ಮೊಬೈಲ್ ಬ್ಯಾಂಕಿಂಗ್ ಮಾಡುವವರಿಗೆ ಕಿವಿಮಾತು
-ಮೊಬೈಲಿನಲ್ಲಿ ನಿಮ್ಮ ಆತ್ಮವೇ ಅಡಗಿದೆ ಎಂಬ ರೀತಿ ಯಾವತ್ತೂ ಸುರಕ್ಷಿತ ಜಾಗದಲ್ಲಿ ಇರಿಸಿ. ಅದು ನಿಮ್ಮ ವೈಯಕ್ತಿಕ ಆಸ್ತಿ ಎಂಬ ಜವಾಬ್ದಾರಿ ತಲೆಯಲ್ಲಿರಲಿ.
-ಬ್ಯಾಂಕ್ ಖಾತೆಗೆ ಬಲಿಷ್ಠವಾದ ಪಾಸ್‌ವರ್ಡನ್ನೇ ಆರಿಸಿಕೊಳ್ಳಿ. ಸುಲಭವಾಗಿ ಊಹಿಸಬಹುದಾದ ಹೆಸರು, ಅಂಕಿ ಇತ್ಯಾದಿಗಳನ್ನು ಪಾಸ್‌ವರ್ಡ್ ಆಗಿ ರೂಪಿಸಬೇಡಿ. ಅಂಕಿಗಳು, ಚಿಹ್ನೆಗಳು, ಕ್ಯಾಪಿಟಲ್ ಅಕ್ಷರ ಇತ್ಯಾದಿಗಳ ಸಮ್ಮಿಲಿತ ಪಾಸ್‌ವರ್ಡ್ ಬಲಿಷ್ಠವಾಗಿರುತ್ತದೆ.
-ವಿನಾ ಕಾರಣ ಯಾವುದೋ ವೆಬ್‌ಸೈಟ್ ಅಥವಾ ಆ್ಯಪ್‌ಗೋಸ್ಕರ ನಿಮ್ಮ ಲಾಗಿನ್ ಮಾಹಿತಿ, ಬ್ಯಾಂಕಿಂಗ್ ಸಂಖ್ಯೆಗಳ ಮಾಹಿತಿ ಕೊಡಬೇಡಿ. ಅದು ಸುರಕ್ಷಿತವಲ್ಲ. ಅಂತಹ ಜಾಲಗಳಿಗೆ ಬಲಿ ಬೀಳದಿರಿ.
-ಮೊಬೈಲ್ ಬ್ಯಾಂಕಿಂಗ್ ಆಪ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಂತಹ ನಂಬಿಕಾರ್ಹ ಆಪ್ ಸ್ಟೋರ್ ಅಥವಾ ನಿಮ್ಮ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್ ಮಾಡುವುದು ಸುರಕ್ಷಿತ.
-ಭದ್ರತಾ ಕಾರಣಕ್ಕೋಸ್ಕರ ಆಗಿಂದಾಗ್ಗೆ ಆಪ್‌ಗಳನ್ನು ಅಪ್‌ಡೇಟ್ ಮಾಡುತ್ತಲೇ ಇರಿ. ಇದು ನವೀನ ಮೋಸಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಆಪ್ ಸನ್ನದ್ಧವಾಗಿರಲು ಸಹಕಾರಿ.
-ನಿಮ್ಮ ಮಾಹಿತಿಯ ರಕ್ಷಣೆಗೆ ಆಟೋ ಲಾಕ್ ಆಯ್ಕೆ ಜಾಗೃತವಾಗಿರಿಸಿ.
