ಹುಂಡೈ ಇಲೈಟ್ ಐ-20 ಪೆಟ್ರೋಲ್ ಕಾರ್ ನಲ್ಲಿ ಒಂದು ಸುತ್ತು!

2018 Hyundai Elite i20 Petrol Automatic: Test Review
Highlights

1.2 ಲೀಟರ್ ಪೆಟ್ರೋಲ್ ಇಂಜಿನ್ ಜತೆಗೆ 4 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಒಳಗೊಂಡಿರುವ ಹೊಸ ಹುಂಡೈ ಇ ಲೈಟ್ ಐ 20  ಕಾರ್ ನಲ್ಲಿ ಒಂದು ರೌಂಡ್ ಹಾಕಿದರೆ ಹೇಗಿರುತ್ತದೆ? ಉತ್ತರ ಇಲ್ಲಿದೆ. 

1.2 ಲೀಟರ್ ಪೆಟ್ರೋಲ್ ಇಂಜಿನ್ ಜತೆಗೆ 4 ಸ್ಪೀಡ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಒಳಗೊಂಡಿರುವ ಹೊಸ ಹುಂಡೈ ಇಲೈಟ್ ಐ-20  ಕಾರ್ ನಲ್ಲಿ ಒಂದು ರೌಂಡ್ ಹಾಕಿದರೆ ಹೇಗಿರುತ್ತದೆ? ಉತ್ತರ ಇಲ್ಲಿದೆ. ನಿಮ್ಮ ಬಜೆಟ್ ವ್ಯಾಪ್ತಿಯಲ್ಲೇ ದೊರೆಯುವ ಕಾರು ಪರಿಸರ ಸ್ನೇಹಿಯಾಗಿದ್ದು ಇದರ ಹಲವಾರು ವಿಶೇಷತೆಗಳನ್ನು ಗಳನ್ನು ನೀವು ತಿಳಿದುಕೊಳ್ಳಲೇಬೇಕು.

ನಿಮ್ಮ ಬಜೆಜ್ ವ್ಯಾಪ್ತಿಯಲ್ಲಿ ದೊರೆಯುವ ಕಾರು ಅತ್ಯುತ್ತಮ ಮೈಲೇಜ್ ನೀಡಲಿದೆ. ಟೆಸ್ಟ್ ಸಮಯದಲ್ಲಿ ಲೀಟರ್ ಪೆಟ್ರೋಲ್‌ ಗೆ  12.5 ಕಿ ಮಿ ಮೈಲೇಜ್ ನೀಡಿದರೆ ಹೆದ್ದಾರಿಯಲ್ಲಿ 16 ಕಿ ಮೀ ನೀಡಿದೆ.  1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಇಂಜಿನ್ ಸ್ಮೂತ್ ಆದ ಕ್ಲಚ್ ಅನುಭವವನ್ನು ನಿಮ್ಮದಾಗಿಸುತ್ತದೆ. ಎರಡು ವಿಭಾಗದಲ್ಲಿ ಕಾರು ಕೊಳ್ಳುವ ಅವಕಾಶವಿದ್ದು ಸಾಮಾನ್ಯ ಮ್ಯಾಗ್ನಾಕ್ಕೆ ಎಕ್ಸ್ ಶೋ ರೂಂ ದರ 7.5 ಲಕ್ಷ ರು. ಆದರೆ ಅತ್ಯಾಧುನಿಕ ಎಲ್ಲ ಸೌಲಭ್ಯ ಒಳಗೊಂಡಿರುವ ಆಸ್ತಾಕ್ಕೆ 8.16 ಲಕ್ಷ ರು. ನಿಗದಿ ಮಾಡಲಾಗಿದೆ. ಸದ್ಯ ಪೆಟ್ರೋಲ್ ಮಾದರಿಯ ಎಂಜಿನ್ ನಲ್ಲಿ ಮಾತ್ರ ಕಾರು ಲಭ್ಯವಿದೆ.

1.2 ಕಪ್ಪಾ ಪೆಟ್ರೋಲ್ ಇಂಜಿನ್ 2500 ರಿಂದ 4000 ಆರ್ ಪಿ ಎಂ ಶಕ್ತಿ ಹೊಂದಿದ್ದು ನಗರ ಮತ್ತು ಹೆದ್ದಾರಿ ಎರಡಕ್ಕೂ ಅನುಕೂಲವಾಗುವಂತೆ ಸಿದ್ಧಮಾಡಲಾಗಿದೆ. ಇನ್ನು ಓವರ್ ಟೇಕ್ ಸಮಯದಲ್ಲಿಯೂ ಮಾಹಿತಿ ನೀಡುವಂತೆ ಇದ್ದು ಮ್ಯಾನುವಲ್ ಸಿಸ್ಟಮ್ ಗೆ ಬದಲಾಯಿಸಿಕೊಂಡರೆ ಮತ್ತಷ್ಟು ಅನುಕುಲವಾಗುವುದು.


 
ನಗರದ ನಿವಾಸಿಗಳಿಗೆ, ಪ್ರತಿದಿನ ಕಚೇರಿಗೆ ಕಾರ್ ಬಳಸುವವರಿಗೆ ಪ್ರಿಯವಾಗುವಂತೆ ಕಾರ್ ಡಿಸೈನ್ ಮಾಡಲಾಗಿದ್ದು ಇಂದೇ ಒಂದು ಟೆಸ್ಟ್ ಡ್ರೈವ್ ಮಾಡಲಡ್ಡಿಯಿಲ್ಲ.

loader