Asianet Suvarna News Asianet Suvarna News

ಜ್ಯೋತಿಷಿಗಳನ್ನೂ ರಿಪ್ಲೇಸ್‌ ಮಾಡುತ್ತಾ AI ಟೆಕ್ನಾಲಜಿ, ಸಾವಿನ ಬಗ್ಗೆ ನಿಖರ ಮಾಹಿತಿ ನೀಡುತ್ತೆ ಈ ತಂತ್ರಜ್ಞಾನ

AI ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಕಷ್ಟು ಬದಲಾವಣೆ ಉಂಟು ಮಾಡುತ್ತಿದೆ. ಹಲವು ವಿಚಾರಗಳು ಎಐನಿಂದಾಗಿ ಸುಲಭವಾಗಿ ತಿಳಿಯುತ್ತಿದೆ. ಹೀಗಿರುವಾಗ,  AI ತಂತ್ರಜ್ಞಾನದ ಟೂಲ್‌ವೊಂದು ಸಾವಿನ ಬಗ್ಗೆ ನಿಖರ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ. 

AIs Death Prediction Tool Claims Remarkable Accuracy, Know The Details Vin
Author
First Published Dec 21, 2023, 11:29 AM IST

ಸದ್ಯ ಆರ್ಟಿಫಿಶಿಯಲ್ ಇಂಟಿಲೆಜೆನ್ಸ್ ಹಾಗೂ ಜಾಟ್ ಜಿಪಿಟಿ ಭಾರೀ ಸದ್ದು ಮಾಡುತ್ತಿದೆ. ಇದರ ಜೊತೆಗೆ ಆತಂಕವೂ ಹೆಚ್ಚಾಗುತ್ತಿದೆ. ಊಹೆಗೂ ನಿಲುಕದ ತಂತ್ರಜ್ಞಾನ ಈಗಾಗಲೇ ಹಲವು ಬಾರಿ ಅಚ್ಚರಿಗೆ ಕಾರಣವಾಗಿದೆ.. AI ತಂತ್ರಜ್ಞಾನ ಬಳಸಿ ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಿರೋದು ಈಗಾಗ್ಲೇ ವೈರಲ್ ಆಗಿದೆ. ಮಾತ್ರವಲ್ಲ ಡೀಫ್‌ಫೇಕ್‌ ತಂತ್ರಜ್ಞಾನದ ಮೂಲಕ ಮಾರ್ಪಡಿಸಿದ ರಶ್ಮಿಕಾ ಮಂದಣ್ಣ, ಆಲಿಯಾ ಭಟ್‌, ಕಾಜೋಲ್‌ ಪೋಟೋಸ್ ಇತ್ತೀಚಿಗೆ ವೈರಲ್ ಆಗಿತ್ತು. ಒಟ್ನಲ್ಲಿ  

ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯದ (DTU) ಸಂಶೋಧಕರು AI ಆಧಾರಿತ ಸಾವಿನ ಮುನ್ಸೂಚಕವನ್ನು ಅಭಿವೃದ್ಧಿಪಡಿಸಿದ್ದಾರೆ, ವ್ಯಕ್ತಿಗಳ ಜೀವಿತಾವಧಿಯ ಬಗ್ಗೆ ಮಾಹಿತಿ ನೀಡಲು ಇದು ನೆರವಾಗಲಿದೆ. ChatGPT ಮಾದರಿಯಲ್ಲಿ, AI Life2vec ವ್ಯವಸ್ಥೆಯು ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಆದಾಯದಂತಹ ವೈಯಕ್ತಿಕ ಮಾಹಿತಿಯನ್ನು ಸಾವಿನ ಬಗ್ಗೆ ಮಾಹಿತಿ ನೀಡಲು ಬಳಸಿಕೊಳ್ಳುತ್ತದೆ.

ಎಐ ತಂತ್ರಜ್ಞಾನ ಬಳಸಿ ಬಾಯ್ ಫ್ರೆಂಡ್ ಗುಟ್ಟು ರಟ್ಟು ಮಾಡಿದ ಯುವತಿ

ಡೆನ್ಮಾರ್ಕ್‌ನ ಜನಸಂಖ್ಯೆಯ ಡೇಟಾವನ್ನು ಆಧರಿಸಿ, ಮಾದರಿಯು ಅದರ ನಿಖರತೆಯನ್ನು ಪರಿಷ್ಕರಿಸುತ್ತದೆ. 6 ಮಿಲಿಯನ್ ಜನರನ್ನು ಒಳಗೊಂಡ 2008ರಿಂದ 2020ರ ವರೆಗಿನ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿ ಈ ಸಾವಿನ ಮುನ್ಸೂಚನೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದು 78 ಪ್ರತಿಶತ ನಿಖರತೆಯ ದರವನ್ನು ಸಾಧಿಸುತ್ತದೆ.

'ಪ್ರತಿ ವ್ಯಕ್ತಿಯ ಜೀವನವನ್ನು ಆ ವ್ಯಕ್ತಿಯ ಸಂಭವಿಸುವ ಘಟನೆಗಳ ಅನುಕ್ರಮವಾಗಿ ಆತನ ಜೀವನಾವಧಿಯನ್ನು ನಿರ್ಧರಿಸಲಾಗುತ್ತದೆ. ಮಾನವ ಜೀವನವನ್ನು ವಿಶ್ಲೇಷಿಸಲು ನಾವು ಚಾಟ್‌ಜಿಪಿಟಿ (ಟ್ರಾನ್ಸ್‌ಫಾರ್ಮರ್ ಮಾದರಿಗಳು ಎಂದು ಕರೆಯಲ್ಪಡುವ) ತಂತ್ರಜ್ಞಾನವನ್ನು ಬಳಸುತ್ತೇವೆ' ಎಂದು ಡಿಸೆಂಬರ್ 2023ರ ಅಧ್ಯಯನದ ಪ್ರಮುಖ ಲೇಖಕ ಸುನೆ ಲೆಹ್ಮನ್ ತಿಳಿಸಿದ್ದಾರೆ.

AI ತಂತ್ರಜ್ಞಾನ ಬಳಸಿ ಗತಕಾಲದ ಸೆಲ್ಫಿ ಫೋಟೋ ಸೃಷ್ಟಿ, ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ! 

Follow Us:
Download App:
  • android
  • ios