ಈ ಯೋಜನೆಯಲ್ಲಿ ನಿತ್ಯ 1.5 ಜಿಬಿ ಇಂಟರ್'ನೆಟ್ ಹಾಗೂ ಅನಿಯಮಿತ ಕರೆಗಳು, ದಿನಕ್ಕೆ 3000 ಸಾವಿರ ಸಂದೇಶಗಳು ಒಳಗೊಂಡಿರುತ್ತವೆ.

ಮುಂಬೈ(ನ.08): ಕಳೆದ ಒಂದು ವರ್ಷದ ಹಿಂದೆ ಟೆಲಿಕಾಂ ದಿಗ್ಗಜ ಜಿಯೋ ಉಚಿತ ಆಫರ್ ಪ್ರಕಟಿಸಿದ ನಂತರ ಇತರ ಮುಂಚೂಣಿ ಸಂಸ್ಥೆಗಳು ತಾವೇನು ಕಡಿಮೆಯಿಲ್ಲವೆಂಬಂತೆ ಕಡಿಮೆ ಬೆಲೆಗೆ ಉತ್ತಮ ಕೊಡುಗೆಗಳನ್ನು ಪ್ರಕಟಿಸಲು ಶುರು ಮಾಡಿದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ನಂ.1 ಟೆಲಿಕಾಂ ಸಂಸ್ಥೆ ಏರ್'ಟೆಲ್ ಜಿಯೋಗಿಂತ ಅತ್ಯುತ್ತಮ ಆಫರ್ ಪ್ರಕಟಿಸಿದೆ. 349ರೂ.ಗಳ ಈ ಯೋಜನೆಯಲ್ಲಿ ನಿತ್ಯ 1.5 ಜಿಬಿ ಇಂಟರ್'ನೆಟ್ ಹಾಗೂ ಅನಿಯಮಿತ ಕರೆಗಳು, ದಿನಕ್ಕೆ 3000 ಸಾವಿರ ಸಂದೇಶಗಳು ಒಳಗೊಂಡಿರುತ್ತವೆ. ಯೋಜನೆಯ ಕಾಲಾವಧಿ 28 ದಿನಗಳು. ಜಿಯೋದ 'ಧನ್ ಧನಾ ಧನ್' ಯೋಜನೆಗೆ ಕೌಂಟರ್ ಕೊಡುವ ಸಲುವಾಗಿ ಈ ಯೋಜನೆಯನ್ನು ಪ್ರಕಟಿಸಲಾಗಿದೆ.

448 ರೂ.ಗಳಿಗೆ 84 ದಿನ 1 ಜಿಬಿ

'ಧನ್ ಧನಾ ಧನ್' ಯೋಜನೆಯಲ್ಲಿ ಇದೇ ರೀತಿಯ ಕೊಡುಗೆಗಳಿದ್ದರೂ ನಿತ್ಯ 1 ಜಿಬಿ ಇಂಟರ್'ನೆಟ್ ಮಾತ್ರ ಲಭ್ಯವಿದೆ. ಏರ್'ಟೆಲ್ ಮೈ ಏರ್ ಟೆಲ್ ಆಪ್'ನಲ್ಲಿ ಮತ್ತೊಂದು 448ರೂ.ಗಳ ಯೋಜನೆ ಪ್ರಕಟಿಸಿದ್ದು ಇದು 84 ದಿನಗಳ ಅವಧಿಯವರೆಗೂ ನಿತ್ಯ ಜಿಬಿ 3ಜಿ/4ಜಿ ಇಂಟರ್'ನೆಟ್ ಅನಿಯಮಿತ ಸ್ಥಳೀಯ ಹಾಗೂ ಎಸ್'ಟಿಡಿ ಕರೆಗಳು ಉಚಿತ ರೋಮಿಂಗ್ ಹಾಗೂ 3000 ಸಂದೇಶಗಳಿರುತ್ತವೆ.

ವೊಡಫೋನ್'ನಲ್ಲಿ 496, ಐಡಿಯಾ 498 ರೂ.

ವೊಡಾಫೋನ್'ನಲ್ಲಿ 496 ರೂ.ಗಳಿಗೆ ಇದೇ ರೀತಿಯ 84 ದಿನಗಳವರಗೆ ಆಫರ್ ಇದೆ. ಐಡಿಯಾದಲ್ಲಿ 498 ರೂ.ಗಳ ಆಫರ್'ನಲ್ಲಿ ಈ ಕೊಡುಗೆಗಳಿವೆ.