ನೂತನ ಬೆಂಟ್ಲಿ ಬೆಂಟಯ್ಯಾಗ ಕಾರಿನ ಬೆಲೆ ಏಷ್ಟು?

First Published 8, Jun 2018, 9:28 PM IST
All-New Bentley Bentayga V8 Launched at Rs. 3.78 Crores
Highlights

ದುಬಾರಿ ಕಾರುಗಳ ಪೈಕಿ ಭಾರತದಲ್ಲಿ ಬೆಂಟ್ಲಿ ಕಾರು ಸಂಸ್ಥೆ ತನ್ನದೇ ಆದ ಮಾರುಕಟ್ಟೆ ಹೊಂದಿಗೆ. ಇದೀಗ ನೂತನ ಬೆಂಟಯ್ಯಾಗ ವಿ8 ಕಾರನ್ನ ಬೆಂಟ್ಲಿ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಏಷ್ಟು? ಇಲ್ಲಿದೆ ಡೀಟೇಲ್ಸ್

ಬೆಂಗಳೂರು(ಜೂನ್.8):  ಬ್ರಿಟೀಷ್ ಮೂಲದ ಲಕ್ಸುರಿ ಕಾರು ಸಂಸ್ಥೆ ಬೆಂಟ್ಲಿ, ಭಾರತದ ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಿದೆ. ಇದೀಗ ಬೆಂಟ್ಲಿ ಭಾರತದಲ್ಲಿ ಬೆಂಟಯ್ಯಾಗ ವಿ8 ಕಾರನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ನೂತನ ಕಾರು ಇದೀಗ 4.0 ಲೀಟರ್ ದ್ವಿ-ಟರ್ಬೋಚಾರ್ಜಡ್ ಪೆಟ್ರೋಲ್ ಇಂಜಿನ್ ಹೊಂದಿದೆ.

ಬೆಂಟಯ್ಯಾಗ ವಿ8 ಕಾರಿನ ಸಾಮರ್ಥ್ಯ 542 ಬಿಹೆಚ್‌ಪಿ. ಬಲಿಷ್ಠ ಹಾಗೂ ಶಕ್ತಿಶಾಲಿ ಇಂಜಿನ್ ಹೊಂದಿರುವ ನೂತನ ಬೆಂಟ್ಲಿ, ಮೈಲೇಜ್ 8.77 ಕೀಲೋಮೀಟರ್ ಪ್ರತಿ ಲೀಟರ್‌ಗೆ.  ನೂತನ ಕಾರಿನ ವಿನ್ಯಾಸ ಕೂಡ ಅಷ್ಟೇ ಆಕರ್ಷಣೀಯವಾಗಿದೆ.  

ನಾಲ್ಕು ರೌಂಡ್ ಎಲ್ಇಡಿ ಹೆಡ್‌ಲೈಟ್ಸ್, ಜೊತೆಗೆ ಮುಂಭಾಗದಲ್ಲಿ ಮ್ಯಾಟ್ರಿಕ್ಸ್ ಗ್ರಿಲ್ಡ್ ಅಳವಡಿಸಲಾಗಿದೆ. ಸ್ಪೋರ್ಟಿಂಗ್ ರೆಡ್ ಬ್ರೇಕ್ ಸಿಸ್ಟಮ್ ಇದರ ವಿಶೇಷತೆ. ಆಧುನಿಕ ಬ್ರೆಕಿಂಗ್ ಸಿಸ್ಟಮ್ ಹೊಂದಿರುವ ಬೆಂಟ್ಲಿ ಎಂದಿನಂತೆ ಸುರಕ್ಷತೆ ವಿಚಾರದಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದೆ.

8 ಇಂಚಿನ ಟಚ್ ಸ್ಕ್ರೀನ್, ಕ್ಲಾಸ್ ಲೀಡಿಂಗ್ ನಾವಿಗೇಶನ್, 60 ಜಿಬಿ ಹಾರ್ಡ್ ಡ್ರೈವ್ ಹಾಗೂ 30 ಭಾಷೆಗಳು ಲಭ್ಯವಿದೆ. 4ಜಿ, ವೈಫೈ ಹಾಗೂ ಬ್ಲೂಟೂಥ್ ಹೊಂದಿದೆ. 3 ವಿದಧ ಆಡಿಯೋ ಸಿಸ್ಟಮ್ ನೀಡಲಾಗಿದೆ. ಎಸ್‌ಯುವಿ ಇಂಜಿನ್ ನೂತನ ಬೆಂಟ್ಲಿ, ಗ್ರಾಹಕನಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸಿದೆ.

ನೂತನ ಬೆಂಟ್ಲಿ ಬೆಂಟಯ್ಯಾಗ ಹಿಂದಿನ ಬೆಂಟ್ಲಿ ಕಾರುಗಳಿಗಿಂತ ಹೆಚ್ಚಿನ ರೋಡ್ ಕ್ಲೀಯರೆನ್ಸ್ ನೀಡಲಾಗಿದೆ. ಹೀಗಾಗಿ ಭಾರತದ ಆಫ್ ರೋಡ್‌ಗಳಲ್ಲೂ ನೂತನ ಬೆಂಟ್ಲಿ ಬೆಂಟಯ್ಯಾಗ ಸೈ ಎನಿಸಿಕೊಳ್ಳಲಿದೆ. ಇನ್ನು ನೂತನ ಬೆಂಟಯ್ಯಾಗ  ವಿ8 ಕಾರಿನ ಬೆಲೆ 3.78 ಕೋಟಿ(ಮುಂಬೈ ಎಕ್ಸ್-ಶೋ ರೂಮ್). ದುಬಾರಿ ಕಾರು ಕೊಳ್ಳುವವರಿಗೆ ಬೆಂಟ್ಲಿ ಉತ್ತಮ ಆಯ್ಕೆ ಅನ್ನೋದರಲ್ಲಿ ಎರಡು ಮಾತಿಲ್ಲ.

loader