ಬೆಂಗಳೂರು(ಜೂ.17): ಲಕ್ಸುರಿ ಕಾರುಗಳ ಪೈಕಿ ರೇಂಜ್ ರೋವರ್ ಭಾರತದಲ್ಲಿ ಹೆಚ್ಚು ಜನಪ್ರೀಯವಾಗಿದೆ. ಇದೀಗ ಎಸ್‌ಯುವಿ ಹಾಗೂ ದುಬಾರಿ ಎರಡು ಕಾರುಗಳು ಜೂನ್.28ಕ್ಕೆ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ನೂತನ ರೇಜ್ ರೋವರ್ ಹಾಗೂ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ ಕಾರು ಹಲವು ಫೀಚರ್‌ಗಳನ್ನ ನೀಡಿದೆ. 8 ಸ್ವೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ ಆಲ್ ವೀಲ್ ಡ್ರೈವ್ ಫೀಚರ್ ಲಭ್ಯವಿದೆ.

ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಎರಡು ಟಚ್ ಸ್ಕ್ರೀನ್ ಡಿಸ್‌ಪ್ಲೆ, ನೀಡಲಾಗಿದೆ. ವಿನ್ಯಾಸದಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ. ಮುಂಭಾಗದ ಬಂಪರ್ ಹಾಗೂ ಗ್ರಿಲ್ ಹೊಸ ವಿನ್ಯಾಸದಲ್ಲಿ ಆಕರ್ಷಕವಾಗಿದೆ.

ಬಲಿಷ್ಠ ಹಾಗೂ ಶಕ್ತಿಯುತ ಇಂಜಿನ್ ಜೊತೆಗೆ ಗರಿಷ್ಠ ಸುರಕ್ಷತೆಯನ್ನು ನೀಡಿದೆ. ರೇಂಜ್ ರೋವರ್ ಎಸ್‌ಯುವಿ ಬೆಲೆ 99.48 ಲಕ್ಷ(ಎಕ್ಸ್ ಶೋರೂಮ್) ಇನ್ನು ರೇಂಜ್ ರೋವರ್ ಎಸ್‌ಯುವಿ ಸ್ಪೋರ್ಟ್ ಕಾರಿನ ಬೆಲೆ 1.74 ಕೋಟಿ(ಎಕ್ಸ್ ಶೋರೂಮ್)