ಬೆಂಗಳೂರು(ಪೆ.20): ಕಾಲ್ ಡ್ರಾಪ್ ಸಮಸ್ಯೆ ಮೊಬೈಲ್ ಬಳಕೆದಾರರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲೊಂದು. ಕಾಲ್ ಡ್ರಾಪ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬ ಭಾರತೀಯ ಮೊಬೈಲ್ ಬಳಕೆದಾರ ಕಾತರದಿಂದ ಕಾಯುತ್ತಿದ್ದಾನೆ.

ಇದೀಗ ಈ ಕಾಲ್ ಡ್ರಾಪ್ ಸಮಸ್ಯೆ ಮುಕ್ತಿಗಾಗಿ ಏರ್‌ಟೆಲ್ ವೈಫೈ ಕಾಲಿಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಈ ಮೂಲಕ ವೈಫೈ ಕಾಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ ಭಾರತದ ಮೊದಲ ಟೆಲಿಕಾಂ ಸಂಸ್ಥೆ ಎಂಬ ಹೆಗ್ಗಳಿಕೆಗೆ ಏರ್‌ಟೆಲ್ ಪಾತ್ರವಾಗಿದೆ.

ಈ ಹೊಸ ವೈಫೈ ಕಾಲಿಂಗ್ ವ್ಯವಸ್ಥೆ ಸದ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ, ಉಳಿದೆಲ್ಲ ನಗರಗಳ ಬ್ರಾಡ್‌ಬ್ಯಾಂಡ್‌ ಸೇವೆಗಳಲ್ಲಿ ಹಾಗೂ ಜನಪ್ರಿಯ ಸ್ಮಾರ್ಟ್‌ ಫೋನ್‌ಗಳಲ್ಲಿ ಲಭ್ಯವಿದೆ ಎಂದು ಏರ್‌ಟೆಲ್ ತಿಳಿಸಿದೆ.

ಕಳೆದ ಡಿಸೆಂಬರ್‌ 2019ರಲ್ಲೇ ವೈಫೈ ಕಾಲಿಂಗ್ ಸೇವೆಯನ್ನು ಜಾರಿಗೊಳಿಸಲಾಗಿದ್ದು, ಸುಮಾರು 18 ಲಕ್ಷಕ್ಕೂ ಅಧಿಕ ಗ್ರಾಹಕರು ಇದರ ಸದುಪಯೋಗ ಪಡೆದಿದ್ದಾರೆ ಎಂದು ಏರ್‌ಟೆಲ್ ಹೇಳಿದೆ.

ಗ್ರಾಹಕರಿಂದ ಪಡೆದ ಅಭಿಪ್ರಾಯ ಹಾಗೂ ಸಲಹೆಗಳ ಆಧಾರದಲ್ಲಿ ಇದೀಗ ಬ್ರಾಡ್‌ಬ್ಯಾಂಡ್‌ ಸೇವೆಗಳು ಹಾಗೂ 17 ಬಗೆಯ ಬ್ರ್ಯಾಂಡ್ಗಳ 100+ ಡಿವೈಸ್‌ಗಳಲ್ಲಿ ವೈಫೈ ಕಾಲಿಂಗ್ ವ್ಯವಸ್ಥೆಯನ್ನು ಸೇರಿಸಲಾಗಿದೆ.

ವೈಫೈ ಕಾಲಿಂಗ್'ನಲ್ಲಿ ವಾಯ್ಸ್‌ ಕಾಲ್‌ಗೆ ನಿಮ್ಮ ಸೆಲ್ಯುಲರ್ ನೆಟ್‌ವರ್ಕ್‌ ಬದಲಾಗಿ ವೈಫೈ ವ್ಯವಸ್ಥೆಯನ್ನೇ ಬಳಸಲಾಗುತ್ತದೆ. ಇದು ನಿಮ್ಮ ವಾಯ್ಸ್‌ ಕಾಲ್‌ಗೆ ಎಚ್‌ಡಿ ಗುಣಮಟ್ಟವನ್ನು ನೀಡುತ್ತದೆ. ಮನೆ, ಕಚೇರಿಗಳಲ್ಲಿ ವೈಫೈ ಸಂಪರ್ಕ ಉತ್ತಮವಾಗಿದ್ದರೆ ಉತ್ತಮ ಗುಣಮಟ್ಟದ ಕಾಲಿಂಗ್ ಫೆಸಿಲಿಟಿ ಗ್ರಾಹಕರಿಗೆ ಲಭ್ಯವಾಗಲಿದೆ.

ಏರ್‌ಟೆಲ್‌ ವೈಫೈ ಕಾಲಿಂಗ್ ವ್ಯವಸ್ಥೆಯಿಂದ ಗ್ರಾಹಕರು ಕಾಲ್‌ ಡ್ರಾಪ್‌ ಸಮಸ್ಯೆಗೆ ಗುರಿಯಾಗಲಾರರು ಎಂದು ಏರ್‌ಟೆಲ್ ಭರವಸೆ ನೀಡಿದೆ.

ಆಕ್ಟಿವೇಟ್ ಮಾಡುವ ಬಗೆ ಹೇಗೆ?:
1. ಲೇಟೆಸ್ಟ್ ಒಎಸ್'ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬೇಕು.
2.VoLTE ಸ್ವಿಚ್ ಎನೇಬಲ್ ಮಾಡಿಕೊಳ್ಳಬೇಕು.
3. ವೈಫೈ ಕಾಲಿಂಗ್ ಸ್ಪೀಚ್ ಎನೇಬಲ್ ಮಾಡಿಕೊಳ್ಳಬೇಕು.

ಈ ಕೆಳಗಿನ ಪಟ್ಟಿಯಲ್ಲಿರುವ ಮೊಬೈಲ್‌ಗಳಲ್ಲಿ ವೈಫೈ ಕಾಲಿಂಗ್ ಫೀಚರ್ ಇರಲಿದೆ.

1. ಕ್ಸಿಯೋಮಿ: edmi K20, Redmi K20 Pro, POCO F1, Redmi 7A, Redmi 7, Redmi Note 7 Pro & Redmi Y3
2. ಸ್ಯಾಮ್'ಸಂಗ್: Galaxy J6, A10s, On6, M30s, S10, S10+, S10e,M20, Note 10, Note 9, Note 10+, M30, A30s, A50S
3. ಒನ್ ಪ್ಲಸ್: One Plus 7, One Plus 7T, One Plus 7Pro, One Plus 7T Pro, One Plus 6, One Plus 6T
4. ಆಪಲ್: iPhone models starting 6s and above (including all Variations of different models)
5. ವಿವೋ: V15 Pro, Y17
6. ಟೆಕ್ನೋ ಸ್ಪೈಸ್:
7. ಐಟೆಲ್: A46
8. ಇನ್‌ಫಿನಿಕ್ಷ್: Hot 8, S5 Lite , S5, Note 4, Smart 2, Note 5, S4, Smart 3, Hot 7
9. ಮೊಬಿಸ್ಟಾರ್: C1, C1 Lite, C1 Shine, C2, E1 Selfie, X1 Notch
10. ಕೂಲ್ ಪ್ಯಾಡ್: Cool 3, Cool 5, Note 5, Mega 5C, Note 5 Lite
11. ಜಿಯೋನಿ: F205 Pro, F103 Pro
12. ಆಸಸ್: Zen Phone Pro, Zen Pro Max
13. ಮೈಕ್ರೋಮ್ಯಾಕ್ಸ್: Infinity N12, N11, B5
14. ಕ್ಸೋಲೋ: XOLO ZX
15. ಪ್ಯಾನಸೋನಿಕ್: P100,  Eluguray 700,  P95, P85 NXT

ಆಯ್ದ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ವೈಫೈ ಕಾಲಿಂಗ್ ಸೌಲಭ್ಯವನ್ನೂ ಎಲ್ಲಾ ಫೋನ್‌ಗಳಿಗೂ ಒದಗಿಸಲು ಏರ್‌ಟೆಲ್‌ ಕಾರ್ಯೋನ್ಮುಖವಾಗಿದೆ.  ಒಟ್ಟಿನಲ್ಲಿ ಕಾಲ್‌ಡ್ರಾಪ್‌ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಏರ್‌ಟೆಲ್ ವೈಫೈ ಕಾಲಿಂಗ್ ಸೌಲಭ್ಯ ಅತ್ಯುತ್ತಮ ಎನ್ನಬಹುದು.