ಹೀಗೆ ಆಫರ್ ನೀಡುವ ಸಾಲಿನಲ್ಲಿ ಇದೀಗ ಏರ್'ಸೆಲ್ ಕೂಡಾ ಸೇರಿಕೊಂಡಿದೆ. ಉಚಿತ ಕರೆ ಹಾಗೂ ಡೇಟಾ ಪ್ಯಾಕ್'ನ 'RC 14' ಮತ್ತು 'RC 249' ಎಂಬ ಎರಡು ಆಫರ್'ಗಳನ್ನು ಇದು ತನ್ನ ಗ್ರಾಹಕರಿಗೆ ನೀಡಲಿದೆ.  ಈ ಆಫರ್'ನಿಂದ ದೇಶದ ಯಾವುದೇ ಮೂಲೆಯಲ್ಲಿದ್ದರೂ, ಯಾವುದೇ ನೆಟ್ವರ್ಕ್'ಗೂ ಕರೆ ಮಾಡಬಹುದಾಗಿದೆ. RC 14 ಆಫರ್ ಮೂಲಕ ಯಾವುದೇ ಒಬ್ಬ ಗ್ರಾಹಕ ದೇಶದ ಯಾವುದೇ ಮೊಬೈಲ್ ನೆಟ್ವರ್ಕ್'ಗೆ ಅನ್'ಲಿಮಿಟೆಡ್ ಲೋಕಲ್ ಹಾಗೂ ಎಸ್'ಟಿ'ಡಿ ಕರೆ ಮಾಡಬಹುದಾಗಿದೆ. ಈ ಆಫರ್ ಒಂದು ದಿನಕ್ಕೆ ಅನ್ವಯಿಸುತ್ತದೆ.

ಮುಂಬೈ(ಡಿ.15): ರಿಲಾಯನ್ಸ್ ಜಿಯೋ ತನ್ನ ಉಚಿತ ಕರೆ ಹಾಗೂ ಅನ್'ಲಿಮಿಟೆಡ್ ಆಫರ್'ನಿಂದ ಟೆಲಿಕಾಂ ಕ್ಷೇತ್ರದಲ್ಲೇ ಸಂಚಲನ ಮೂಡಿಸಿದೆ. ಇದನ್ನು ಕಂಡ ಏರ್'ಟೆಲ್, ಐಡಿಯಾ, ವೊಡಾಫೋನ್ ಮೊದಲಾದ ಕಂಪೆನಿಗಳು ತಾವು ಕೂಡಾ ಏನೂ ಕಮ್ಮಿ ಇಲ್ಲ ಎನ್ನುವಂತೆ ತನ್ನ ಬಳಕೆದಾರರಿಗೆ ಉತ್ತಮವಾದ ಆಫರ್'ಗಳನ್ನು ನೀಡಲಾರಂಭಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗೆ ಆಫರ್ ನೀಡುವ ಸಾಲಿನಲ್ಲಿ ಇದೀಗ ಏರ್'ಸೆಲ್ ಕೂಡಾ ಸೇರಿಕೊಂಡಿದೆ. ಉಚಿತ ಕರೆ ಹಾಗೂ ಡೇಟಾ ಪ್ಯಾಕ್'ನ 'RC 14' ಮತ್ತು 'RC 249' ಎಂಬ ಎರಡು ಆಫರ್'ಗಳನ್ನು ಇದು ತನ್ನ ಗ್ರಾಹಕರಿಗೆ ನೀಡಲಿದೆ. ಈ ಆಫರ್'ನಿಂದ ದೇಶದ ಯಾವುದೇ ಮೂಲೆಯಲ್ಲಿದ್ದರೂ, ಯಾವುದೇ ನೆಟ್ವರ್ಕ್'ಗೂ ಕರೆ ಮಾಡಬಹುದಾಗಿದೆ. RC 14 ಆಫರ್ ಮೂಲಕ ಯಾವುದೇ ಒಬ್ಬ ಗ್ರಾಹಕ ದೇಶದ ಯಾವುದೇ ಮೊಬೈಲ್ ನೆಟ್ವರ್ಕ್'ಗೆ ಅನ್'ಲಿಮಿಟೆಡ್ ಲೋಕಲ್ ಹಾಗೂ ಎಸ್'ಟಿ'ಡಿ ಕರೆ ಮಾಡಬಹುದಾಗಿದೆ. ಈ ಆಫರ್ ಒಂದು ದಿನಕ್ಕೆ ಅನ್ವಯಿಸುತ್ತದೆ.

ಇದರ ಮತ್ತೊಂದು ಆಫರ್ 'RC 249' ಮೂಲಕ ಬಳಕೆದಾರರಿಗೆ 28 ದಿನಗಳ ಕಾಲ 'ಅನ್'ಲಿಮಿಟೆಡ್ ಕಾಲ್ ಹಾಗೂ ಅನ್'ಲಿಮಿಟೆಡ್ ಡೇಟಾ ಬಳಸುವ ಅವಕಾಶವಿದೆ. ರಿಚಾರ್ಜ್ ಮಾಡಿ ಈ ಆಫರ್ ಹಾಕಿಸಿಕೊಳ್ಳುವುದರಿಂದ ದೇಶದ ಯಾವುದೇ ಮೊಬೈಲ್ ನೆಟ್ವರ್ಕ್'ಗೂ ಉಚಿತ ಹಾಗೂ ಮಿತಿ ಇಲ್ಲದೆ ಲೋಕಲ್ ಹಾಗೂ STD ಕರೆ ಮಾಡಬಹುದಾಗಿದೆ.

ಇದರೊಂದಿಗೆ 4G ಮೊಬೈಲ್ ಹೊಂದಿರುವ ತನ್ನ ಗ್ರಾಹಕರಿಗೆ 1.5 ಜಿಬಿ ಹೆಚ್ಚುವರಿ ಡೇಟಾವನ್ನೂ ಉಚಿತವಾಗಿ ನೀಡಲಿದೆ.