2018ರ ನೂತನ ಹೊಂಡಾ ಆಕ್ಟೀವಾ ಸ್ಕೂಟರ್ 125 ಲಾಂಚ್! ಬೆಲೆ ಏಷ್ಟು?

First Published 4, Jul 2018, 7:03 PM IST
2018 Honda Activa 125 Launched at Rs 59,621
Highlights

ಭಾರತದಲ್ಲಿ ಜನಪ್ರೀಯ ಸ್ಕೂಟರ್ ಹೊಂಡಾ ಆಕ್ಟೀವಾ ಇದೀಗ ಹೊಸ ಫೀಚರ್‌ಗಳೊಂದಿಗೆ ಮತ್ತೆ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. 2018ರ ನೂತನ ಆಕ್ಟೀವಾ 125 ಲಾಂಚ್ ಆಗಿದೆ. ಇದರ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.

ಬೆಂಗಳೂರು(ಜು.04): ಭಾರತದ ಸ್ಕೂಟರ್ ಮಾರುಕಟ್ಟೆಯನ್ನ ಆಕ್ರಮಿಸಿಕೊಂಡಿರುವ ಹೊಂಡಾ ಆಕ್ಟೀವಾ ಇದೀಗ 2018ರ ನೂತನ ಆಕ್ಟೀವ್ 125 ಸ್ಕೂಟರ್ ಲಾಂಚ್ ಮಾಡಿದೆ. ಹೆಚ್ಚುವರಿ ಫೀಚರ್ಸ್ ಹಾಗೂ ಹೊಸ ಕಲರ್‌ಗಳಲ್ಲಿ ನೂತನ ಆಕ್ಟೀವಾ ಸ್ಕೂಟರ್ ಗ್ರಾಹಕಲಿಗೆ ಸಿಗಲಿದೆ.

ನೂತನ ಹೊಂಡಾ ಆಕ್ಟೀವಾ 125 ಸ್ಕೂಟರ್ ಬೆಲೆ 59,621(ಎಕ್ಸ್ ಶೋರೂಂ) ಇದು ಹಿಂದಿನ ಆಕ್ಟೀವಾ 125 ಸ್ಕೂಟರ್‌ಗಿಂತ 2000 ರೂಪಾಯಿ ಹೆಚ್ಚು ಬೆಲೆ ತರೆಬೇಕಾಗಿದೆ. ಆದರೆ ಇದಕ್ಕೆ ತಕ್ಕಂತೆ ಆಲೋಯ್ ವೀಲ್ಸ್, ಡ್ರಮ್ ಹಾಗೂ ಡಿಸ್ಕ್ ಸೌಲಭ್ಯಗಳನ್ನ ನೂತನ ಆಕ್ಟೀವ್ 125 ಸ್ಕೂಟರ್‌ನಲ್ಲಿ ನೀಡಲಾಗಿದೆ.
 

ಎಲ್ಇಡಿ ಹೆಡ್‌ಲೈಟ್ಸ್, ಫೋರ್ ಇನ್ ಒನ್ ಇಗ್ನಿನೀಷನ್, ಸೀಟು ತೆರೆಯಲು ಹೊಸ ಬಟನ್, ಇಕೋ ಸ್ವೀಡ್ ಇಂಡಿಕೇಟರ್ ಹಾಗೂ ಡಿಎಲ್‌ಎಕ್ಸ್ ಡಿಸ್ಕ್ ಬ್ರೇಕ್ ಕೂಡ ಈ ನೂತನ ಆಕ್ಟೀವಾ 125 ಸ್ಕೋಟರ್ ವಿಶೇಷತೆ.

124.9 ಸಿಸಿ ಇಂಜಿನ್ ಹೊಂದಿರುವ ನೂತನ ಆಕ್ಟೀವಾ, ಸಿಂಗಲ್ ಸಿಲಿಂಡರ್ ಹಾಗೂ ಫೋರ್ ಸ್ಟ್ರೋಕ್ ಇಂಜಿನ್ ಹೊಂದಿದೆ. ಹೀಗಾಗಿ 8 ಬಿಹೆಚ್‌ಪಿ ಪವರ್ ಹಾಗೂ 10.55 ಎನ್‌ಎಮ್ ಟಾರ್ಕ್ಯೂ ಹೊಂದಿದೆ. ಜೊತೆಗೆ ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್(ಸಿಬಿಎಸ್) ಹೊಂದಿದೆ.

loader