Asianet Suvarna News Asianet Suvarna News

ಚಂದ್ರಯಾನ-3ಗೆ ಇಸ್ರೋ ಸಿದ್ಧತೆ!

ಚಂದ್ರಯಾನ-3ಗೆ ಇಸ್ರೋ ಸಿದ್ಧತೆ!| ಜಪಾನ್‌ನ ಜೆಎಎಕ್ಸ್‌ಎ ಜೊತೆ ಐದು ವರ್ಷ ಒಪ್ಪಂದ| 3ನೇ ಯಾನದ ವೇಳೆ ಕಲ್ಲು, ಮಣ್ಣು ಭೂಮಿಗೆ

After Chandrayaan 2 ISRO planning for Chandrayaan 3
Author
Bangalore, First Published Jul 25, 2019, 9:09 AM IST

ತಿರುವನಂತಪುರಂ[ಜು.25]: ಚಂದ್ರಯಾನ-2 ನೌಕೆಯನ್ನು ಕಕ್ಷೆಗೆ ಸೇರಿಸಿ, ಅದನ್ನು ಚಂದ್ರನ ಮೇಲೆ ಇಳಿಸುವ ತವಕದಲ್ಲಿರುವ ಇಸ್ರೋ, ಇದೇ ವೇಳೆ ಮೂರನೇ ಚಂದ್ರಯಾನಕ್ಕೂ ಸದ್ದಿಲ್ಲದೇ ಸಿದ್ಧತೆ ಆರಂಭಿಸಿದೆ ಎನ್ನಲಾಗಿದೆ.

ಮೊದಲ ಚಂದ್ರಯಾನದಲ್ಲಿ ಲ್ಯಾಂಡರ್‌ ಅನ್ನು ಯಶಸ್ವಿಯಾಗಿದ್ದ ಇಳಿಸಿದ್ದ ಇಸ್ರೋ, ಎರಡನೇ ಚಂದ್ರಯಾನದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಸಾಫ್ಟ್‌ಲ್ಯಾಂಡ್‌ ಮಾಡುವ ಯೋಜನೆ ರೂಪಿಸಿಕೊಂಡಿದೆ. ಜೊತೆಗೆ ಇದುವರೆಗೆ ಯಾವುದೇ ದೇಶವೂ ಹೋಗದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಸಾಹಸ ಮಾಡುತ್ತಿದೆ.

ಹೀಗೆ ಚಂದ್ರಯಾನ 2 ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾದಲ್ಲಿ, ದಕ್ಷಿಣ ಧ್ರುವ ಪ್ರದೇಶದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿ ಚಂದ್ರಯಾನ 3 ಯೋಜನೆ ಜಾರಿಗೆ ಇಸ್ರೋ ನಿರ್ಧರಿಸಿದೆ. ಈ ಯೋಜನೆಯಲ್ಲಿ ಇಸ್ರೋ ಜೊತೆಗೆ ಜಪಾನ್‌ನ ಬಾಹ್ಯಾಕಾಶ ಸಂಸ್ಥೆಯಾದ ಜಾಕ್ಸಾ ಕೂಡಾ ಕೈಜೋಡಿಸಲಿದೆ. ಚಂದ್ರಯಾನ 3ದಲ್ಲಿ ಚಂದ್ರನ ಧ್ರುವ ಪ್ರದೇಶದಲ್ಲಿನ ಕಲ್ಲು ಮತ್ತು ಮಣ್ಣನ್ನು ಭೂಮಿಗೆ ತರುವ ಗುರಿಯನ್ನು ಇಸ್ರೋ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆಯಡಿ ರಾಕೆಟ್‌ ಮತ್ತು ರೋವರ್‌ ಅನ್ನು ಜಪಾನ್‌ ನೀಡಲಿದ್ದರೆ, ಲ್ಯಾಂಡರ್‌ ಅನ್ನು ಇಸ್ರೋ ಒದಗಿಸಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2024ರಲ್ಲಿ ಈ ಉಡ್ಡಯನ ನಡೆಯಲಿದೆ.

2022ಕ್ಕೆ ಮಾನವ ಸಹಿತ ಗಗನಯಾನ ಯೋಜನೆಯನ್ನು ಇಸ್ರೋ ಈಗಾಗಲೇ ಘೋಷಿಸಿದೆ.

Follow Us:
Download App:
  • android
  • ios