವಿನಿಮಯ ನಿಯಮಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.