ಪ್ರಸ್ತುತ ದೇಶದಾದ್ಯಂತ 40 ಕೋಟಿಯಷ್ಟು ಆಧಾರ್ ಸಂಖ್ಯೆಗಳನ್ನು ಈಗಾಗಲೇ ಬ್ಯಾಂಕ್ ಅಕೌಂಟ್ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು,
ನವದೆಹಲಿ(ಡಿ.24): ಕೇಂದ್ರ ಸರ್ಕಾರವು ಕೂಡ ಪರಿಪೂರ್ಣ ಕ್ಯಾಶ್ ಲೆಸ್ ವ್ಯವಹಾರವನ್ನು ಸಾರ್ವಜನಿಕರಿಗೆ ಲಭ್ಯವಾಗಿಸಲು ಮಹತ್ತರ ಹೆಜ್ಜೆಯನ್ನಿಟ್ಟಿದೆ. ನಾಗರಿಕರು ಕೇವಲ ತಮ್ಮ ಆಧಾರ್ ಸಂಖ್ಯೆಯನ್ನು ಹೊಂದಿದ್ದರೆ ಸಾಕು. ಡೆಬಿಟ್ ಕಾರ್ಡ್, ವಿಸಾ ಮುಂತಾದ ಆನ್'ಲೈನ್ ಪಾವತಿ ಕಾರ್ಡ್ ಇಲ್ಲದಿದ್ದರೂ ಎಲ್ಲಿಂದ ಬೇಕಾದರೂ ತಮ್ಮ ಹಣಕಾಸು ವ್ಯವಹಾರವನ್ನು ಮಾಡಿಕೊಳ್ಳಬಹುದು. ಇದು ಹೇಗೆ ಅಂತೀರ ಈ ವರದಿ ಓದಿ.
ವರ್ತಕರು ಮೊದಲು ಸ್ಪಾರ್ಟ್ ಕಾರ್ಡ್'ಗಳಲ್ಲಿ ಪ್ಲೇಸ್ಟೋರ್ ಮೂಲಕ 'ಆಧಾರ್ ಪೇಮೆಂಟ್ ಆ್ಯಪ್ ('Aadhaar Payment App') ಅನ್ನು ಡೌನ್'ಲೋಡ್ ಮಾಡಿಕೊಳ್ಳಬೇಕು. ನಂತರ ಇದನ್ನು ಬಯೋ ಮೀಟರ್ ರೀಡರ್'ಗೆ ಸಂಪರ್ಕ ಕಲ್ಪಿಸಬೇಕು. ಸಾರ್ವಜನಿಕರು ವಹಿವಾಟು ನಡೆಸುವಾಗ ತಮ್ಮ ಬೆರಳ ಗುರುತನ್ನು ಬಯೋಮೆಟ್ರಿಕ್'ನಲ್ಲಿ ಒತ್ತಿದರೆ. ಅದೇ ಪಾಸ್'ವರ್ಡ್ ಆಗಿ ನೀವು ಯಾವ ಬ್ಯಾಂಕ್'ನಲ್ಲಿ ಆಧಾರ್ ಮೂಲಕ ಅಕೌಂಟ್ ಹೊಂದಿದ್ದೀರೋ ಅಲ್ಲಿ ತಮ್ಮ ಹಣ ಕಡಿತಗೊಳ್ಳುತ್ತದೆ.
2 ಸಾವಿರ ರೂ.ಗೆ ಬಯೋಮೆಟ್ರಿಕ್ ರೀಡರ್ ಲಭ್ಯ
2 ಸಾವಿರ ರೂಗಳಿಗೆ ಬಯೋಮೆಟ್ರಿಕ್ ರೀಡರ್ ಲಭ್ಯವಾಗಲಿದ್ದು, ವರ್ತಕರು ಇದನ್ನು ಖರೀದಿಸಿ ತಮ್ಮ ವಹಿವಾಟನ್ನು ಇನ್ನಷ್ಟು ಸುಲಭವಾಗಿಸಿಕೊಳ್ಳಬಹುದು. ಪ್ರಸ್ತುತ ದೇಶದಾದ್ಯಂತ 40 ಕೋಟಿಯಷ್ಟು ಆಧಾರ್ ಸಂಖ್ಯೆಗಳನ್ನು ಈಗಾಗಲೇ ಬ್ಯಾಂಕ್ ಅಕೌಂಟ್ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, 2017 ಮಾರ್ಚ್ ವೇಳೆಗೆ ದೇಶದ ಎಲ್ಲರಿಗೂ ಈ ವ್ಯವಸ್ಥೆ ಸಿಗುವಂತೆ ಮಾಡಲಾಗುತ್ತದೆ. ಈ ಸೌಲಭ್ಯದಿಂದ ಗ್ರಾಮೀಣ ಪ್ರದೇಶದ ಜನರು, ಅವಿದ್ಯಾವಂತರು ಸಹ ಪ್ರಯೋಜನ ಪಡೆದುಕೊಳ್ಳಬಹುದು.
ಆಧಾರ್, ನ್ಯಾಷನಲ್ ಪೇಮಂಟ್ಸ್ ಕಾರ್ಪೋರೇಷನ್ ಸಹಯೋಗದೊಂದಿಗೆ ಐಡಿಎಫ್'ಸಿ ಬ್ಯಾಂಕ್ ಈ ಆ್ಯಪ್'ಅನ್ನು ಅಭಿವೃದ್ಧಿ ಪಡಿಸಿದೆ. ದೇಶದ 125 ಜನಸಂಖ್ಯೆಗೆ 5 ಕೋಟಿ ವರ್ತಕರಿದ್ದಾರೆ. ಎಲ್ಲ ವರ್ತಕರು ಇದನ್ನು ಖರೀದಿಸಿದರೆ ಡಿಜಿಟಲ್ ವ್ಯವಹಾರಕ್ಕೆ ಹೊಸ ಸ್ವರೂಪ ಬಂದಂತಾಗುತ್ತದೆ.
ಅಂದ ಹಾಗೆ ಈ ಆ್ಯಪ್ ಬಿಡುಗಡೆಯಾಗೋದು ಡಿ.25 ರಂದು .
ಹೇಗೆ ಕಾರ್ಯನಿರ್ವಹಿಸುತ್ತೆ?
- ವ್ಯಾಪಾರಿಗಳು ಌಪ್ ಡೌನ್ಲೋಡ್ ಮಾಡಿಕೊಂಡರೆ ಸಾಕು
- ಗ್ರಾಹಕರು ಌಪ್ನಲ್ಲಿ ತಮ್ಮ ಆಧಾರ್ ನಂಬರ್ ಹಾಕಿದರೆ ಪಾವತಿ
- ಆಧಾರ್ ನಂಬರ್ ಹಾಕಿದ ತಕ್ಷಣ ನಿಮ್ಮ ಬ್ಯಾಂಕ್ನ ಲಿಂಕ್ ಸಿಗುತ್ತೆ
- ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ವ್ಯಾಪಾರಿಗೆ ಸಿಗಲಿದೆ ಹಣ
- ಬಯೋಮೆಟ್ರಿಕ್ ಯಂತ್ರದಲ್ಲಿ ಹೆಬ್ಬರಳಿನ ಗುರುತೇ ಪಾಸ್ವಾರ್ಡ್
- ಕೇಂದ್ರ ಸರ್ಕಾರದಿಂದಲೇ ಸಿದ್ಧವಾಗುತ್ತಿದೆ ಆಧಾರ್ ಌಪ್
- ಯಾವುದೇ ಕಾರ್ಡ್, ಫೋನ್ ಇಲ್ಲದೆ ಮಾಡಬಹುದು ವ್ಯವಹಾರ
