Asianet Suvarna News Asianet Suvarna News

Cryptocurrency ಯಲ್ಲಿ ಹೂಡಿಕೆ ಮಾಡಿದ್ದಾರಾ ದೈತ್ಯ ಟೆಕ್‌ ಕಂಪನಿ CEO?

*ಸದ್ಯಕ್ಕೆ ನನ್ನ ಬಳಿ ಕ್ರಿಪ್ಟೋಕರೆನ್ಸಿ ಇಲ್ಲ
*ಆದರೆ ಅದರ ಬಗ್ಗೆ ಮಾಹಿತಿ ಇದೆ : ಸುಂದರ್‌ ಪಿಚೈ
*ಕ್ರಿಪ್ಟೋಕರೆನ್ಸಿಯನ್ನು ಆಪಲ್ ಗಮನಿಸುತ್ತಿದೆ : ಟಿಮ್
*ಡಿಜಿಟಲ್‌ ನಾಣ್ಯಗಳಲ್ಲಿ ಹೂಡಿಕೆ ಮಾಡಿರುವ ಆಪಲ್ ಸಿಇಓ
*ಪ್ರಪಂಚದಾದ್ಯಂತ ವೇಗದಿಂದ ಬೆಳೆಯುತ್ತಿರುವ ಕ್ರೀಪ್ಟೋ!

Alphabet CEO Sundar Pichai and apple ceo tim cook speak about Cryptocurrency mnj
Author
Bengaluru, First Published Nov 19, 2021, 9:27 PM IST
  • Facebook
  • Twitter
  • Whatsapp

ಯುಎಸ್‌ಎ (ನ.19): ಆಲ್ಫಾಬೆಟ್ (Alphabet) ಮತ್ತು ಗೂಗಲ್ (Google) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸುಂದರ್ ಪಿಚೈ (Sundar Pichai) ಅವರು ತಮ್ಮ ಕ್ರಿಪ್ಟೋಕರೆನ್ಸಿ (Cruptocurrency) ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ ಹಾಗೂ ಸದ್ಯಕ್ಕೆ  ಯಾವುದೂ  ಕ್ರಿಪ್ಟೋಕರೆನ್ಸಿ ಅವರ ಬಲಿ ಇಲ್ಲ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಸುಂದರ್‌ ಪಿಚೈ  ನಾನು ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ತಕ್ಕ ಮಟ್ಟಿಗೆ ತೊಡಗಿಸಿಕೊಂಡಿದ್ದೇನೆ, ಅದರ ಒಳಗೆ ಮತ್ತು ಹೊರಗೆ ನನಗೆ ತಿಳಿದಿದೆ" ಎಂದು  ಹೇಳಿದ್ದಾರೆ.

2018 ರಲ್ಲಿ ಪಿಚೈ ಅವರು ತಮ್ಮ 11 ವರ್ಷದ ಮಗ ಮನೆಯಲ್ಲಿ ಕಂಪ್ಯೂಟರ್‌ (Computer) ಬಳಸಿ ಕ್ರಿಪ್ಟೋಕರೆನ್ಸಿ ಎಥೆರಿಯಮ್ ಬಗ್ಗೆ ತಿಳಿಯುತ್ತಿದ್ದಾನೆ ಎಂದು ಹೇಳಿದ್ದರು. "ಕಳೆದ ವಾರ ನಾನು ನನ್ನ ಮಗನೊಂದಿಗೆ ಡಿನ್ನರ್‌ನಲ್ಲಿದ್ದೆ ಮತ್ತು ನಾನು ಬಿಟ್‌ಕಾಯಿನ್ (Bitcoin) ವಿಷಯಕ್ಕೆ ಸಂಬಂಧಪಟ್ಟಂತೆ ಅವನ ಬಳಿ  ಮಾತನಾಡುತ್ತಿದ್ದೆ. ಆಗ ನನ್ನ ಮಗ ನಾನು ಎಥೆರಿಯಮ್ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದ. ಆದರೆ  ಎಥೆರಿಯಮ್ ಕ್ರಿಪ್ಟೋಕರೆನ್ಸಿಗಿಂತ ಸ್ವಲ್ಪ ವಿಭಿನ್ನವಾಗಿದೆ" ಎಂದು ಪಿಚೈ ಹೇಳಿದ್ದಾರೆ “ಅವನಿಗೆ 11 ವರ್ಷ.  ಅವನು ಈಗಾಗಲೇ  ಕ್ರಿಪ್ಟೋಕರೆನ್ಸಿ ಬಗ್ಗೆ ಅಸಕ್ತಿ ಹೊಂದಿದ್ದಾನೆ ಎಂದು ಪಿಚೈ ಹೇಳಿದ್ದಾರೆ.

ಕ್ರಿಪ್ಟೋನಲ್ಲಿ ಹೂಡಿಕೆ ಮಾಡಿರುವ ಆಪಲ್ ಸಿಇಓ

ಇತ್ತೀಚೆಗೆ, ಆಪಲ್ ಸಿಇಒ ಟಿಮ್ ಕುಕ್ (Apple CEO Tim Cook) ಅವರು ಕ್ರಿಪ್ಟೋನಲ್ಲಿ ಹೂಡಿಕೆ ಮಾಡಿದ್ದು ಮತ್ತು ಡಿಜಿಟಲ್ ನಾಣ್ಯಗಳನ್ನು (digital coins) ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದರು. ನ್ಯೂಯಾರ್ಕ್ ಟೈಮ್ಸ್‌ನ ಎರಡು ದಿನಗಳ ಆನ್‌ಲೈನ್ ಶೃಂಗಸಭೆಯಲ್ಲಿ ಈ ಬ್ಗಗೆ ಟಿಮ್‌ ಮಾತನಡಿದ್ದರು.  ಸಭೆಯಲ್ಲಿ ಆಪಲ್ ಸಿಇಒ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಟ್ರೆಂಡಿಂಗ್ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರು.‌

ಆದಾಗ್ಯೂ, ಕುಕ್ ಯಾವುದೇ ಸಮಯದಲ್ಲಿ ಆಪಲ್ ಪೇ ಮೂಲಕ (Apple pay) ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುವ ಕಲ್ಪನೆಯನ್ನು ತಳ್ಳಿಹಾಕಿದರು. ಆಪಲ್ ಕ್ರಿಪ್ಟೋವನ್ನು ಗಮನಿಸುತ್ತಿದೆ ಆದರೆ ಆಪಲ್ ಪೇನಲ್ಲಿ ಅಂತಹ ಕಾರ್ಯವನ್ನು ಪ್ರಾರಂಭಿಸಲು ಯಾವುದೇ ಯೋಜನೆಯನ್ನು ಹೊಂದಿಲ್ಲ ಅವರು ಹೇಳಿದರು.

ಕ್ರಿಪ್ಟೋಕರೆನ್ಸಿಯ ಬಗ್ಗೆ ಮಾತನಾಡಿದ್ದ ಪ್ರಧಾನಿ!

ಏತನ್ಮಧ್ಯೆ, ಭಾರತದ ಪ್ರಧಾನಿ ಮೋದಿ (Narendra Modi) ಸಿಡ್ನಿ ಸಂವಾದದಲ್ಲಿ ಮಾತನಾಡುವಾಗ ಕ್ರಿಪ್ಟೋಕರೆನ್ಸಿಯು ತಪ್ಪು ಕೈಗಳಲ್ಲಿ ಸೇರಬಾರದು. ಈ ಮೂಲಕ  ಯುವಕರು ದಾರಿ ತಪ್ಪದಂತೆ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದುಗೂಡಬೇಕು ಎಂದು ಕರೆ ನೀಡಿದ್ದರು. ಸಿಡ್ನಿ ಸಂವಾದದಲ್ಲಿ ತಮ್ಮ ಭಾಷಣದಲ್ಲಿ, ಪಿಎಂ ಮೋದಿ ಅವರು ಜಗತ್ತು ಪ್ರಗತಿ ಮತ್ತು ಸಮೃದ್ಧಿಯ ಅವಕಾಶಗಳ ಹೊಸ ಯುಗವನ್ನು ಪ್ರಾರಂಭಿಸಿದೆ. ಆದರೆ ನಾವು ಸಮುದ್ರದ ತಳದಿಂದ ಹಿಡಿದು ಬಾಹ್ಯಾಕಾಶದವರೆಗೂ ವಿವಿಧ ಸಂಶೋಧನೆಗಳನ್ನು ಮಾಡಿದ್ದರು ನಮಗೆ ಹಲವಾರು ರೀತಿಯ ತೊಂದರೆಗಳನ್ನು ಮತ್ತು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನವು ಈಗಾಗಲೇ ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ ಮತ್ತು ಭವಿಷ್ಯದ ಅಂತರಾಷ್ಟ್ರೀಯ ಭವಿಷ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ" ಎಂದು ಹೇಳಿದ್ದರು.

ವೇಗದಿಂದ ಬೆಳೆಯುತ್ತಿರುವ ಕ್ರೀಪ್ಟೋ!

ಕ್ರಿಪ್ಟೋಕರೆನ್ಸಿ ಬಳಕೆ ಪ್ರಪಂಚದಾದ್ಯಂತ ಬೆಳೆಯುತ್ತಿದೆ. 2021 ರ ಹೊತ್ತಿಗೆ, ಟ್ರಿಪಲ್ಎ (TripleA) ಸಂಶೋಧನಾ ಕಂಪನಿಯ ಪ್ರಕಾರ ಜಾಗತಿಕ ಕ್ರಿಪ್ಟೋ ಮಾಲೀಕತ್ವದ ದರಗಳನ್ನು ಸರಾಸರಿ 3.9 ಪ್ರತಿಶತದಷ್ಟಿದೆ. ವಿಶ್ವಾದ್ಯಂತ 300 ಮಿಲಿಯನ್ ಕ್ರಿಪ್ಟೋ ಬಳಕೆದಾರರಿದ್ದಾರೆ. ಮತ್ತು 18,000 ವ್ಯವಹಾರಗಳು ಈಗಾಗಲೇ ಕ್ರಿಪ್ಟೋಕರೆನ್ಸಿ ಪಾವತಿಗಳನ್ನು ಸ್ವೀಕರಿಸುತ್ತಿವೆ. ಬ್ಲಾಕ್‌ಚೈನ್ ಡೇಟಾ ಪ್ಲಾಟ್‌ಫಾರ್ಮ್ ಚೈನಾಲಿಸಿಸ್‌ನ (Chainalysis) 2021 ಗ್ಲೋಬಲ್ ಕ್ರಿಪ್ಟೋ ಅಡಾಪ್ಷನ್ ಇಂಡೆಕ್ಸ್ ಪ್ರಕಾರ (Global crypto adoption Index), ವಿಯೆಟ್ನಾಂನ ನಂತರ ವಿಶ್ವಾದ್ಯಂತ ಕ್ರಿಪ್ಟೋ ಅಳವಡಿಕೆಯ ವಿಷಯದಲ್ಲಿ ಭಾರತವು (India) ಎರಡನೇ ಸ್ಥಾನದಲ್ಲಿದೆ. ಅಂದರೆ ಯುಎಸ್, ಯುಕೆ ಮತ್ತು ಚೀನಾದಂತಹ ದೇಶಗಳಿಗಿಂತ ಮುಂದಿದೆ. ಕ್ರಿಪ್ಟೋ ಸಂಶೋಧನೆ ಮತ್ತು ಗುಪ್ತಚರ ಸಂಸ್ಥೆ CREBACO ನಡೆಸಿದ ಸಮೀಕ್ಷೆಯು, ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಹೂಡಿಕೆಯು ಈಗ $10 ಶತಕೋಟಿಯಷ್ಟಿದೆ ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios