ಏರ್ ಟೆಲ್ 4ಜಿ ಸೇವೆಯಲ್ಲಿ ವ್ಯತ್ಯಯ

ಏರ್ ಟೆಲ್ 4ಜಿ ಸೇವೆಯಲ್ಲಿ ಸಮಸ್ಯೆ ಕಂಡು ಬಂದಿದ್ದು ಇದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಗ್ರಾಹಕರು ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಕೂಡ ಈ ರೀತಿಯಾಗಿ ವ್ಯತ್ಯಯವಾಗುತ್ತಿದೆ. 

Airtel 4g Service Network Down

ಬೆಂಗಳೂರು :  ದೇಶದ ಅತಿದೊಡ್ಡ ದೂರಸಂಪರ್ಕ ಸೇವಾದಾರ ಕಂಪನಿಯಾದ ಏರ್‌ಟೆಲ್‌ನ 4ಜಿ ನೆಟ್ವರ್ಕ್ ಸೇವೆ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವ್ಯತ್ಯಯವಾಗುತ್ತಿದೆ. ಈ ಕುರಿತು ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು, ಮೈಸೂರು, ಧಾರವಾಡ,ದಕ್ಷಿಣ ಕನ್ನಡ, ಮಂಡ್ಯ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಯಾದಗಿರಿ, ಚಿತ್ರದುರ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಏರ್‌ಟೆಲ್‌ನ 4ಜಿ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. 

ಏರ್‌ಟೆಲ್‌ನ ಗ್ರಾಹಕ ಸೇವಾ ಅಧಿಕಾರಿಗಳನ್ನು ಈ ಕುರಿತು ಸಂಪರ್ಕಿಸಿ ದಾಗ ಶೀಘ್ರ ಈ ಸಮಸ್ಯೆ ಬಗೆಹರಿಯಲಿದೆ ಎನ್ನುವ ಭರವಸೆ ಸಿಗುತ್ತಿದೆ.  ಆದರೂ ಪದೇ ಪದೆ ನೆಟ್‌ವರ್ಕ್ ಕೈ ಕೊಡುವುದು, ನಿಧಾನವಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಗ್ರಾಹಕರು ಕಿರಿಕಿರಿ  ಎದುರಿ ಸುತ್ತಿದ್ದಾರೆ. ಕೆಲ ಗ್ರಾಹಕರಂತೂ ಏರ್‌ಟೆಲ್‌ನಿಂದ ಪೋರ್ಟ್ ಆಗಲೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. 

ಈ ಬಗ್ಗೆ ಕನ್ನಡಪ್ರಭ ಏರ್ ಟೆಲ್ ನೆಟ್‌ವರ್ಕ್ ಇಂಜಿನಿಯರ್ ಒಬ್ಬರನ್ನು ಸಂಪರ್ಕಸಿದರೆ, ನೆಟ್‌ವರ್ಕ್ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬಂದಿಲ್ಲ. ನಿಮ್ಮ ದೂರಿನ ಆಧಾರದ ಮೇಲೆ ನೆಟ್‌ವರ್ಕ್ ಸಮಸ್ಯೆ ಪರಿಶೀಲಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ನಗರದ ಬಹುತೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಉಂಟಾಗಿ ಜನರು ತೀವ್ರವಾಗಿ ಪರದಾಡಿದ್ದಾರೆ. ನೆಟ್‌ವರ್ಕ್ ಸೇವೆಗಳ ಮೂಲಕವೇ ವ್ಯಾಪಾರ ವಹಿವಾಟು, ಹಲವು ತುರ್ತು ಸೇವೆಗಳನ್ನು ಪಡೆಯಲು ತೊಂದರೆಯಾಯಿತು.

Latest Videos
Follow Us:
Download App:
  • android
  • ios