ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಅ. 24ರಿಂದ 28ರವರೆಗೆ ಈ ಸೇಲ್ ನಡೆಯಲಿದೆ. ದಸರಾ ಸೇಲ್ ಮುಗಿಯುತ್ತಿದ್ದಂತೆಯೇ ಈ ಸೇಲ್ ಆರಂಭಗೊಂಡಿದ್ದು, ಭಾರಿ ಆಫರ್‌ಗಳನ್ನು ಬಿಟ್ಟಿದೆ. ಎಂದಿನಂತೆ ಐಸಿಐಸಿಐ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡುಗಳಲ್ಲಿ ಖರೀದಿ ಮಾಡಿದರೆ ಶೇ.10 ಜಾಸ್ತಿ ಡಿಸ್ಕೌಂಟ್. 

ಮಜಾ ಅಂದ್ರೆ ಸಿಕ್ಕಾಪಟ್ಟೆ ಉತ್ಪನ್ನಗಳಿಗೆ ರಿಯಾಯಿತಿ ಇರುವುದರಿಂದ ಯಾವುದು ತಗೋಬೇಕು ಅಂತ ಗೊತ್ತಾಗೋದಿಲ್ಲ. ಹಾಗಾಗಿ ಹಬ್ಬದ ಸೇಲ್‌ನಲ್ಲಿರುನ ಐದು ಬೆಸ್ಟ್ ಆಫರ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಹ್ಯಾಪಿ ಶಾಪಿಂಗ್.

ಒನ್ ಪ್ಲಸ್ 6
128 ಜಿಬಿ ಸ್ಟೋರೇಜ್ ಹೊಂದಿರುವ ಒನ್ ಪ್ಲಸ್ 6 ಮೊಬೈಲ್ ರೂ.34999 ಗೆ ಲಭ್ಯ. ಸಿಟಿ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಖರೀದಿಸಿದರೆ ರೂ.32999ಕ್ಕೆ ಲಭ್ಯವಿದೆ. ಒನ್ ಪ್ಲಸ್ 6 ಕ್ವಾಲ್‌ಕಾಮ್ ಸ್ನಾಪ್ ಡ್ರಾಗನ್ 845 ಎಸ್‌ಓಸಿ ತಂತ್ರಜ್ಞಾನ ಹೊಂದಿದ ಮೊದಲ ಸ್ಮಾರ್ಟ್‌ಫೋನ್. ಅದರಿಂದಾಗಿಯೇ ಅದು ಸೂಪರ್ ಫಾಸ್ಟ್ ಸ್ಮಾರ್ಟ್‌ಫೋನ್ ಎಂದು ಕರೆಸಿಕೊಂಡಿದೆ. ಆರಂಭದಲ್ಲಿ ಇದರ ಬೆಲೆ ರೂ.39999 ಇತ್ತು.

ಕ್ಸಿಯೋಮಿ ರೆಡ್ ಮಿ ವೈ2
64 ಜಿಬಿಯ ಕ್ಸಿಯೋಮಿ ರೆಡ್ ಮಿ ವೈ2 ಮೊಬೈಲ್‌ನ ಆಫರ್ ಬೆಲೆ ರೂ.9999. ಅಲ್ಲದೇ ರೂ.500 ಅಮೆಜಾನ್ ಕ್ಯಾಶ್‌ಬ್ಯಾರ್ ಬೇರೆ ಇದೆ. ಫ್ರೀ ಸ್ಕ್ರೀನ್ ಪ್ರೊಟೆಕ್ಷನ್ ಕೂಡ ಉಂಟು. 5.99 ಎಡ್ ಡಿಸ್‌ಪ್ಲೇ ಇದೆ. 3080 ಎಂಎಚ್ ಬ್ಯಾಟರಿ ಇದರ ವಿಶೇಷತೆ. 16 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಅದರಲ್ಲಿ ಎಐ ಪೋರ್ಟ್‌ಟ್ರೇಟ್ ಮೋಡ್ ತಂತ್ರಜ್ಞಾನ ಇಂಟರೆಸ್ಟಿಂಗ್ ಆಗಿದೆ. ಇದರ ನಿಜವಾದ ಬೆಲೆ 13499.

ರೆಡ್‌ಮಿ 6 ಪ್ರೊ
ಕ್ಸಿಯೋಮಿ ರೆಡ್‌ಮಿ 6A ಮೊಬೈಲ್ ಪ್ರತಿದಿನ ಫ್ಲ್ಯಾಶ್ ಸೇಲ್‌ನಲ್ಲಿ ಲಭ್ಯವಿದೆ. ಅದಕ್ಕೆ ಹೊರತಾಗಿ ಈ ರೆಡ್‌ಮಿ 6 ಪ್ರೊ ರೂ.10999ಕ್ಕೆ ಲಭ್ಯವಿದೆ. 4000 ಎಂಎಂಚ್ ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನ ಬಲು ದೊಡ್ಡ ಆಸ್ತಿ. ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್ ಅನ್‌ಲಾಕ್ ಮುಂತಾದ ಆಧುನಿಕ ಫೀಚರ್‌ಗಳೆಲ್ಲಾ ಈ ಮೊಬೈಲಲ್ಲಿ ಲಭ್ಯವಿದೆ. 5.84 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಬಹಳ ಆಕರ್ಷಕ.

ಜೆಬಿಎಲ್ ಫ್ಲಿಪ್ 3
ಜೆಬಿಎಲ್ ಫ್ಲಿಪ್ 3 ವೈರ್‌ಲೆಸ್ ಪೋರ್ಟೆಬಲ್ ಸ್ಪೀಕರ್‌ನ ನಿಜವಾದ ಬೆಲೆ ರೂ.9999.ಆದರೆ ಆಫರ್ ಬೆಲೆ 5749. ಈ ಸ್ಪೀಕರ್ ಅನ್ನು ಬ್ಯಾಗಲ್ಲಿ ಹಾಕಿಕೊಂಡು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. ಮೊಬೈಲ್‌ನ ಬ್ಲೂಟೂತ್‌ಗೆ ಕನೆಕ್ ಮಾಡಿದರೆ ಎಷ್ಟು ಬೇಕಾದರೂ ಹಾಡುಗಳನ್ನು ಕೇಳಬಹುದು. ಯಂಗ್ ಜನರೇಷನ್ನಿಗೆ ಈ ಸ್ಪೀಕರ್‌ಗಳ ಕುರಿತು ಭಾರಿ ವ್ಯಾಮೋಹ ಇದೆ. ಇದರ ಬ್ಯಾಟರಿ 3000 ಎಂಎಎಚ್ ಇದೆ

ಅಮೆಜಾನ್ ಇಕೊ ಸ್ಮಾರ್ಟ್ ಸ್ಪೀಕರ್‌ಗಳು
ಅಮೆಜಾನ್ ಸಂಸ್ಥೆಯೇ ನಿರ್ಮಿಸಿರುವ ಇಕೊ ಸ್ಮಾರ್ಟ್ ಸ್ಪೀಕರ್‌ಗಳಿಗೆ ಭಾರಿ ಆಫರ್ ಇದೆ. ರೂ.4499 ಬೆಲೆಯ ಇಕೊ ಡಾಟ್ ರೂ.2999ಕ್ಕೆ ಸಿಗುತ್ತದೆ. ರೂ.4499 ಬೆಲೆಯ ಸೆಕೆಂಡ್ ಜನರೇಷನ್ ಇಕೊ ಡಾಟ್ ರೂ.2449ಕ್ಕೆ ಸಿಗುತ್ತದೆ. ಈ ಸ್ಪೀಕರ್‌ಗಳಿಗೆ ನೀವು ದೂರದಿಂದಲೇ ಅಲೆಕ್ಸಾ ಎಂದು ಕರೆದು ಆರ್ಡರ್ ನೀಡಬಹುದು. ತುಂಬಾ ಇಂಟರೆಸ್ಟಿಂಗ್ ಆದ ಹಲವಾರು ಫೀಚರ್‌ಗಳಿವೆ ಇದರಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8ಕಳೆದ ವರ್ಷ ಬಿಡುಯಾದಾಗ ಇದ್ದ ಬೆಲೆ ರೂ.67990. ಈಗ ಅಮೆಜಾನ್‌ನಲ್ಲಿ ಸಿಗುತ್ತಿರುವ ಬೆಲೆ ರೂ.43900. ಸೂಪರ್ ಅಮೋಲ್‌ಡೆ ಇನ್‌ಫಿನಿಟಿ ಡಿಸ್‌ಪ್ಲೇ ಹೊಂದಿರುವ ಈ ಮೊಬೈಲ್‌ನಲ್ಲಿ ಏನು ನೋಡಿದರೂ ಅದು ಭಾರಿ ಚೆಂದ. 6 ಜಿಬಿ  ರ್ಯಾಮ್ ಹೊಂದಿರುವ ಈ ಮೊಬೈಲು ಭಾರಿ ಸ್ಪೀಡು ಬೇರೆ. ವೈರ್‌ಲೆಸ್ ಚಾರ್ಜ್ ಮಾಡುವ ಸೌಲಭ್ಯ ಇದೆ. 3300 ಎಂಎಎಚ್ ಬ್ಯಾಟರಿ ಹೊಂದಿದೆ.